ಹೊಸೂರ: ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸಲು ಮನವಿ

0
10
loading...

ಬೈಲಹೊಂಗಲ,14: ಸಮೀಪದ ಹೊಸೂರ ಗ್ರಾಮದಲ್ಲಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸಬೇಕೆಂದು ಹೆಸ್ಕಾಂ ಉಪವಿಭಾಗದ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರರಿಗೆ ಹೊಸೂರ ಗ್ರಾಮಸ್ತರು ಮನವಿ ಅರ್ಪಿಸಿದರು.

ಬೈಲಹೊಂಗಲ ವಿಧಾನಸಭಾ ವ್ಯಾಪ್ತಿಗೆ ಒಳಪಡುವ ಸವದತ್ತಿ ತಾಲೂಕಿನ ಕೊನೆಯ ಹಳ್ಳಿಯಾದ ಹೊಸೂರ ಗ್ರಾಮಕ್ಕೆ ಸದ್ಯ ಮಲ್ಲೂರ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಪೂರೈಕೆ ಆಗುತ್ತಿದೆ. ಸುಮಾರು 45 ವರ್ಷಗಳ ಹಿಂದೆ ನಿರ್ಮಿತವಾದ ವಿದ್ಯುತ್ ವಿತರಣಾ ಕೇಂದ್ರ 33 ಕೆ.ವಿ. ಸಾಮರ್ಥ್ಯ ಹೊಂದಿದೆ. 12 ಹಳ್ಳಿಗಳಿಗೆ ವಿದ್ಯುತ್ ಪೂರೈಕೆ ಮಾಡುತ್ತಿದೆ. ಅಂದಿನ ವಿದ್ಯುತ್ ಬಳಕೆಯನ್ನು ಆಧರಿಸಿ ಮಲ್ಲೂರ ಗ್ರಾಮದಲ್ಲಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸಲಾಗಿತ್ತು. ಆದರೆ ಈಗ ವಿದ್ಯುತ್ ಬಳಕೆ ಹೆಚ್ಚಾಗಿರುವದರಿಂದ ಮಲ್ಲೂರ ವಿದ್ಯುತ್ ವಿತರಣಾ ಕೇಂದ್ರದಲ್ಲಿ  ಪದೇ ಪದೇ ತಾಂತ್ರಿಕ ಸಮಸ್ಯೆ ಎದುರಾಗುತ್ತಿದೆ. ಹೀಗಾಗಿ ಹೊಸೂರಿನಲ್ಲಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸಿ ಸಮಸ್ಯೆ ಬಗೆಹರಿಸಬೇಕೆಂದು ಮನವಿ ಮಾಡಿದರು. ಹೊಸೂರ ಗ್ರಾಮದಲ್ಲಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸುವದರಿಂದ ಮಲ್ಲೂರ ಕೇಂದ್ರಕ್ಕೆ ಆಗುವ ಭಾರವನ್ನು ಕಡಿಮೆ ಮಾಡಬಹುದೆಂದು ತಿಳಿಸಿದರು. ರೈತರಿಗೆ, ಕೇಂದ್ರದ ಸಿಬ್ಬಂದಿಗೆ ಆಗುವ ತೊಂದರೆ ತಪ್ಪಿಸಬಹುದಾಗಿದೆ ಎಂದು ತಿಳಿ ಹೇಳಿದರು. ಗಣ್ಯ ಮಹ್ಮದಸಾಬ ನದಾಫ, ರಾಜು ಸಂಗಣ್ಣವರ, ಸುರೇಶ ವಿವೇಕಿ, ಶ್ರೀಕಾಂತ ಶಿರಹಟ್ಟಿ ಹಾಗೂ ಅನೇಕರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here