508 ಜನರಿಗೆ ಪಿಂಚಣಿ ಮಂಜೂರು

0
33
loading...

ರಾಮದುರ್ಗ 26: ತಾಲೂಕಿನ 4 ಹೋಬಳಿ ಮಟ್ಟದಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ ಜೂನ ತಿಂಗಳಲ್ಲಿ ನಡೆಸಿದ ಪಿಂಚಣಿ ಅದಾಲತ್ನಲ್ಲಿ ಅರ್ಜಿ ಸಲ್ಲಿಸಿದ್ದ 956 ಜನರಲ್ಲಿ 508 ಜನರಿಗೆ ವಿವಿಧ ಪಿಂಚಣಿ ಮಂಜೂರು ಮಾಡಲಾಗಿದೆ ಎಂದು ತಹಶೀಲ್ದಾರ ಟಿ. ವಿ. ದಾಸರ ತಿಳಿಸಿದ್ದಾರೆ.

ಪಿಂಚಣಿ ಅದಾಲತ್ನಲ್ಲಿ ಹೋಬಳಿವಾರು ಅರ್ಜಿ ಸಲ್ಲಿಸಿದ ಮತ್ತು ಮಂಜೂರಾದ ಪಂಚಣಿದಾರರ ಮಾಹಿತಿ ಇಂತಿದೆ. ನಿರ್ಗತಿಕ ವಿಧವಾ ವೇತನ: ಕೆ. ಚಂದರಗಿ, 17 ಜನ ಅರ್ಜಿಸಲ್ಲಿಸಿದ್ದು  6 ಜನರಿಗೆ ಮಂಜೂರಾತಿ ನೀಡಿದೆ. ಸುರೇಬಾನ: 50 ಜನ ಅರ್ಜಿ ಸಲ್ಲಿಸಿದ್ದು 25 ಜನರಿಗೆ ಮಂಜೂರಾತಿ ನೀಡಿದೆ. ಮುದಕವಿ : 45 ಜನ ಅರ್ಜಿ ಸಲ್ಲಿಸಿದ್ದು 12 ಜನರಿಗೆ ಮಂಜೂರಾತಿ ನೀಡಿದೆ. ಕಟಕೋಳ : 73 ಜನ ಅರ್ಜಿ ಸಲ್ಲಿಸಿದ್ದು 38 ಜನರಿಗೆ ಮಂಜೂರಾತಿ ನೀಡಿದೆ.

ಸಂದ್ಯಾ ಸುರಕ್ಷಾ ಯೋಜನೆ : ಕೆ. ಚಂದರಗಿ 39 ಜನ ಅರ್ಜಿ ಸಲ್ಲಿಸಿದ್ದು 14 ಜನರಿಗೆ ಮಂಜೂರಾತಿ ನೀಡಿದೆ. ಸುರೇಬಾನ : 270 ಜನ ಅರ್ಜಿ ಸಲ್ಲಿಸಿದ್ದು 50 ಜನರಿಗೆ ಮಂಜೂರಾತಿ ನೀಡಿದೆ. ಮುದಕವಿ: 173 ಜನ ಅರ್ಜಿ ಸಲ್ಲಿಸಿದ್ದು 54 ಜನರಿಗೆ ಮಂಜೂರಾತಿ ನೀಡಿದೆ. ಕಟಕೋಳ: 149 ಜನ ಅರ್ಜಿ ಸಲ್ಲಿಸಿದ್ದು 65 ಜನರಿಗೆ ಮಂಜೂರಾತಿ ನೀಡಿದೆ.

ಅಂಗವಿಕಲ ( ರೂ. 400): ಕೆ. ಚಂದರಗಿ ಇಬ್ಬರು ಅರ್ಜಿ ಸಲ್ಲಿಸಿದ್ದು ಇಬ್ಬರಿಗೂ ಮಂಜೂರಾತಿ ನೀಡಿದೆ. ಸುರೇಬಾನ : 11 ಜನ ಅರ್ಜಿ ಸಲ್ಲಿಸಿದ್ದು 4 ಜನರಿಗೆ ಮಂಜೂರಾತಿ ನೀಡಿದೆ. ಮುದಕವಿ: 21 ಜನ ಅರ್ಜಿ ಸಲ್ಲಿಸಿದ್ದು 3 ಜನರಿಗೆ ಮಂಜೂರಾತಿ ನೀಡಿದೆ. ಕಟಕೋಳ: 42 ಜನ ಅರ್ಜಿ ಸಲ್ಲಿಸಿದ್ದು 10 ಜನರಿಗೆ ಮಂಜೂರಾತಿ ನೀಡಿದೆ.

ಅಂಗವಿಕಲ ( ರೂ. 1000) ಸುರೇಬಾನ : 48 ಜನ ಅರ್ಜಿ ಸಲ್ಲಿಸಿದ್ದು 6 ಜನರಿಗೆ ಮಂಜೂರಾತಿ ನೀಡಿದೆ. ಮುದಕವಿ: 9 ಜನ ಅರ್ಜಿ ಸಲ್ಲಿಸಿದ್ದು ಒಬ್ಬರಿಗೆ ಮಂಜೂರಾತಿ ನೀಡಿದೆ. ಕಟಕೋಳ : 7 ಜನ ಅರ್ಜಿ ಸಲ್ಲಿಸಿದ್ದು 3 ಜನರಿಗೆ ಮಂಜೂರಾತಿ ನೀಡಲಾಗಿದೆ. ತಾಲೂಕಿನಲ್ಲಿ ಸಂದ್ಯಾ ಸುರಕ್ಷಾ ಯೋಜನೆಯಡಿ 272, ನಿರ್ಗತಿಕ ವಿಧವಾ ವೇತನ 157 ಹಾಗೂ ಅಂಗವಿಕಲರಿಗೆ 79 ಜನರಿಗೆ ಜೂನ ತಿಂಗಳಲ್ಲಿ ನಡೆಸಿದ ಪಿಂಚಣಿ ಅದಾಲತ್ನಲ್ಲಿ ಮಂಜೂರಾತಿ ನೀಡಲಾಗಿದೆ ಎಂದು ತಹಶೀಲ್ದಾರ ಟಿ. ವಿ. ದಾಸರ ತಿಳಿಸಿದರು.

loading...

LEAVE A REPLY

Please enter your comment!
Please enter your name here