ಆರೋಗ್ಯಕರ ಪರಿಸರ ನಿರ್ಮಿಸಲು ಅನಸೂಯಾ ಮನವಿ

0
18
loading...

ಉಗರಗೋಳ(ತಾ.ಸವದತ್ತಿ) 9- ರೈತರು ಪರಿಸರ ಸಂರಕ್ಷಣೆ ಮಾಡುವ ಮೂಲಕ ಆರೋಗ್ಯಕರ ವಾತಾವರಣ ನಿರ್ಮಿಸಲು ಶ್ರಮಿಸಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಸೂಯಾ ಕೇರಿ ಹೇಳಿದರು.

ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದಲ್ಲಿ ಸಾಮಾಜಿಕ ಅರಣ್ಯ ವಲಯದ ಆಶ್ರಯದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ತ್ರೀಯ ಉದ್ಯೌಗ ಖಾತ್ರಿ ಯೋಜನೆಯಡಿ ಗ್ರಾಮದ ರೈತರಿಗೆ ಸಾಗವಾನಿ, ಸೀತಾಫಲ, ಕರಿ ಬೇವು ಸೇರಿದಂತೆ ವಿವಿಧ ಬಗೆಯ ಸಸಿಗಳನ್ನು ವಿತರಿಸಿ ಅವರು ಮಾತನಾಡಿದರು.

ಪರಿಸರ ನಾಶದಿಂದ ಪರಿಸರದಲ್ಲಿ ಅಸಮತೋಲನ ಉಂಟಾಗಿ ಹಲವಾರು ರೋಗ ರುಜಿನಗಳು ಬರುತ್ತಿವೆ. ಆದ್ದರಿಂದ ಪ್ರತಿಯೊಬ್ಬ ರೈತರು ತಮ್ಮ ಸುತ್ತಲಿನ ಪರಿಸರದಲ್ಲಿ ಹಾಗೂ ತಮ್ಮ ಹೊಲಗಳಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವ ಮೂಲಕ ಪರಿಸರವನ್ನು ಸಂರಕ್ಷಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ವಲಯ ಅರಣ್ಯಾಧಿಕಾರಿ ಎಲ್.ಜಿ.ನಾದ ಅವರು ಮಾತನಾಡಿ, ರೈತರು ಹಾಗೂ ಗ್ರಾಮಸ್ಥರು ತಮ್ಮ ಸ್ವಾರ್ಥಕ್ಕಾಗಿ ಪರಿಸರ ನಾಶ ಮಾಡುವದು ವಿಷಾಧನೀಯ. ಇದರ ಬದಲಾಗಿ ಪರಿಸರವನ್ನು ಉಳಿಸಿ ಬೆಳೆಸುವತ್ತ ಗಮನ ಹರಿಸಬೇಕು ಎಂದು ತಿಳಿಸಿದರು.

ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಎಫ್.ಜಿ.ಚಿನ್ನಣ್ಣವರ, ವೈ.ವೈ.ಕಾಳಪ್ಪನವರ, ಶಿವಾನಂದ ಹಾಲೊಳ್ಳಿ, ನಿಂಗಪ್ಪ ಸಂಬರಗಿ, ಬಸಪ್ಪ ಹನಸಿ, ಉಮೇಶ ಸಂಬರಗಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಉಗರಗೋಳ ಹಾಗೂ ಹರಲಾಪುರ ಗ್ರಾಮದ ರೈತರಿಗೆ ಸಸಿಗಳನ್ನು ವಿತರಿಸಲಾಯಿತು

loading...

LEAVE A REPLY

Please enter your comment!
Please enter your name here