ಕಕ್ಕೇರಿ ಜಿಪಂ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆ

0
25
loading...

ಖಾನಾಪುರ 5: ಲೋಕಸಭಾ ಚುನಾವಣೆ ಯಾವುದೇ ಸಂದರ್ಭದಲ್ಲಾದರೂ ಎದುರಾಗಬಹುದು ಆದ್ದರಿಂದ ಬಿಜೆಪಿಯ ಎಲ್ಲ ಸಕ್ರೀಯ ಕಾರ್ಯಕರ್ತರು ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಪರ ಪ್ರಚಾರ ಕೈಗೊಂಡು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಈ ಮೂಲಕ ನಮ್ಮ ದೇಶದ ಯುವ ಜನತೆಯ ಸ್ಪೂರ್ತಿಯಾದ ನರೇಂದ್ರ ಮೋದಿಯವರನ್ನು ಪ್ರಧಾನ ಮಂತ್ರಿ ಮಾಡಲು ಪಣ ತೊಡಬೇಕೆಂದು ಪಕ್ಷದ ನೂತನ ತಾಲೂಕಾ ಅಧ್ಯಕ್ಷ ಜ್ಞಾನದೇವ ಟಕ್ಕೇಕರ  ಕರೆ ನೀಡಿದರು.

ಕಕ್ಕೇರಿ ಜಿಲ್ಲಾ ಪಂಚಾಯತ ಮತ ಕ್ಷೇತ್ರದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಪಕ್ಷದ ಖಾನಾಪುರ ತಾಲೂಕಾ ಘಟಕವನ್ನು ಪುನರ್ರಚನೆ ಮಾಡಲಾಗುತ್ತಿದ್ದು ಪ್ರತಿಯೊಂದು ಜಿಲ್ಲಾ ಪಂಚಾಯತ ಮತ ಕ್ಷೇತ್ರದಿಂದ ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿಯ ಆಯ್ಕೆಮಾಡಬೇಕೆಂದು ಕಾರ್ಯಕರ್ತರಿಗೆ ತಿಳಿಸಿದರು. ಅಲ್ಲದೆ ಈ ಹಿಂದೆ ಮುನಿಸಿಕೊಂಡು ಪಕ್ಷದ ಚಟುವಟಿಕೆಗಳಿಂದ ದೊರ ಉಳಿದಿರುವ ಎಲ್ಲ ಕಾರ್ಯಕರ್ತರನ್ನು ಮರಳಿ ಪಕ್ಷದ ಚಟುವಟಿಕೆಗಳಿಗೆ ಕರೆದು ಕೊಂಡು ಬರಬೇಕು. ಪಕ್ಷಕ್ಕೆ ಹೊಸ ಉತ್ಸಾಹಿ ಯುವಕರನ್ನು ಬರಮಾಡಿಕೊಂಡು ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತ ಸದಸ್ಯರಾದ ಮೋಹನ ಕದಂ, ದುರ್ಗಪ್ಪ ಮಾದಿಗರ, ಮಹಬೂಬ ಸುಬಾನಿ ನದಾಫ, ಮಾರುತಿ ಕಮತಗಿ, ರವಿ ಬನೋಶಿ ಮುಂತಾದವರು ಉಪಸ್ಥಿತರಿದ್ದರು. ರಾಜು ರಫಾಟಿ ನಿರೂಪಿಸಿದರು ಮಹಾಬಳೇಶ್ವರ ಚವಲಗಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ಈಶ್ವರ ಶಿರಗಾಪೂರ ಮಠ ವಂದಿಸಿದರು.

loading...

LEAVE A REPLY

Please enter your comment!
Please enter your name here