ಕುಂದಗೋಳ: ಅವ್ಯವಸ್ಥೆಯ ಆಗರವಾಗಿರುವ ಬಸ್ ನಿಲ್ದಾಣ

0
27
loading...

ಕುಂದಗೋಳ: ಪಟ್ಟಣದ ಕೇಂಧ್ರ ಸ್ಥಾನದಲ್ಲಿರುವ ಬಸ್ ನಿಲ್ದಾಣದೊಳಗೆ ಡಾಂಬರೀಕರಣ ಕೆಲವು ಸೌಕರ್ಯಗಳು ಇಲ್ಲದ್ದರಿಂದ ನಾಗರೀಕರು ಬಸ್ ಹತ್ತಬೇಕಾದರೆ ಇಳಿಯ ಬೇಕಾದರೆ ಹರಸಹಾಸ ಪಡುವಂತಾ ಪರಸ್ಥಿತಿ ನಿರ್ಮಾಣವಾಗಿದೆ.

ಕಳೆದ ಏಳೆಂಟು ದಿನಗಳಿಂದ ಸುರಿಯುತ್ತಿರುವ ಮಳೆಗೆ ಬಸ್ ನಿಲ್ದಾನದೊಳಗೆ ಇರುವ ಆವರಣದ ತುಂಬೆಲ್ಲಾ ಗುಂಡಿಗಳು ನಿರ್ಮಾಣವಾಗಿದ್ದರಿಂದ ಪ್ರಯಾಣಿಕರು ಬಹಳ ಹುಷಾರಿಯಿಂದ ಬಸ್ ಏರಬೇಕು ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲಾ ಈ ಬಸ್ ನಿಲ್ದಾಣ ಶಿಥಿಲಾವ್ಯವಸ್ಥೆಯಲ್ಲಿದ್ದಾಗ ಇದರ ದುರಸ್ಥಿಗೆ ಶ್ರಮಿಸಿ ಕಟ್ಟಡವನ್ನು ಅಲಂಕಾರಗೊಳಿಸಿರುವ ಹುಬ್ಬಳ್ಳಿ ವಿಭಾಗದ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಬಸ್ ನಿಲ್ದಾಣದೊಳಗೆ ಸಂಪೂರ್ಣ ಹದಗೆಟ್ಟು ಪ್ರಯಾಣಿಕರಿಗೆ ನಿತ್ಯ ತೊಂದರೆ ಮಾಡುತ್ತಿರುವ ಈ ತಗ್ಗು ಗುಂಡಿಗಳ ಆವರಣವನ್ನು ಇದುವರಿಗೂ ಡಾಂಬರೀಕರಣ ಮಾಡದಿರುವದು ಸಾರ್ವಜನಿಕರಲ್ಲಿ ಸಂಶಯಕ್ಕೆಡೆಮಾಡಿಕೊಟ್ಟಿದೆ.

            ಈ ಬಸ್ ನಿಲ್ದಾಣದಲ್ಲಿ ಪ್ರತಿನಿತ್ಯ ಪ್ರಯಾಣಿಸುವ ಪ್ರಯಾಣಿಕರಿಗೆ ಸಿಗಬೇಕಿರುವ ಮೂಲಭೂತ ಸೌಕರ್ಯಗಳೇ ಇಲ್ಲವಾದಂತಾಗಿದೆ  ಈ ನಿಲ್ದಾಣದಲ್ಲಿ ಗುಂಡಿಗಳ ದುರಸ್ಥಿಕಾರ್ಯದ ಜೊತೆಗೆ ಯಾವ ಸಮಯದಲ್ಲಿ ಯಾವ ಗ್ರಾಮಕ್ಕೆ ಬಸ್ ಬರುತ್ತದೆ ಹೋಗುತ್ತದೆ ಎಂಬ ಮಾಹಿತಿ ಒದಗಿಸುವ ವೇಳಾಪಟ್ಟಿಯೇ ಇಲ್ಲ.ಕುಡಿಯಲು ನೀರಿನ  ವ್ಯವಸ್ಥೆಯೂ ಇಲ್ಲ.ಇದ್ದ ಒಂದು ನಳವನ್ನು ಕೆ.ಎಸ್.ಆರ್.ಟಿ.ಸಿ ಹೊಟೆಲನವರು ಬಳಸಿಕೊಳ್ಳುತ್ತಿರುವದರಿಂದ ಸಾರ್ವಜನಿಕರಿಗೆ ನೀರು ಕುಡಿಯಬೇಕಾದರೆ ಹೊಟೇಲನ್ನೆ ಅವಲಂಬಿಸಬೇಕಾಗಿದೆ. ನಿಲ್ದಾಣದೊಳಗೆ ಇರುವ ಶೌಚಾಲಯ ಸ್ವಚ್ಛತೆ ಇಲ್ಲದೇ ಗಬ್ಬೆದ್ದು ನಾರುತ್ತಿದೆ. ಇದಕ್ಕೆ ಸರಿಯಾದ ನಿರ್ವಹಣೇಯೇ ಇಲ್ಲ.ಬಸ್ ನಿಲ್ದಾಣನದ ಸುತ್ತಮುತ್ತ ಇದೀಗ ಕೆಸರು ಗದ್ದೆಗಳಿಂದ ನಿರ್ಮಾಣವಾಗಿದ್ದು, ಪ್ರಯಾಣಿಕರು ಹತ್ತಬೇಕಾದರೆ ಹಾಗೂ ಇಳಿಯಬೇಕಾದರೆ ಬಹಳಷ್ಟು ಪರದಾಡಭೇಕಾಗಿದೆ. ಹೀಗಾಗಿ ಕೆಸರಿನಲ್ಲಿ ನಡೆದಾಡಿಕೊಂಡು ಹೋಗುವುದು ಪ್ರಯಾಣಿಕರಿಗೆ ವಿದ್ಯಾರ್ಥಿಗಳಿಗೆ ಬಹಳಷ್ಟು ದುಸ್ತರವಾಗಿದೆ.

            ಈ ಹಿಂದೆ   ಕಳಪೆ ಮಟ್ಟದ ಡಾಂಬರೀಕರಣದಿಂಧ ನಿಲ್ದಾಣವು ಇದೀಗ ಎಲ್ಲಿಬೇಕೆಂದಲ್ಲಿ ತಗ್ಗು ಗುಂಡೆಗಳಿಂಧ ಕೂಡಿದೆ.ಹೀಗಾಗಿ ಮಳೇಯ ನೀರು ನಿಂತಲ್ಲೇ ನಿಲ್ಲತೊಡಗಿದೆ.ಹಾಗಾಗಿ ಸಂಜೆಯಾಯಿತೆಂದರೆ ಸೊಳ್ಳೇಗಳ ಕಾಟ ವೀಪರೀತವಾಗಿ ಪ್ರಯಾಣಿಕರು ಬಹಳಷ್ಟು ಸಂಕಷ್ಟ ಎದರಿಸುವಂತಾಗಿದೆ

            ಹಿಂದಿನ ಬಿಜೆಪಿ ಸರ್ಕಾರ ಹಳೆಯ ಬಸ್ ನಿಲ್ದಾಣದ ಅಭಿವೃದ್ದಿಗೆ ಸಾಕಷ್ಟು ಅನುದಾನವನ್ನು ಒದಗಿಸಿಕೊಟ್ಟರೂ ಕೆಲವು ಭ್ರಷ್ಟ ಅಧಿಕಾರಿಗಳ ಕೈಚಳಕದಿಂದ ಈ ಬಸ್ ನಿಲ್ದಾಣ ಸಂಪೂರ್ಣ ಅಭಿವೃದ್ದಿಯಾಗದೇ ಅತಂತ್ರ ಸ್ಥಿತಿಯಲ್ಲಿದೆ   ಬಸ್ ನಿಲ್ದಾಣದ ಅವ್ಯವಸ್ಥೆಯ ಕುರಿತು ಇಲ್ಲಿಯ ಸಾರಿಗೆ ಅಧಿಕಾರಿಗಳನ್ನು ಸಂಪರ್ಕಿಸಿದರೆ ಈ ದುರಸ್ಥಿ ಕಾಮಗಾರಿಯ ಬಗ್ಗೆ ನಮಗೆ ಹೆಚ್ಚಿಗೆ ಏನು ಗೊತ್ತಿಲ್ಲಾ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ತಿಳಿದುಕೊಳ್ಳಿ ಎಂದು ಬೇಜವಾಬ್ದಾರಿಯ ಉತ್ತರವನ್ನು ನೀಡುತ್ತಾರೆ.

   ಈ ಬಸ್ ನಿಲ್ದಾಣದ ಹಿಂದೆ ಅಂತೂ ಹಣ್ಣು ಮಾರುವವರು ಜಾಗೆಯನ್ನು ಖರಿದಿ ಹಿಡಿದವರಂತೆ ಹಣ್ಣಿನ ಅಂಗಡಿಗಳನ್ನು ಹಚ್ಚಿಕೊಂಡು ಕುಳಿತುಕೊಳ್ಳುತ್ತಿರುವದರಿಂದ ಸಾರ್ವಜನಿಕರು ನೆಡೆದಾಡುವದೇ ಕಷ್ಟವಾಗುತ್ತಿದೆ.

            ಕುರಿತುಪಟ್ಟಣದಸಮಾಜಕಲ್ಯಾಣಸಂಘದಅದ್ಯಕ್ಷಬಸವರಾಜರೇವಡಿಗಾರಅವರನ್ನುನಿಲ್ದಾನದಅವ್ಯವಸ್ಥೆಯಕುರಿತುಮಾತನಾಡಿಸಿದಾಗಸರ್ಕಾರಗಳುಈಗಅಭಿವೃದ್ದಿಗೆಸಾಕಷ್ಟುಪ್ರಮಾಣದಲ್ಲಿಅನುದಾನನೀಡುತ್ತಿವೆಅದನ್ನುಸಮರ್ಪಕವಾಗಿಬಳಸಿಕೊಳ್ಳಲುಅಧಿಕಾರಿಗಳುಹಾಗೂಜನಪ್ರತಿನಿಧಿಗಳಲ್ಲಿಇಚ್ಛಾಶಕ್ತಿಯಕೊರತೆಕಂಡುಬರುತ್ತಿರುವದರಿಂದಕಾಮಗಾರಿಗಳುರೀತಿಪೂರ್ಣಗೊಳ್ಳದೆಅತಂತ್ರಸ್ಥಿತಿಯಲ್ಲಿನಿಲ್ಲುತ್ತಿವೆಇದಕ್ಕೆಅಧಿಕಾರಿಗಳನ್ನೇಹೊಣೆಗಾರರನ್ನಾಗಿಮಾಡಬೇಕುಕೂಡಲೇನಿಲ್ದಾಣದತಗ್ಗುದಿನ್ನೆಡಾಂಬರೀಕರಣಮಾಡಿಅಗತ್ಯವಾದಮೂಲಸೌಕರ್ಯಕಲ್ಪಿಸಿಸಾರ್ವಜನಿಕರಿಗೆಆಗುತ್ತಿರುವತೊಂದರೆಯನ್ನುತಪ್ಪಿಸುವಂತೆಒತ್ತಾಯಿಸಿದರು.

loading...

LEAVE A REPLY

Please enter your comment!
Please enter your name here