ಕುಂದಗೋಳ ತಾಲೂಕಿನಲ್ಲಿ ಬರವಿದ್ದರೂ ನೆರವಿಲ್ಲ … ಜಿಲ್ಲೆಯಲ್ಲಿ ಮೂರು ತಾಲೂಕುಗಳು ಮಾತ್ರ ಬರಪೀಡಿತ ಪಟ್ಟಿಗೆ

0
42
loading...

ಕುಂದಗೋಳ:  ರಾಜ್ಯದ ಬರಪೀಡಿತ 51 ತಾಲೂಕುಗಳ ಪೈಕಿ ಧಾರವಾಡ ಜಿಲ್ಲೆಯ ಮೂರು ತಾಲೂಕುಗಳನ್ನು  ಹೆಸರಿಸಲಾಗಿದೆ. ಆದರೆ ಸತತ  ಮೂರು ವರ್ಷಗಳ ಕಾಲ ಬರಗಾಲದ ಭವಣೆ ಅನುಭವಿಸುತ್ತಿರುವ ಕುಂದಗೋಳ ತಾಲೂಕಿನ  ಪ್ರಸ್ತಾಪವೇ ಇಲ್ಲದಿರುವುದು  ಜನತೆಯನ್ನು ಮತ್ತಷ್ಟು  ಆತಂಕ್ಕೀಡುಮಾಡಿದೆ.

ಜಿಲ್ಲೆಯ ಧಾರವಾಡ, ಹುಬ್ಬಳ್ಳಿ ಹಾಗೂ ಕಲಘಟಗಿ ತಾಲೂಕುಗಳು ರಾಜ್ಯ ಸರ್ಕಾರದ ಬರ ಘೋಷಣಾ ಪೀಡಿತ ಪ್ರದೇಶಗಳ ಪಟ್ಟಿಯಲ್ಲಿ  ಹೆಸರಿಸಿಕೊಂಡಿವೆ ಎಂದು ಗೊತ್ತಾಗಿದ್ದು, ತಾಲೂಕಿನ ಸಂಶಿ ಹಾಗೂ ಗುಡಗೇರಿ ಜಿಲ್ಲಾ ಪಂಚಾಯತಿಯ ಬಹುತೇಕ  ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತೀವ್ರ ಅಭಾವವಿದೆ. ಇಲ್ಲಿ ಇಗಲೂ ಹುಬ್ಬಳ್ಳಿಯಿಂದ  ಬರುವ ಟ್ಯಾಂಕರ್ ನೀರನ್ನೇ ಕುಡಿಯಬೇಕಾಗಿದೆ. ಜತೆಗೆ  ಇಲ್ಲಿನ ರೈತರು ಮುಂಗಾರು ಬಿತ್ತಣೆಯನ್ನೇ ಮಾಡಿಲ್ಲ. ಕೆಲವರು ಬಿತ್ತಿರುವರಾದರೂ  ಅದು  ಫಲ ಕೊಡುವ ಮಟ್ಟಕ್ಕಂತೂ ಇಲ್ಲ. ವಾಸ್ತವ ಪರಿಸ್ಥಿತಿ  ಹೀಗಿದ್ದಾಗ್ಯೂ  ಈ ಭಾಗದ  ಬಹುತೇಕ ಗ್ರಾಮಗಳು ಸಮೃದ್ದತೆಯಿಂದ  ಕೂಡಿವೆ  ಎಂಬ ಅಂಶ  ಬರ ಅಧ್ಯಯನದ  ದಾಖಲೆಗಳಲ್ಲಿ  ನಮೂದಾಗಿದೆಯಂತೆ  ಹಾಗಾಗಿ ಇಲ್ಲಿ ಬರದ ಸುಳಿವೇ ಇಲ್ಲವಂತೆ.

ಸಂಶಿ, ಪಶುಪತಿಹಾಳ, ಯರೇಬೂದಿಹಾಳ, ಹಿರೇಗುಂಜಳ, ಕೊಡ್ಲಿವಾಡ, ರೊಟ್ಟಿಗವಾಡ, ಚಾಕಲಬ್ಬಿ, ಯರಗುಪ್ಪಿ, ಮುಳ್ಳೊಳ್ಳಿ, ಯರಿನಾರಾಯಣಪೂರ, ಹಿರೇನರ್ತಿ, ಸಹಿತ 30 ಗ್ರಾಮಗಳ ರೈತರು ಇತೀಚೆಗೆ  ಬಿದ್ದ ಮಳೇಯಿಂದ ಸಂತಸಗೊಂಡಿರುವರಾದರೂ ತಮ್ಮ ಹೊಲದಲ್ಲಿ ಯಾವುದೇ ಬೇಳೆ ಬೆಳೆದಿಲ್ಲ. ಈ ಭಾಗದ ಬಹುತೇಕ ರೈತರ ಭೂಮಿಗಳು ಕರಲು ಇದ್ದು, ಮಳೆ ಅಲ್ಪ ಸ್ವಲ್ಪ ಬಂದರೆ ಬೆಳೆ, ಬೆಳೆಯಲು ಸಾಧ್ಯವೇ ಇಲ್ಲ. ಸದ್ಯ  ಬಿದ್ದಿರುವ ಮಳೆಗೆ ಭೂಮಿ ಹದಗೊಂಡಿದೆಯಾದರೂ ಯಾವ ಬೆಳೆಯನ್ನು  ಇದರಲ್ಲಿ   ಬಿತ್ತಬೇಕು ಎಂಬ ಚಿಂತೆಯಲ್ಲಿದ್ದಾರೆ.

ಮುಂಗಾರು ಹಂಗಾಮಿಗೆ ಶೇಂಗಾ, ಹೆಸರು, ಅಲಸಂದಿ ಸಹಿತ ಅನೇಕ ಬೆಳೆಗಳನ್ನು ಬೆಳೆಯಲಾಗುತ್ತಿತ್ತು.  ಪ್ರಮುಖವಾಗಿ ಮೆಣಸಿನಕಾಯಿ ಬೆಳೆ ಯದ್ದಂತೂ  ಭರಪೂರ ಲಾಭ ಬೆಳೆ.  ಆದರೀಗ  ಆ ವಾಣಿಜ್ಯ ಬೆಳೆಯ ಸುಳಿವೇ ಇಲ್ಲ.  ಹವಾಮಾನದ ವೈಪರಿತ್ಯಕ್ಕೆ  ಸಿಲುಕಿ ಮರಿಚಿಕೆಯಾಗಿದೆ. ಸದ್ಯ  ಈ ಬಾಗಕ್ಕೆ ಹೆಜ್ಜೆ ಇಟ್ಟರೆ ಬರ ದುತ್ತೆಂದು  ಮೈಮೇಲೆ ಎಗರಿದಂತಾಗುತ್ತದೆ.

ಸತತ  ಮುರು ವರ್ಷಗಳ ಬರಗಾಲದಿಂದಾಗಿ ಇಲ್ಲಿನ ಬಹುತೇಕ ರೈತರ ಸಾಲಗಳು ಮುಗಿಲೆತ್ತರಕ್ಕೆ ಜಿಗಿದೆವೆ. ಸಂಕಷ್ಟಗಳ ಮೇಲೆ ಸಂಕಷ್ಟ ಎದುರಿಸುತ್ತ ಹೇಗೋ ಜೀವನ ನಡೆಸುತ್ತಿರುವವರಿಗೆ ಸರ್ಕಾರದ ಯಾವುದೇ ಸೌಲಭ್ಯ  ಸಿಕ್ಕಿಲ್ಲ.  ಕಳೆದ ಎರಡು ವರ್ಷಗಳ ಹಿಂದೆ ಸುವರ್ಣ ಭೂಮಿಯ 10 ಸಾವೀರ ರೂ.ಸಹಾಯ ಧನ ಪಡೆದವರಿಗೆ ಬೆಳೇ ನಷ್ಟ ಪರಿಹಾರ ಸಿಕ್ಕಿಲ್ಲ. ಸದ್ಯ ಈ ಯೋಜನೆಯಿಂದ ಹೊರತಾಗಿರುವವರಿಗೆ ಮಾತ್ರ 2 ಸಾವೀರ ಪರಿಹಾರ ಧನ ಚೆಕ್ ವಿತರಿಸಲಾಗುತ್ತಿದೆ. ಇನ್ನು ಇಲ್ಲಿನ ಬಹುತೇಕ ಕೃಷಿ ಕೂಲಿ ಕಾರ್ಮಿಕರು ಬೇರಡೆ ಗುಳೇ ಹೋಗಿದ್ದು, ಅಲ್ಲಿಯೇ  ತಮ್ಮ ಜೀವನ ನಡೆಸುತ್ತಿದ್ದಾರೆ.

ಜನಪ್ರತಿನಿಧಿಗಳ ತಾತ್ಸಾರವೋ ಅಥವಾ ಅಧಿಕಾರಿಗಳು ಈ ಪ್ರದೇಶಗಳ ರೈತರ ಮೇಲಿನ  ತಾತ್ಸಾರವೋ ಗೊತ್ತಿಲ್ಲ. ಬಹುತೇಕ ಶೇ.75 ರಷ್ಟು ಬೆಳೆಯ ಕನಸು ಕಾಣುತ್ತಿರುವ ಕಲಘಟಗಿ, ಧಾರವಾಡ ಹಾಗೂ ಹುಬ್ಬಳ್ಳಿ ತಾಲೂಕು ಬರಪೀಡಿತ  ಪ್ರದೇಶಗಳ ಪಟ್ಟಿಯಲ್ಲಿವೆ.   ಆದರೆ ಸತತ 3 ವರ್ಷಗಳ ಕಾಲ ಬರ ಭವಣೆ ನೀಗಿಸಿಕೊಳ್ಳಲು ಪರದಾಡುತ್ತಿರುವ ಇಲ್ಲಿನ ರೈತರ ಸಂಕಷ್ಟ ವನ್ನು  ಯಾರೂ ಕೂಡ ಅರ್ಥ ಮಾಡಿಕೊಳ್ಳದಿರುವುದು  ಜನತೆಯ ಆಕ್ರೌಶಕ್ಕೆ ಕಾರಣವಾಗಿದೆ.

ಇಗಲಾದರೂಸರ್ಕಾರಬರಪಟ್ಟಿಯಲ್ಲಿಕುಂದಗೋಳ  ತಾಲೂಕನ್ನುಸೇರ್ಪಡೆಮಾಡಭೇಕು.ಬಗ್ಗೆ  ಕ್ಷೇತ್ರದಶಾಸಕರುಪ್ರಾಮಾಣಿಕಪ್ರಯತ್ನಮಾಡಬೇಕಿದೆ.ಇದ್ದೂಇಲ್ಲದಂತಾಗಿರುವಬೆಳೆಯವಾಸ್ತವ  ಪರಿಸ್ಥಿತಿಯನ್ನುಸಂಬಂಧಪಟ್ಟವರೂಇಗಲಾದರೂ  ಅರ್ಥೈಯಿಸಿಕೊಂಡಾರೆಯೇ  ಕಾದುನೋಡಬೇಕಿದೆ.

loading...

LEAVE A REPLY

Please enter your comment!
Please enter your name here