ಕೆಎಲ್ಇಯಿಂದ ವಿವೇಕಾನಂದ ರಥಯಾತ್ರೆಗೆ ಸ್ವಾಗತ

0
7
loading...

ಬೆಳಗಾವಿ 20-ಸ್ವಾಮಿ ವಿವೇಕಾನಂದ ಅವರ 150ನೇ ದಿನಾಚರಣೆ ಅಂಗವಾಗಿ ರಾಮಕೃಷ್ಣ ಮಿಶನ್ ಹಾಗೂ ರಾಜ್ಯ ಯುವಜನ ಮತ್ತು ಕ್ರೀಡಾ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾದ ರಥಯಾತ್ರೆಯನ್ನು ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀ ಯ ಸಂಶೋಧನಾ ಕೇಂದ್ರದ ಹತ್ತಿರ ಆಸ್ಪತ್ರೆ ವೈದ್ಯಕೀಯ ನಿರ್ದೇ ಶಕರಾದ ಡಾ. ಎಂ.ವಿ. ಜಾಲಿ, ರುದ್ರಾಕ್ಷಿ ಮಠದ ಶ್ರೀ ಸಿದ್ದರಾಮ ಸ್ವಾಮೀಜಿ, ಕಾರಂಜಿ ಮಠದ ಶ್ರೀ ಗುರುಸಿದ್ದ ಸ್ವಾಮಿಜಿ, ವಿಶ್ವವಿದ್ಯಾಲಯದ ಕುಲಪತಿ ಡಾ.ಸಿ.ಕೆ.ಕೊಕಾಟೆ, ಕುಲಸಚಿವ ಡಾ. ವಿ.ಡಿ.ಪಾಟೀಲ ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ಎಸ್.ಗೋಧಿ ಪುಷ್ಟಮಾಲೆಯನ್ನು ಹಾಕುವದರ ಮೂಲಕ  ಸ್ವಾಗತಿಸಿಕೊಂಡರು.

ಕೆಎಲ್ಇ ವಿಶ್ವವಿದ್ಯಾಲಯ, ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ, ಸುವರ್ಣ ಜೆಎನ್ಎಂಸಿ ಇವುಗಳು ಹಮ್ಮಿಕೊಂಡ ಸಮಾರಂಭದಲ್ಲಿ ಮಾತನಾಡಿದ ರಾಮಕೃಷ್ಣ ಮಠದ ಶ್ರೀ ಯುಕ್ತೆಶ್ವರಾನಂದ ಸ್ವಾಮಿಜಿ ಅವರು, ಪ್ರತಿಯೊ ಬ್ಬರಿಗೂ ಆ ಭಗವಂತ ಹೃದಯ ವೈಶಾಲ್ಯತೆ, ಬುದ್ದಿಮತ್ತೆಯುಳ್ಳ ತಲೆ ಮತ್ತು ಸುವರ್ಣ ಕೈಗಳನ್ನು ನೀಡಿದ್ದಾನೆ. ಇವುಗಳನ್ನು ಒಳ್ಳೆಯ ಕೃತ್ಯಕ್ಕೆ ಬಳಸಬೇಕೆ ವಿನಃ ದುಷ್ಕ್ಕತ್ಯಕ್ಕೆ ಅವು ಬಳಕೆಯಾಗಬಾರದು. ಇವು ಮಾನವನ ಜೀವನ ಮತ್ತು ಜೀವನದಲ್ಲಿ ಬರುವ ಪ್ರತಿಯೊಂದು ಸಮಸ್ಯೆಗಳನ್ನು ಎದುರಿಸುವ ಮತ್ತು ಜಯಿಸುವದಕ್ಕಾಗಿ ಸುವರ್ಣ ಅಸ್ತ್ತ್ರಗಳಾಗಬೇಕು ಎಂದು ಅವರಿಂದಿಲ್ಲಿ ಕರೆನೀಡಿದರು. ನಿತ್ಯ ಜೀವನದಲ್ಲಿ ಸಮಸ್ಯೆಗಳು ಸದಾ ಬಂದೆರಗುತ್ತವೆ. ಅವು ಗಳನ್ನು ಎದುರಿಸುವ ಶಕ್ತಿ ಮತ್ತು ಯುಕ್ತಿಯನ್ನು ನಾವು ಸರಿಯಾಗಿ ಬಳಸಿಕೊಳ್ಳಬೇಕಾಗಿದೆ. ಭಾರತೀಯರ ಹೃದಯ ವಿಶಾಲತೆಯಿಂದ ವಿಶ್ವವೇ ಅವರಿಗೆ ತಲೆಬಾಗುತ್ತಿದೆ. ಆದರೆ ನಾವೇ ನಮ್ಮ ಜನತೆಯ ಕುರಿತು ಕಾಳಜಿವಹಿಸುತ್ತಿಲ್ಲ. ಮರ್ಯಾದೆ ನೀಡುತ್ತಿಲ್ಲ ಎಂದು ವಿಷಾದಿಸಿದ ಅವರು, ದೇಶ ಮತ್ತು ಸಂಸ್ಕ್ಕತಿಯನ್ನು ಸದಾ ಗೌರವಿಸುತ್ತ. ಇನ್ನೊಬ್ಬರಿಗೆ ನೋವಾಗದಂತೆ ಸಹಜೀವಿಗಳಾಗಬೇಕು. ವಿವೇಕಾನಂದರ ಆದರ್ಶ ಮತ್ತು ತತ್ವಗಳನ್ನು ಯುವಕರು ಪಾಲಿಸಿ ಸಧೃಡ ದೇಶ ನಿರ್ಮಾಣದಲ್ಲಿ ತಲ್ಲೀಣರಾಗಬೇಕು. ಸುಶಿಕ್ಷಿತರ ರಾಷ್ಟ್ತ್ರವಾಗುವದರೊಂದಿಗೆ ನಾವೆಲ್ಲರೂ ಜಾಗೃತರಾಗಿ ರಾಷ್ಟ್ತ್ರ ಸೇವೆಗೆ ಕಂಕಣಬದ್ದರಾಗಬೇಕೆಂದರು.

ವಿಶ್ವವಿದ್ಯಾಲಯದ ಕುಲಪತಿ ಡಾ.ಸಿ.ಕೆ.ಕೊಕಾಟೆ ಮಾತನಾಡಿ, ದೇಶ ಮತ್ತು ಸಮಾಜದ ಕುರಿತು ಯೋಚಿಸುವ ಸ್ವಾಮೀಜಿಗಳ ಅಗತ್ಯತೆ ಇದೆ. ವಿವೇಕಾನಂದರು ತೋರಿದ ಮಾರ್ಗದರ್ಶನದಲ್ಲಿ ಸ್ವಾಮೀಜಿಗಳು ನಡೆದು ಯುವಕರಿಗೆ ಅದೇ ದಾರಿಯಲ್ಲಿ ನಡೆಯುವಂತೆ ಜಾಗೃತಿ ಮೂಡಿಸಬೇಕು. ಮತ್ತು ಪ್ರತಿಯೊಬ್ಬರೂ ಪ್ರತಿಜ್ಞೆ ಗೈಯಬೇಕು ಎಂದರು.

ಸಮಾರಂಭದಲ್ಲಿ ಶ್ರೀ ತತ್ವಿತ್ಕಾನಂದ ಸ್ವಾಮೀಜಿ ಸೇರಿದಂತೆ ನಗರದ ವಿವಿಧ ಶಾಲೆಯ ವಿದ್ಯಾರ್ಥಿಗಳು, ಹಾಗೂ ಸಾವಿರಾರು ಜನರು ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here