ಗಾಳಿ ಯಂತ್ರದ ರಭಸಕ್ಕೆ ಸಿಲುಕಿ ನಲಗುತ್ತಿರುವ ಅನ್ನದಾತ

0
31
loading...

ಕವಡೆಕಾಸಿನಕಿಮ್ಮತ್ತಿಗೆಕೃಷಿಭೂಮಿಮಾರುತ್ತಿರುವರೈತರು

ಕುಂದಗೋಳ:  ರೈತ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ ಎಂಬ  ಮಾತು ಜನನಿತ. ಈ ದೇಶದ ಬೆನ್ನೆಲವು ಆದ ರೈತನೀಗ ಕೃಷಿ ಕಡೆಗೆ ಒಲವು ತೋರುತ್ತಿಲ್ಲವೋ ಅಥವಾ ಪಾಕೃತಿಕ ವಿಕೋಪದ ವಿಷ ಚಕ್ರಕ್ಕೆ ಸಿಲುಕಿ ಒದ್ದಾಡುತ್ತಿದ್ದಾನೆಯೋ.. ಒಟ್ಟಾರೆ ಈ ಬೆಳವಣಿಗೆಯಲ್ಲಿ ಸಿಲುಕಿ  ಅನ್ನದಾತನೀಗ ತನ್ನ ಬೆಲೆ ಬಾಳುವ ಜಮೀನನ್ನು ಗಾಳಿ ಯಂತ್ರದ  ರಭಸಕ್ಕೆ  ಸಿಲುಕಿ ಕೈಗೆ ಬಂದಂತೆ  ಮಾರತೊಡಗಿದ್ದಾನೆ.

ತಾಲೂಕಿನಲ್ಲಿಯೇ ಮೆಣಸಿನಕಾಯಿ ಬೆಳೆಗೆ ಅತ್ಯಂತ ಫಲವತ್ತಾದ ಭೂಮಿ ಹೊಂದಿರುವ ಕಮಡೊಳ್ಳಿ, ತರ್ಲಘಟ್ಟ, ಹಿರೇಹರಕುಣಿ, ನೆಲಗುಡ್ಡ, ಕೊಪ್ಪ, ಇಂಗಳಗಿ,ಹಿರೇಬೂದಿಹಾಳ, ಯಲಿವಾಳ, ರಾಮನಕೊಪ್ಪ,ರಾಮಾಪೂರ,ಮತ್ತಿಗಟ್ಟಿ, ಬೆಟದೂರ ಸೇರಿದಂತೆ ಹಲವಾರು ಗ್ರಾಮಗಳ ರೈತರು ಪವನ ವಿದ್ಯುತ್ ಕಂಪನಿಗೆ ತಮ್ಮ ಕೋಟಿ ರೂ.ಬೆಲೆಬಾಳುವ ಜಮೀನನ್ನು  ಎಕರೆಗೆ ಕೇವಲ 6-7 ಲಕ್ಷ ರೂ.ಗಳಿಗೆ ಮಾರಾಟ ಮಾಡತೊಡಗಿದ್ದಾರೆ. ಹೀಗಾಗಿ ಸದ್ಯ ಈ ಪ್ರದೇಶದಲ್ಲಿ  300 ಕ್ಕೂ ಹೆಚ್ಚು ಗಾಳಿ ಯಂತ್ರಗಳು ಇಗಾಗಲೇ ಕೃಷಿ ಜಮೀನಿನಲ್ಲಿ ವಿದ್ಯುತ್ ಉತ್ಪಾದನೆ ಮಾಡತೊಡಗಿವೆ.

ಪಲವತ್ತಾದ ಭೂಮಿ: ಮೆಣಸಿನಕಾಯಿ ವಹಿವಾಟಿಗೆ ವಿಶ್ವದಲ್ಲಿಯೇ ಪ್ರಸಿದ್ದಿಯಾಗಿರುವ ಬ್ಯಾಡಗಿ ಮಾರುಕಟ್ಟೆಗೆ ಈ ಭಾಗದ ಮೆಣಸಿನಕಾಯಿಗಳೇ ಅಧಿಕ. ದ್ಯಾವನೂರ ಕಡ್ಡಿ ಮೆಣಸಿನಕಾಯಿ ರಾಷ್ಟ್ತ್ರದಲ್ಲಿಯೇ ಅತ್ಯಂತ  ರುಚಿಗೆ ಹೆಸರುವಾಸಿಯಾಗಿವೆ. ಹೆಸರು ಮಾತ್ರ ಬ್ಯಾಡಗಿ, ಮೆಣಸಿನಕಾಯಿ ಮಾತ್ರ ಇಲ್ಲಿಯದ್ದೇ. ಈ ಭೂಮಿ ಅತ್ಯಂತ ಫಲವತ್ತಾಗಿದೆ. ಎಕರೆಗೆ 7-8 ಕ್ವಿಂಟಾಲ್ ಬೆಳೆಯನ್ನು ಅತ್ಯಂತ ಸಲೀಸಾಗಿ ಬೆಳೆಯಬಹುದು.ಹಾಗಾಗಿ ವಾಣಿಜ್ಯ ಬೆಳೆಯಾದ ರೆಡ್ ಚಿಲ್ಲಿ, ಇಲ್ಲಿ ಅತ್ಯಂತ ಪ್ರಚಲಿತ. ಇತ್ತಿಚಿನ ದಿನಗಳಲ್ಲಿ ಈ ಬೆಳೆಗೆ ಹಲವಾರು ಕಂಟಕಗಳು ಎದುರಾಗಿವೆ.ಮಳೆಯ ಅಭಾವ, ಗಿಡಕ್ಕೆ ರೋಗಭಾದೆ. ಅದಕ್ಕಿಂತ ಹೆಚ್ಚಾಗಿ ಕುಸಿಯುತ್ತಿರುವ ದರ. ಹೀಗಾಗಿ ರೈತರು ಈ ಬಗ್ಗೆ ನಿರಾಸಕ್ತಿ ತೋರಿ ಪರ್ಯಾಯ ಬೆಳೆಗೂ ಮಾರುಹೋಗಿದ್ದಾರೆ. ಈ ಭಾಗದಲ್ಲಿ ಒಮ್ಮೆ ಬೆಳೆದರೆ ಮೂರು ವರ್ಷ ಕುಳಿತು ಒಂಡರು ಸಾಲದು. ಅಂತಹ ಬಂಗಾರದ ಭೂಮಿ ಹೊಂದಿರುವ ರೈತನಿಗ ಅದೇ ಜಮೀನನ್ನು ಬಿಕರಿಯಾಗಿ ಮಾರಾಟಕ್ಕಿಟ್ಟಿದ್ದಾನೆ.

ಉಂಡೂ ಹೋಯಿತೂ… ಕೊಂಡೂ ಒಯ್ಯತ್ತೇ: ಈ ಗಾಳಿ ಯಂತ್ರ ಸ್ಥಾಪನೆಗೆ  50 ಗುಂಠೆ  ಜಮೀನಿಗೆ (ಒಂದು ಪ್ಯಾನ್ ಸ್ಥಾಪನೆ) ಕೇವಲ 10 ಲಕ್ಷ .40 ಸಾವೀರ ರೂ.ಗೆ ಮಾರಾಟ ಮಾಡುವ ರೈತರಿಗೆ ಬಹಳಷ್ಟು ನಷ್ಟ. ಕೋಟಿ ರೂ, ಬೆಲೆಬಾಳುವ ಜಮೀನನ್ನು ಸಿಕ್ಕ ಬೆಲೆಗೆ ಮಾರಿ ಕೈ ತೊಳೆದುಕೊಳ್ಳತೊಡಗಿದ್ದಾರೆ. ಜತೆಗೆ ಇದರಿಂದ ಅಕ್ಕ,ಪಕ್ಕದ ರೈತರಿಗೂ ಪ್ಯಾನ್ನ ಗಿರ್ರಗಟ್ಟಲೇ ಶಬ್ದ ನಿದ್ದೇಗೆಡಿಸುವುದರ ಜತೆಗೆ  ಭೂಮಿಯ ತೇವಾಂಶವನ್ನು ಸಿಕ್ಕಾಪಟ್ಟೆ ಹಿರಿಕೊಳ್ಳತೊಡಗಿದೆ  ಇದರಿಂದ ಪಕ್ಕದ ಹೊಲದ ಬೆಳೆಯೂ ಸಹ ಬಾಡತೊಡಗಿದೆ.

ಈ ಬಗ್ಗೆ  ಪ್ರಜ್ಞಾವಂತ ರೈತರು  ಮಾತನಾಡದಂತಹ ಪರಿಸ್ಥಿತಿ ಎದುರಾಗಿದೆ.   ಸ್ವಂತ ಜಮೀನನ್ನು ನಾನು ಮಾರಿಕೊಳ್ಳುವುದರಲ್ಲಿ ತಪ್ಪೇನಿದೆ ? ಎಂದು ಪ್ರಶ್ನಿಸುವ ರೈತನಿಗೆ ತಿಳಿ ಹೇಳುವಂತಹ ಕಾರ್ಯ ಯಾರಿಂದಲೂ ಸಾದ್ಯವಾಗಿಲ್ಲ.

ದಲ್ಲಾಳಿಗಳ ಕಾರುಬಾರೂ: ಫಲವತ್ತಾದ ಭೂಮಿಯನ್ನು ಪವನ ವಿದ್ಯುತ್ ಕಂಪನಿಗಳಿಗೆ ಕೊಡಿಸಲು  ದಲ್ಲಾಳಿಗಳೇ ದಂಡೇ ಇದೆ. ರಾಮನಕೊಪ್ಪ, ಮತ್ತಿಗಟ್ಟಿ, ಇಂಗಳಗಿ, ಬೂದಿಹಾಳ, ಬೆಟದೂರ, ಯಲಿವಾಳ, ಕುಬಿಹಾಳ, ತರ್ಲಘಟ್ಟ, ಕಮಡೊಳ್ಳಿ, ಹಿರೇಹರಕುಣಿ, ಗುರುವಿನಹಳ್ಳಿ, ಕುಂಕೂರ, ಮಳಲಿ  ಗ್ರಾಮಗಳಲ್ಲಿ ಎನ್ಆರ್ಕೆ ಕಂಪನಿ ಗಾಳಿ ವಿದ್ಯುತ್ ಪ್ಯಾನ್ ಸ್ಥಾಪಿಸಲು ಇಗಾಗಲೇ 1 ಸಾವೀರ ಎಕರೇ ಭೂಮಿ ಖರಿದಿಸಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಇಗಾಗಲೇ ಇದರಲ್ಲಿ 600 ಪ್ಯಾನ್ಗಳು ತಲೆ ಎತ್ತಿವೆ. ಇವುಗಳ ಕೊಡುಕೊಳ್ಳುವಿಕೆಯ  ವ್ಯವಹಾರಕ್ಕೆ ದಲ್ಲಾಳಿಗಳ ದೊಡ್ಡ ದಂಡೇ ಇದ್ದು, ಕಂತಿನಂತೆ ನೀಡುವ ಹಣವನ್ನು ಅರ್ಧದಲ್ಲಿಯೇ ಯಾಮಾರಿಸಿದ ಪ್ರಕರಣಗಳೂ ಇದ್ದು, ಶಿಗ್ಗಾಂವಿ ತಾಲೂಕಿನ ಕೆಲವು ರೈತರು  ಎನ್ಆರ್ಕೆ ಕಂಪನಿ ವಿರುದ್ದ ನ್ಯಾಯಾಲಯದ ಮೆಟ್ಟಿಲೂ ಕೂಡ ಏರಿದ್ದಾರೆ.

ಒಟ್ಟಾರೆ ಈ ಗಾಳಿ ವಿದ್ಯುತ್ ಕಂಪನಿಗಳಿಂದ ಈ ಭಾಗದ ಫಲವತ್ತಾದ ಭೂಮಿಗೆ ಮಳೆ ಬೀಳುತ್ತಿಲ್ಲ. ಕೈಗೆ ಸಿಕ್ಕ ಬೆಲೆಯಲ್ಲಿ ಮಾರುವ ರೈತರು, ಮುಂದಿನ ಪೀಳಿಗೆಗೆ ಒಂದಿಂಚೂ ಭೂಮಿ ಇಲ್ಲದೇ ಮಾಡುತ್ತಿದ್ದಾನೆ. ಈ ಬಗ್ಗೆ ಕೆಲವರು ನೀಡುವ ಕಾರಣವೂ ವಿಚಿತ್ರವಾಗಿದೆ. ಮಳೇ ಇಲ್ಲ, ಬಂದರೂ ಬೆಳೆಗೆ ಸೂಕ್ತ ಬೆಲೆ ಇಲ್ಲ. ಹೀಗಾದರೆ ನಾವು ಬದುಕುವುದು ಹೇಗೆ ಎಂದು ಪ್ರಶ್ನಿಸಿತೊಡಗಿದ್ದಾರೆ.

ಪವನವಿದ್ಯುತ್ಕಂಪನಿಗಳುಭೂಮಿಕೊಳ್ಳಲುಗ್ರಾಮಲೆಕ್ಕಾಧಿಕಾರಿಗಳಿಂಧಹಿಡಿದುಇದಕ್ಕೆಸಂಬಂಧಪಡುವಎಲ್ಲಾತಾಲುಕಮಟ್ಟದಅಧಿಕಾರಿಗಳುಕೈಜೋಡಿಸತೊಡಗಿದ್ದಾರೆ.

loading...

LEAVE A REPLY

Please enter your comment!
Please enter your name here