ಗ್ರಾಮ ಪಂಚಾಯತ ಸಿಬ್ಬಂದಿಯ ನಿರ್ಲಕ್ಷ: ಹಗಲಲ್ಲೇ ಉರಿದ ಬೀದಿ ದೀಪ

0
22
loading...

ಖಾನಾಪುರ 2: ಗ್ರಾಮ ಪಂಚಾಯತ ಸಿಬ್ಬಂದಿಯ ನಿರ್ಲಕ್ಷದಿಂದಾಗಿ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಹಗಲು ಹೊತ್ತಿನಲ್ಲಿ ದೀಪಗಳು ಉರಿಯುತ್ತಿವೆ. ಇದರಿಂದ ಅನವಶ್ಯಕವಾಗಿ ವಿದ್ಯುಚ್ಛಕ್ತಿಯ ಪೋಲಾಗುತ್ತಿದ್ದು, ಗ್ರಾಮ ಪಂಚಾಯತಿಯ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಹಗಲು ಹೊತ್ತಿನಲ್ಲಿ ಉರಿಯುವ ದೀಪಗಳನ್ನು ಆರಿಸಲು ಕ್ರಮ ಜರುಗಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣ ಆಗ್ರಹಿಸಿದೆ.ತಾಲೂಕಿನ ಬೀಡಿ, ಕಸಮಳಗಿ, ಕೊಡಚವಾಡ, ಗಂದಿಗವಾಡ, ನಿಡಗಲ್, ದೇವಲತ್ತಿ, ಗುಂಡೇನಟ್ಟಿ ಹಾಗೂ ಹಲಕರ್ಣಿ ಗ್ರಾಮಗಳು ಸೇರಿದಂತೆ ಹಲವು ಗ್ರಾಮಗಳಲ್ಲಿ ಬೀದೀದೀಪಗಳು ಉರಿಯುತ್ತಿವೆ. ಇವುಗಳು ಹಗಲಿನಲ್ಲಿ ಉರಿಯುವುದರಿಂದ ವಿದ್ಯುತ್ ಬಿಲ್ ಹೆಚ್ಚಿಗೆ ಬರುತ್ತದೆ. ಇದರ ಹೊರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾರ್ವಜನಿಕರ ಮೇಲೆ ಬೀಳುತ್ತದೆ. ಹೀಗಾಗಿ ಬೀದೀದೀಪಗಳು ಅನವಶ್ಯಕವಾಗಿ ಉರಿಯುವುದನ್ನು ತಪ್ಪಿಸುವುದು ನಾಗರಿಕರ ಹೊಣೆಯೂ ಆಗಿದೆ. ಆದರೆ ಜನರು ಇದನ್ನು ನೋಡಿಯೂ ನೋಡದಂತೆ ವರ್ತಿಸುತ್ತಿದ್ದಾರೆ. ಜೊತೆಗೆ ಗ್ರಾಮ ಪಂಚಾಯತಿಯವರು ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ಕರವೇ ಕಾರ್ಯಕರ್ತರು ಆರೋಪ ಮಾಡಿದ್ದಾರೆ. ಕೂಡಲೇ ಇದನ್ನು ನಿಲ್ಲಿಸಬೇಕೆಂದು ಕರವೇ ಕಾರ್ಯಕರ್ತರಾದ ವಿಠ್ಠಲ ಹಿಂಡಲಕರ, ದಶರಥ ಬನೋಶಿ, ಆರೋಗ್ಯಪ್ಪ ಪಾದನಕಟ್ಟಿ, ಉದಯ ತೇಗೂರ ಹಾಗೂ  ಮತ್ತಿತರರು ಆಗ್ರಹಿಸಿದ್ದಾರೆ

 

loading...

LEAVE A REPLY

Please enter your comment!
Please enter your name here