ಚಾಲಕ, ನಿರ್ವಾಹಕನ ಅನುಚಿತ ವರ್ತನೆ : ವಿದ್ಯಾರ್ಥಿಗಳ ಪ್ರತಿಭಟನೆ

0
23
loading...

ಸಂಕೇಶ್ವರ : ಕಾಲೇಜ ವಿದ್ಯಾರ್ಥಿನಿಯೊರ್ವಳಿಗೆ ಸಾರಿಗೆ ಇಲಾಖೆಯ ಬಸ್ಸಿನ ಚಾಲಕ ಹಾಗೂ ನಿರ್ವಾಹಕ ಅನುಚಿತವಾಗಿ ವರ್ತಿಸಿದ ಘಟನೆಯನ್ನು ಖಂಡಿಸಿ ವಿದ್ಯಾರ್ಥಿನಿಯ ಪಾಲಕರು ಹಾಗೂ ಹಲವು ಸಂಘಟನೆಯ ಕಾರ್ಯಕರ್ತರು ಸಾರಿಗೆ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಬುಧವಾರ ಮದ್ಯಾಹ್ನ ನಗರದಲ್ಲಿ ವರದಿಯಾಗಿದೆ.

ಘಟನೆ ವಿವರ : ನಗರದದಿಂದ ಬೆಳಗಾವಿಯಲ್ಲಿರುವ ತನ್ನ ಕಾಲೇಜಿಗೆ ಹೊರಟಿದ್ದ ವಿದ್ಯಾರ್ಥಿನಿಯೊರ್ವಳು ನಗರದ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ದಿನ ನಿತ್ಯದಂತೆ ಬಸ್ಸಿನಲ್ಲಿ ಕುಳಿತುಕೊಳ್ಳುತಿದ್ದಂತೆ ಸಂಕೇಶ್ವರ ಘಟಕದ ಸಾರಿಗೆ ಬಸ್ಸಿನ ಚಾಲಕ ಹಾಗೂ ನಿರ್ವಾಹಕ ಇವರಿಬ್ಬರು ವಿದ್ಯಾರ್ಥಿನಿಗೆ ಪಾಸು ಇದ್ದವರನ್ನು ಸಾಗಿಸುವದಿಲ್ಲ ಬಸ್ಸಿನಿಂದ ಕೆಳಗಿಳಿಯುವಂತೆ ನಿಂದಿಸಿದ್ದಾರೆ. ಅಲ್ಲದೆ ಅವಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ.

ಈ ಘಟನೆಯಿಂದ ನೊಂದಿರುವ ವಿದ್ಯಾರ್ಥಿನಿಯು ತನ್ನ ಪಾಲಕರಿಗೆ ದೂರವಾಣಿ ಕರೆ ಮಾಡಿ ಘಟನೆಯ ವಿಷಯ ತಿಳಿಸಿದ್ದಾಳೆ. ಇದರಿಂದ ಕೊಪಿತಗೊಂಡ ವಿದ್ಯಾರ್ಥಿನಿಯ ಪಾಲಕರು ಹಾಗೂ ಹಲವು ಸಂಘಟನೆಯ ಹಲವಾರು ಕಾರ್ಯಕರ್ತರು ಬುಧವಾರ ದಿನದಂದು ನಗರದ ಸಾರಿಗೆ ಇಲಾಖೆಯ ಅಧಿಕಾರಿ ಕಚೇರಿಯ ಎದುರಿಗೆ ಜಮಾವಣೆಗೊಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರಹ್ನೀ ಹಿನ್ನೆಲೆ ಸಾರಿಗೆ ಅಧಿಕಾರಿಗಳು ಚಾಲಕ ನಿರ್ವಾವಾಹಕರಿಬ್ಬರಿಗೆ ಮೌಖಿಕವಾಗಿ ಸೂಚನೆ ನೀಡಿದ್ದಾರೆ.

ವಿದ್ಯಾರ್ಥಿಗಳಿಗೆ ಹಾಗೂ ನೌಕರಸ್ಥರಿಗೆ ಮಾಸಿಕ ಪಾಸು ನೀಡುವ ಸಾರಿಗೆ ಅಧಿಕಾರಿಗಳು ಮಾಸಿಕ ವೆಚ್ಚವನ್ನು ಭರಿಸಿಕೊಂಡಿರುತ್ತಾರೆ. ಆದರೆ ಬಸ್ಸಿನ ಚಾಲಕ ನಿರ್ವಾಹಕರು ಪಾಸು ಹೊಂದಿದವರನ್ನು ಬಸ್ಸಿನಲ್ಲಿ ಸಾಗಿಸಲು ನಿರಾಕರಿಸುತ್ತಾರೆ. ಈ ಹಿನ್ನೆಲೆ ಮಾಸಿಕ ಹಣ ಪಡೆದು ಪಾಸು ನೀಡಿರುವ ಸಾರಿಗೆ ಅಧಿಕಾರಿಗಳು ಹಣ ಸಂಗ್ರಹಣೆ ಮಾಡಿ ಇಲಾಖೆಗೆ ಭರಿಸುತ್ತಾರೊ ಅಥವಾ ಇಲ್ಲಾ ಎಂಬ ಪ್ರಶ್ನೆ ನಾಗರಿಕರನ್ನು ಕಾಡತೊಡಗಿದೆ.

loading...

LEAVE A REPLY

Please enter your comment!
Please enter your name here