ಚಿಕದಿನಕೊಪ್ಪ ಪ್ರೌಢಶಾಲೆ: ನೂತನ ಮಂತ್ರಿ ಮಂಡಳ ಅಸ್ತಿತ್ವಕ್ಕೆ

0
14
loading...

ಖಾನಾಪುರ 6: ತಾಲೂಕಿನ ಚಿಕದಿನಕೊಪ್ಪದ ಸರಕಾರಿ ಪ್ರೌಢಶಾಲೆಯ ಶಾಲಾ ಸಂಸತ್ತಿಗೆ ಇತ್ತೀಚೆಗೆ ಚುನಾವಣೆ ನಡೆಯಿತು. 2013-14ನೇ ಶೈಕ್ಷಣಿಕ ವರ್ಷಕ್ಕೆ ಪ್ರಧಾನಿಯಾಗಿ ವಿಶಾಲ ಕುಲಕರ್ಣಿ ಹಾಗೂ ಉಪ ಪ್ರಧಾನಿಯಾಗಿ ಅಕ್ಷತಾ ಬಂಬಾಡಿ ಆಯ್ಕೆಗೊಂಡರು. ಸಾಂಸ್ಕ್ಕತಿಕ ಮಂತ್ರಿಯಾಗಿ ವಿದ್ಯಾಸಾಗರ ಪಾಟೀಲ, ಉಪ ಮಂತ್ರಿಯಾಗಿ ಚೈತ್ರಾ ಮಾಯಪ್ಪನವರ, ಕ್ರೀಡಾ ಮಂತ್ರಿಯಾಗಿ ಜಯರಾಮ ಕೊಡೋಳಿ, ಉಪ ಮಂತ್ರಿಯಾಗಿ ಅಂಜುಮ್ ತಹಶೀಲ್ದಾರ, ಆರೋಗ್ಯ ಮಂತ್ರಿಯಾಗಿ ಹಣಮಂತ ಪಾಟೀಲ, ಉಪ ಮಂತ್ರಿಯಾಗಿ ಕಲಾವತಿ ನಾಗಣ್ಣವರ, ಗ್ರಂಥಾಲಯ ಮಂತ್ರಿಯಾಗಿ ಬಸವರಾಜ ಮಾದಾರ, ಉಪ ಮಂತ್ರಿಯಾಗಿ ಶ್ವೇತಾ ಕಡಬಿ, ಸ್ವಚ್ಛತಾ ಮಂತ್ರಿಯಾಗಿ ಈರಯ್ಯ ಹಳೆಮಠ, ಉಪ ಮಂತ್ರಿಯಾಗಿ ಮಹಾನಂದ ಕೋಲಕಾರ, ಪ್ರಾರ್ಥನಾ ಮಂತ್ರಿಯಾಗಿ ಆನಂದ ಕೋಲೆಕರ, ಉಪ ಮಂತ್ರಿಯಾಗಿ ರೇಣುಕಾ ಕೋಲಕಾರ, ಆಹಾರ ಮಂತ್ರಿಯಾಗಿ ವಿಕಾಸ ಕೋಲೆಕರ, ಉಪ ಮಂತ್ರಿಯಾಗಿ ಶಾಹೀರಬಾನು ಜಮಾದಾರ, ಪ್ರವಾಸ ಮಂತ್ರಿಯಾಗಿ ಮಹಾವೀರ ಅನಿಗೋಳ, ಉಪ ಮಂತ್ರಿಯಾಗಿ ಮಾಧುರಿ ಕಡಬಿ ಹಾಗೂ ತೋಟಗಾರಿಕೆ ಮಂತ್ರಿಯಾಗಿ ಸಚಿನ ಪೇಜೊಳ್ಳಿ, ಉಪ ಮಂತ್ರಿಯಾಗಿ ನಿವೇದಿತಾ ಕಾಂಬಳೆ ಆಯ್ಕೆಯಾಗಿದ್ದಾರೆ. ನೂತನವಾಗಿ ಆಯ್ಕೆಯಾದ ಮಂತ್ರಿಗಳನ್ನು ಶಾಲೆಯ ಮುಖ್ಯಾಧ್ಯಾಪಕ ಎನ್.ಡಿ ಪಾಟೀಲ, ಶಿಕ್ಷಕ ರವಿ ಕುಲಕರ್ಣಿ, ಶಾಲೆಯ ಎಸ್ಡಿಎಂಸಿ, ಶಿಕ್ಷಕವೃಂದ ಹಾಗೂ ಸಿಬ್ಬಂದಿ ಅಭಿನಂದಿಸಿತು.

loading...

LEAVE A REPLY

Please enter your comment!
Please enter your name here