ನಾಳೆ ವಿದ್ಯುತ್ ನಿಲುಗಡೆ

0
16
loading...

ಗೋಕಾಕ 2:  ನಗರದಲ್ಲಿ ಆರ್.ಎ.ಪಿ.ಡಿ.ಆರ್.ಪಿ ಯೋಜನೆಯಡಿಯಲ್ಲಿ ಎಕ್ಸಪ್ರೇಸ್ ಪೀಡರ ವಿದ್ಯುತ್ ತಂತಿ ದುರಸ್ಥಿ ಕಾರ್ಯ ನಿಮಿತ್ತ ದಿ. 4 ರಂದು ಬೆಳಿಗ್ಗೆ 9 ರಿಂದ ಸಂಜೆ 6 ಘಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಎಕ್ಸಪ್ರೇಸ್ ಪೀಡರ ಹಾಗೂ ಮಮದಾಪೂರ ವಾಟರ್ ಸಪ್ಲಾಯ್ ಪೀಡರನಿಂದ ಸರಬರಾಜು ಆಗುವ ಗ್ರಾಹಕರಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಕೆಲವು ಘಂಟೆಗಳ ಕಾಲ ನಗರದ ವಿವೇಕಾನಂದ ನಗರದಲ್ಲಿಯೂ ಕೂಡ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಕಾರ್ಯ ನಿರ್ವಾಹಕ ಅಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕುಡಿಯುವ ನೀರಿನಲ್ಲಿಯೂ ವ್ಯತ್ಯಯ ;- ಬರುವ ದಿ. 4 ರಂದು ನಗರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಅಂದು ನಗರದಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ನಗರಸಭೆ ಪೌರಾಯುಕ್ತ ವ್ಹಿ.ಸಿ.ಚಿನ್ನಪ್ಪಗೌಡರ ಪ್ರಕಟನೆಯಲ್ಲಿ ತಿಳಿಸಿದ್ದಾರೆ

loading...

LEAVE A REPLY

Please enter your comment!
Please enter your name here