ಪಂಚಮಿ ನಿಮಿತ್ತ ಆಸ್ಪತ್ರೆ ರೋಗಿಗಳಿಗೆ ಹಾಲು – ಬ್ರೆಡ್ ವಿತರಣೆ

0
17
loading...

ಚಿಕ್ಕೌಡಿ 13: ಶಿವಶರಣರು 12ನೇ ಶತಮಾನದಲ್ಲಿಯೇ ಕಲ್ಲು ನಾಗರಗಳಿಗೆ ಹಾಲು ಎರೆಯುವುದಕ್ಕಿಂತ ಬಡ ಹಿಂದುಳಿದ ಮಕ್ಕಳಿಗೆ ಹಾಲನ್ನು ನೀಡುವ ಸಂದೇಶವನ್ನು ತಮ್ಮ ವಚನಗಳ ಮೂಲಕ ಸಾರಿದ್ದಾರೆ ಎಂದು ಚಿಕ್ಕೌಡಿ ಸಂಪಾದನ ಚರಮೂರ್ತಿ ಮಠದ ಶ್ರೀ ಸಂಪಾದನ ಮಹಾಸ್ವಾಮಿಗಳು ಹೇಳಿದರು.

ಅವರು ನಾಗರಪಂಚಮಿ ಹಬ್ಬದ ಅಂಗವಾಗಿ ಪಟ್ಟಣದ ಆರ್.ಕೆ.ಕಾಲನೀಯ ಬಸವವಾಹಿನಿಯ ಸದಸ್ಯೆಯರು ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಾಲು ಹಾಗೂ ಬ್ರೇಡ್ ವಿತರಿಸಿ ಮಾತನಾಡಿ ದೇವಸ್ಥಾನದಲ್ಲಿ ಕಲ್ಲಿನ ನಾಗರಗಳಿಗೆ ಹಾಲು ಹಾಕುವುದಕ್ಕಿಂತ ಬಡ ಹಾಗೂ ಅನಾಥ ಮಕ್ಕಳಿಗೆ ನೀಡಿದಲ್ಲಿ ಅವರ ಹೊಟ್ಟೆ ತಂಪಾಗುತ್ತದೆ ಎಂದರು. ಬಸವವಾಹಿನಿಯ ಸದಸ್ಯೆಯರಾದ ಗಿರಿಜಾ ಪಾಟೀಲ, ಮಹಾದೇವಿ ಡೋಂಗರೆ, ಸುಲೋಚನಾ ಮಾಳಿ, ಆಶಾ ಭೋಷಲೆ, ಶೋಭಾ ಚಂದೂರೆ, ಶಕುಂತಲಾ ಪಟ್ಟೇದ ಹಾಗೂ ಬಿ.ಐ.ಪಾಟೀಲ, ಐ.ವ್ಹಿ.ದೇಯನ್ನವರ, ಡಾ.ಹೊನ್ನಳ್ಳಿ ಮತ್ತಿತರರು ಉಪಸ್ಥಿತರಿದ್ದರು

loading...

LEAVE A REPLY

Please enter your comment!
Please enter your name here