ಪವಿತ್ರ ರಮಜಾನ: ರಮಜಾನ ತಿಂಗಳಿನ ಉಪವಾಸದ ಮಹತ್ವ

0
309
loading...

ಮುಸಲ್ಮಾನರಿಗೆ ಸಾಕಷ್ಟು ಹಬ್ಬಗಳಿವೆ ಈ ಪೈಕಿ ರಂಜಾನ್ ಹಬ್ಬ ಅತ್ಯಂತ ಪರಮ ಪವಿತ್ರ ಹಬ್ಬ ಎಂದು ಹೇಳಲಾಗುತ್ತದೆ. ಈ ಪವಿತ್ರ ಮಾಸ ಇದು ಬರಿಯ ಉಪವಾಸವಲ್ಲ ಒಂದು ತಪಸ್ಸುಳಿ ಸೂರ್ಯೋದಯಕ್ಕೆ ಮುನ್ನ ಆಹಾರ ಸೇವಿಸಿ, ಸೂರ್ಯಾಸ್ತದ ಬಳಿಕ ಆಹಾರ ಸ್ವೀಕರಿಸುವ ವ್ರತವೇ ರೋಜಾ. ಅರಬೀ ಭಾಷೆಯಲ್ಲಿ ರಂಜಾನ್ನ್ನು ರಮದಾನ್ ಎಂದೇ ಉಚ್ಚರಿಸುತ್ತಾರೆ, ರಮ್ ಎಂದರೆ ಇಂದ್ರೀಯ, ದಾನ್ ಎಂದರೆ ನಿಗ್ರಹ. ಈ ನಿಟ್ಟಿನಲ್ಲಿ ರಂಜಾನ್ ಎಂದರೆ ಇಂದ್ರೀಯ ನಿಗ್ರಹಿಸುವ ತಿಂಗಳು. ದೇಹ, ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳಲು ಬೇಕಾದ ತರಬೇತಿಯ ಅವಧಿ. ಕೆಟ್ಟದ್ದನ್ನು ತೊಲಗಿಸಿ ಒಳ್ಳೆಯದನ್ನು ಸ್ವೀಕರಿಸುವ ತಿಂಗಳು. ಎಲ್ಲರೂ ಉಪವಾಸ ಆಚರಣೆಯಲ್ಲಿ ಚಾಚೂ ತಪ್ಪದೇ ಪಾಲ್ಗೊಳ್ಳುತ್ತಾರೆ, ಆದರೆ, ನಿರ್ಮಲ ಭಾವದಿಂದ ಎಲ್ಲರೂ ಹೇಳುವುದು ಒಂದೇ ಲಿಉಪವಾಸ ಮಾಡುತ್ತಿರುವುದು ನನಗೆ ಮತ್ತು ಅಲ್ಲಾಹ್ನಿಗೆ ಮಾತ್ರ ಗೊತ್ತಿದೆ. ನನ್ನ ಉಪವಾಸ, ತ್ಯಾಗಕ್ಕೆ ಬಹಳಷ್ಟು ಪ್ರತಿಫಲವನ್ನು ದೇವರು ನನಗೆ ಕೊಡುತ್ತಾನೆ. ಅರ್ಥಾತ್ ಇದರಿಂದ ನನಗೆ ಸಿಗುವುದು ದೇವರ ಸಾಂಗತ್ಯಳಿ

ರಂಜಾನ ಒಂದು ತಿಂಗಳ ಕಠಿಣ ವೃತ್ತಕ್ಕೆ ತೆರೆ ಬೀಳುವ ಹಬ್ಬವೇ ಈದುಲ್ ಫಿತ್ರ್ ಇಸ್ಲಾಮ ಧರ್ಮೀಯರಿಗೆ ಇರುವ ಎರಡು ಪ್ರಮುಖ ಹಬ್ಬಗಳಲ್ಲಿ ಇದು ಅತ್ಯಂತ ಪವಿತ್ರವಾದದ್ದು, ಮಹತ್ವವಾದದ್ದು. ಈದ ಎಂದರೆ ಅರಬ್ಬಿಯಲ್ಲಿ ಸಂತೋಷ, ಆನಂದ ಮತ್ತು ಮರಳಿ ಬುರುವುದು ಎಂದು ಅರ್ಥ. ಇದರಲ್ಲಿ ಫಿತ್ರ್ ಎಂದರೆ ದಾನ. ಈ ಹಬ್ಬದಲ್ಲಿ ಶ್ರೀಮಂತ, ಬಡವ, ಸಾಮಾನ್ಯ ಎಲ್ಲರೂ ತಮ್ಮ ಕೈಲಾದಷ್ಟು ದಾನ ಮಾಡಬೇಕು. ಸಾಮಾನ್ಯವಾಗಿ ಬಡವರಿಗೆ ವಿಶೇಷ ದಾನ. ನೀಡಲಾಗುತ್ತದೆ. ಇದಕ್ಕೂ ಜಕಾತ ಎಂದು ಕರೆಯುತ್ತಾರೆ. ವರ್ಷಕ್ಕೊಂದು ಬಾರಿ ಮುಸ್ಲಿಂ ಧರ್ಮೀಯರು ಕಡ್ಡಾಯವಾಗಿ ನೀಡಬೇಕಾದ ಜಕಾತ ದಾನಕ್ಕೆ ಹೊರತಾದುದು. ಇಲ್ಲಿ ಪ್ರತಿಯೊಬ್ಬ ಅನುಕೂಲವಂತ ಮುಸ್ಲಿಂನೂ ತನ್ನ ಹಾಗೂ ಕುಟುಂಬದ ಎಲ್ಲ ಸದಸ್ಯರ ಪರವಾಗಿ ಈ ದಾನವನ್ನು ಬಡವರಿಗೆ ನೀಡಬೆಕು. ಮನೆಯ ಪ್ರತಿ ಸದಸ್ಯನ ಪರವಾಗಿ ಈ ದಾನವನ್ನು ತಲಾ 2 ರಿಂದ 5 ಕೇ.ಜಿ.ಯಷ್ಟು ಅಕ್ಕಿ ಅಥವಾ ಗೋಧಿಯನ್ನು ಬಡವರಿಗೆ ಹಂಚಬೇಕು. ಹಬ್ಬದ ವಿಶೇಷ ಪ್ರಾರ್ಥನೆ ಮುಂಚೆಯೇ ಈ ದಾನವನ್ನು ವಿತರಿಸಬೇಕು.

ಈ ಹಬ್ಬದ ವಿಶೇಷ ಇರುವುದೇ ಅದರ ಅನಿಶ್ಚಿತತೆಯಲ್ಲಿ ಶವ್ವಾಲ್ ತಿಂಗಳಲ್ಲಿ ನಸುನಕ್ಕ ಚಂದಿರನ ದರ್ಶನವಾಗುವವರೆಗೂ ಈದ (ಹಬ್ಬ) ಯಾವಾಗ ಎನ್ನುವುದು ಖಚಿತ ಇಲ್ಲ. ಈ ಅನಿಶ್ಚಿತತೆಯ ನಡುವೆ ಜನ ಪಡಬಾರದ ಕಷ್ಟ, ಅಸಂತೋಷಗಳ ಸಾಗರದಲ್ಲಿ ಈಜಿ ಮೀರಿ ನಡೆಯಬೇಕಾಗುತ್ತದೆ. ಹಬ್ಬದ ಬಟ್ಟೆ ಹೊಲೆಯುವ ದರ್ಜೆಯ ಜತೆ ಸಂವಾದ, ಮಾಂಸದ ಅಂಗಡಿಯವನಿಗೆ ಪರದಾಟ, ಹೂವಿನವನಿಗೆ ಹುಡುಗಾಟ, ಹೀಗೆ ಹತ್ತು ಹಲವು ಜಟಿಲತೆಗಳ ನಡುವೆ ಮಕ್ಕಳಿಗೆ ಇದಾವುದರ ಅರಿವಿಗೆ ಬರುವುದಿಲ್ಲ.

ಜಗತ್ತಿನ ಮುಸ್ಲಿಂರೆಲ್ಲರೂ ಶ್ರದ್ದೆ, ಭಕ್ತಿ-ಭಾವದಿಂದ ರಂಜಾನ ತಿಂಗಳ ಕಠಿಣ ಉಪವಾಸ ವೃತವನ್ನಾಚರಿಸುವ ಮುಸ್ಲಿಂರಿಗೆ ದೇವರ ವತಿಯಿಂದ ದೊರೆಯವ ಅತ್ಯಮೂಲ್ಯವಾದ ಉಡುಗೋರೆ. ಸತತ ಒಂದು ತಿಂಗಳ ಕಾಲ ಮುಸ್ಲಿಂರು ಹಗಲು ಹೊತ್ತು ಅನ್ನ, ಆಹಾರ, ಆಸೆ, ಲೈಂಗಿಕ ಕಾಮನೆಗಳನ್ನು ತೊರೆದು, ಭಕ್ತಿಯಿಂದ ದಿನವೂ 5 ಹೊತ್ತು ನಮಾಜ ಮಾಡುತ್ತಾರೆ.

ಊರಿನ ಪ್ರತಿಯೊಂದು ಮನೆಯ ಅಂಗಳದಲ್ಲಿ ಜನಜಂಗುಳಿ, ಎಲ್ಲರ ಕಣ್ಣು ಆಕಾಶದ ದಿಕ್ಕಿನ ಕಡೆ, ಸೂರ್ಯ ಮಾಯವಾಗಿ ಸಂಜೆಯ ಮಬ್ಬುಗತ್ತಲಿನಲ್ಲೂ ಜನರ ಕಣ್ಣುಗಳು ಕಾತರ, ನೀರೀಕ್ಷೆಯಿಂದ ಫಳ-ಫಳ ಹೊಳೆಯುತ್ತಿವೆ. ಆ ನೀರೀಕ್ಷೆಗೆ ತೆರೆ ಬೀಳುವಂತೆ ಬಾನಿನಲ್ಲಿ ಚಂದ್ರ ನಸು ನಗುತ್ತಾ, ಮದುಮಗಳು ನಾಚುವಂತೆ ನಾಚುತ್ತಾ ತನ್ನ ಪ್ರತಿಬಿಂಬವನ್ನು ಇಷ್ಟಿಷ್ಟೇ ತೋರಿಸಿ, ಜನರಿಗೆ ಹರ್ಷದ ಸಂಭ್ರಮವನ್ನು ಉಂಟು ಮಾಡುತ್ತಾನೆ. ಪೇಶ ಇಮಾಮರಿಗೆ ಸುದ್ದಿ ತಲುಪಿಸಿದರು. ಕೆಲವೇ ಕ್ಷಣಗಳಲ್ಲಿ ಮಸೀದಿಯ ಮಿನಾರದಿಂದ ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್ ಎಂಬ ನಾದ ಮೊಳಗಲಾರಂಭಿಸಿತು. ನಾಳೆ ಈದ ಒಬ್ಬು ಇನ್ನೊಬ್ಬರಿಗೆ ಹೇಳಿ ಆನಂದ ಪಟ್ಟರು. ಲಿಈದ ಮುಬಾರಕಳಿ ಎಂದು ಹೇಳಿ ಆಲಂಗಿಸಿಕೊಂಡರು. ಮಸೀದಿ ಮುಂಭಾಗದಲ್ಲಿ ಜನರು ಹಬ್ಬದ ಶುಭಾಶಯ ಕೋರಿದರು. ಮುಂದೆ ಮಾರನೆಯ ದಿನದ ಹಬ್ಬದ ಶುಭಾಶಯ ಕೋರಿದರು. ಮುಂದೆ ಮಾರನೆಯ ದಿನದ ಹಬ್ಬದ ತಯಾರಿಯಲ್ಲಿ ತೊಡಗಿದರು. ಇತ್ತ ಓಣಿಯ ಪ್ರತಿಯೊಂದು ಮನೆಯಲ್ಲೂ ಮಹಿಳೆಯರಿಗೆ ಮದರಂಗಿ ಹಚ್ಚಿಕೊಳ್ಳುವ ಆನಂದದ ಸಂಭ್ರಮ, ಮೂರನೆ ದಿನದ ಖಿರು, ಬಿರ್ಯಾನಿ, ಹರೀರಾ ತಯಾರಿಯ ಸಿದ್ಧತೆಗೂ ತೊಡಬೇಕು. ಹಬ್ಬದ ದಿನ ಏನು ಮಾಡಬೇಕು, ಯಾರನ್ನು ಊಟಕ್ಕೆ ಕರೆಯಬೇಕು ಮುಂತಾದ ವಿಷಯಗಳ ಚರ್ಚೆ, ಹರಿಯದ ಹೆಣ್ಣು ಮಕ್ಕಳಂತೂ ಮದರಂಗಿ ಮತ್ತು ಹಬ್ಬದಡಿಗೆಯ ಕಲ್ಪನಾಲೋಕಕ್ಕೆ ಸಡಗರ ನೋಡಿ ಮನಸ್ಸು ಹಗುರ ಮಾಡಿಕೊಳ್ಳುವ ಆನಂದ ಸವಿಯುವ ಅತ್ಯಮೂಲ್ಯ ಕ್ಷಣ ಆ ಹಬ್ಬದ ಸಂಭ್ರಮ.

ಶಿಅಲ್ಲಾಹು ಅಕ್ಬರ್, ಹಲ್ಲಾಹು ಅಕ್ಬರ್ ಲಾ ಇಲಾಹು ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್ ವಲಿಲ್ಲಾಹಮ್ದಷಿ ಹಬ್ಬದ ದಿನ ಡೀಮಸೀದಿಯ ಮಿನಾರದಿಂದ ಮೊಳಗುವ ಪ್ರಾರ್ಥನೆಗೆ ತಕ್ಬೀರ (ಪ್ರಕೀರ್ತನೆ) ಎಂದು ಹೆಸರು ಅಲ್ಲಾಹನು ಮಹಾನನು. ಆತನಿಲ್ಲದೇ ಆರ್ಯಾದಿರಲ್ಲ, ಎಲ್ಲ ಸ್ತುತ ಸ್ತೌತ್ರಗಳು ಆತನಿಗೆ ಮೀಸಲು ಎಂಬುದು ಈ ಪ್ರಾರ್ಥನೆಯ ಭಾವಾರ್ಥ ಬೆಳಗಿನ ವಿಶೇಷ ಪ್ರಾರ್ಥನೆಗೆ ಈದಗಾಕ್ಕೆ ತೆರಳುವಾಗಲೂ ಎಲ್ಲರ ಬಾಯಲ್ಲೂ ಇದೇ ಪ್ರಾರ್ಥನೆ ಈದಗಾಕ್ಕೆ ತೆರಳುವಾಗಲೂ ಎಲ್ಲರ ಬಾಯಲ್ಲೂ ಇದೇ ಪ್ರಾರ್ಥನೆ ಗುಂಯ್ ಗುಡುತ್ತದೆ. ಸೃಷ್ಠಿಕರ್ತ ಅಲ್ಲಾಹನ ಮಹಾನತೆಯನ್ನು ನೆನಪಿಸುವುದರ ಜೊತೆಗೆ ದೇವನ ದಾಸರೆಂಬ ಪ್ರಜ್ಞೆಯನ್ನು ಈ ಮೂಲಕ ಜಾಗೃತಗೊಳಿಸುತ್ತಾರೆ.

ಅಲ್ಲಾಹನ ಇಚ್ಚೆ ಮತ್ತು ಓದಾರ್ಯದಿಂದ ಮತ್ತೆ ರಮಜಾನ್ ತಿಂಗಳ ಆಗಮನವಾಗಿದೆ. ಅದಕ್ಕಾಗಿ ನಾವು ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸಬೇಕು. ಇದು ಎಂತಹಾ ಪಾವನ ಮಾಸವೆಂದರೆ ಅದರಲ್ಲಿ ಅಲ್ಲಾಹನು ಸ್ವರ್ಗದ ದ್ವಾರಗಳನ್ನು ತೆರೆದು ಬಿಡುತ್ತಾನೆ. ನಕರದ ದ್ವಾರಗಳನ್ನು ಮುಚ್ಚುತ್ತಾನೆ ಮತ್ತು ತನ್ನ ದಾಸರನ್ನು ಇತರ ದಿನಗಳಲ್ಲಿ ದಾರಿ ತಪ್ಪಿಸಿದಂತೆ ಈ ಮಾಸದಲ್ಲೂ ಮಾಡದಿರಲೆಂದು ಸೈತಾನನ್ನು ಬಂಧಿಸುತ್ತಾನೆ. ತನ್ನ ದಾಸರನ್ನು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ನರಕದಿಂದ ಮುಕ್ತಿಗೊಳಿಸುತ್ತಾನೆ. ಮತ್ತು ಪ್ರಾರ್ಥನೆಗಳನ್ನು ಸ್ವೀಕರಿಸುತ್ತಾನೆ. ಅಲ್ಲಾಹನ ವತಿಯಿಂದ ಇಂತಹ ಪವಿತ್ರ ತಿಂಗಳ ಲಭಿಸುವುದು ನಮ್ಮ ಭಾಗ್ಯವೇ ಆಗಿದೆ.

ಸಂಕಲ್ಪವು ದೆವನ ಹೊರತು ಇನ್ಯಾರಿಗೂ ತಿಳಿಯದು ಉಪವಾಸದ ಪ್ರಮುಖ ಉದ್ದೇಶ ಲಿತಕ್ತಾಳಿ (ದೇವಭಕ್ತಿ) ಉಂಟುಮಾಡುವುದಾಗಿದೆ. ಉಪವಾಸ ಅನುಸರಿಸುವುದರಿಂದ ಜನರ ಹೃದಯದಲ್ಲಿ ಅಲ್ಲಾಹನ ಕುರಿತಾದ ಭಯ ಹುಟ್ಟುತ್ತದೆ. ಅದರಿಂದ ಅವನು ತನ್ನನ್ನು ಸರ್ವೇ ಕೆಡಕುಗಳಿಂದ ದೂರವಿಟ್ಟುಕೊಳ್ಳಲು ಬಯಸುತ್ತಾನೆ. ಉಪವಾಸ ಆಚರಣೆಯಿಂದ ಮನುಷ್ಯನ ನಡೆ ನುಡಿ, ಸ್ವಭಾವ, ವ್ಯಾಪರ ವ್ಯವಹಾರಗಳಲ್ಲನು ಶುದ್ದಿಕರಿಸುವುದರಲ್ಲಿ ಅತ್ಯಂತ ಮಹತ್ತರ ಪಾತ್ರವಹಿಸುತ್ತದೆ.

ಉಪವಾಸವೆಂದರೆ ಕೇವಲ ಹಸಿವು ಮತ್ತು ದಾಹದಿಂದ ಚಡಪಡಿಸುವುದು ಎಂದರ್ಥವಲ್ಲ. ಬದಲಾಗಿ ಅಲ್ಲಾಹನ ವಿಧಿ-ನಿರ್ದೇಶನಗಳಿಗೆ ಬದ್ಧತೆಯ ಆದ್ಯತೆ ಪ್ರಕಟಿಸುವ ಮನೋಭಾವವನ್ನು ಉಂಟುಮಾಡುತ್ತದೆ. ಉಪವಾಸವು ಮನುಷ್ಯನಿಗೆ ಸಹನೆ ಸಂಯಮ ಮತ್ತು ಸಂಕಷ್ಟಗಳನ್ನು ನಿಗ್ರಹಿಸುವ ತರಬೇತಿ ನೀಡುತ್ತದೆ. ಅವನ ಇಚ್ಚೇ ಅಭಿಲಾಷಗಳನ್ನು ತೊರೆಯುವುದು ದೇಹಚ್ಚೇಗಳನ್ನು ನಿಯಂತ್ರಿಸುವುದು ವಾಸ್ತವದಲ್ಲಿ ಅತ್ಯಂತ ಕಠಿಣವಾಗಿದೆ. ಆದರೆ ಉಪವಾಸವು ಅಲ್ಲಾಹನ ಸಂತೃಪ್ತಿಗಾಗಿ ಸಹನೆಕ್ಕೆಗೊಳ್ಳುವುದು, ಅಲ್ಲಾಹನು ನಿಷಿದ್ದಗೊಳಿಸಿದ ಕಾರ್ಯಗಳ ಕುರಿತು ಸಹನೆ ಕೈಗೊಳ್ಳುವುದು ಸತ್ಯ ವಿಶ್ವಾಸಿಯ ಒಳಗೆ ಸಹನೆ ಸಂಗ್ರಹವಾಗುತ್ತದೆ. ಪವಿತ್ರ ಕುರಾನ್ನಲ್ಲಿ ಹೀಗಿದೆ. ಶಿಉಪವಾಸವು ಪಾಪಗಳಿಗೆ ಪ್ರಾಯಶ್ಚಿತವಾಗಿದೆ. ಪಾಪಗಳನ್ನು ಅಳಿಸಿ ಹಾಕುವುದು ಖಂಡಿತ ಉಪವಾಸವು ಹಲವಾರು ಸತ್ಕರ್ಮಗಳ ಪಾಪವನ್ನು ಅಳಿಸಿ ಹಾಕುತ್ತದೆ. ಪ್ರವಾದಿ(ಸ)ರವರು ಹೇಳುತ್ತಾರೆ.ಷಿ

ಶಿಮನುಷ್ಯನು ತನ್ನ ಕುಟುಂಬ, ಸೊತ್ತು ಸಂಪತ್ತು ಮತ್ತು ನೆರೆಹೊರೆಯುವರು ಕಾರಣದಿಂದ ಪಾಪವೆಸಗುತ್ತಾನೆ. ನಮಾಜ, ಪವಾಸ ಮತ್ತು ದಾನಧರ್ಮಗಳನ್ನು ಇದಕ್ಕೆ ಪರಿಹಾರವೆನಿಸುತ್ತದೆ. ಶಿ(ಮುಸ್ಲಿಮ್ 144) ಉಪವಾಸದ ಸ್ಥಿತಿಯಲ್ಲಿ ನಿರರ್ಥಕ ಮಾತನಾಡವುದು, ಜಗಳವಾಡುವುದು ಅಥವಾ ಯಾರಾದರೈ ಬೈದರೆ ಸಹನೆಯಿಂದ ನಾನು ಉಪವಾಸವಿದ್ದೇನೆ ಎಂದು ಹೇಳಬೇಕು ಎಂದು ಪ್ರವಾದಿ (ಸ)ರವರ ಹೇಳಿದದಾರೆ, ಉಪವಾಸ ಇರುವವನಿಗೆ ಎರಡು ಸಂತೋಷದ ಸಂದರ್ಭಗಳಿವೆ ಒಂದು ಉಪವಾಸ ಮುಗಿದ ಮೇಲೆ ಇನ್ನೊಂದು ಅಲ್ಲಾಹನನ್ನು ಎದುರುಗೊಳ್ಳುವ ಸಂದರ್ಭದಲ್ಲಿ (ಬುಖಾರಿ 904) ಸ್ವರ್ಗದ ಬಾಗಿಲಾದ ಬಾಬುರೆಯ್ಯಾನ್ನಿಂದ ಕೇವಲ ಉಪವಾಸಿಗರು ಮಾತ್ರ ಸ್ವರ್ಗಪ್ರವೇಶಿಸುತ್ತಾರೆ.ಷಿ

ರಮಜಾನ್ ಹಬ್ಬದ ನಿಮಿತ್ತ ವಿಶೇಷ ಲೇಖನ

ವೀರಯ್ಯ ಹಿರೇಮಠ

loading...

LEAVE A REPLY

Please enter your comment!
Please enter your name here