ಪ್ರಪ್ರಥಮ ಬಾರಿಗೆ ಚುನಾವಣಾ ಆಯೋಗದಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಚುನಾವಣೆ

0
91
loading...

ಮಹಾಂತೇಶ ರಾಜಗೋಳಿ

ಬೈಲಹೊಂಗಲ: 30- ರೈತರೊಂದಿಗೆ ನೇರವಾಗಿ ಸಂಪರ್ಕ ಹೊಂದಿ, ಸರಕಾರದ ಸೌಲಭ್ಯಗಳನ್ನು  ತಲುಪಿಸುವಲ್ಲಿ ಹಳ್ಳಿಗಳಲ್ಲಿ ಉತ್ತಮ ಸೇವೆ ಒದಗಿಸುತ್ತಿರುವ ರಾಜ್ಯದ ಸುಮಾರು 5,100 ಸಹಕಾರಿ ಸಂಘಗಳಿಗೆ  ಪ್ರತಿ 5 ವರ್ಷಕೊಮ್ಮೆ ರಾಜ್ಯದಲ್ಲಿ ನಡೆಯುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ (ಪಿಎಸಿಎಸ್)  ನಿರ್ದೇಶಕರ ಮಂಡಲಿ ಚುನಾವಣೆ ಸೆ.1 ರಂದು ರಾಜ್ಯಾದ್ಯಂತ ನಡೆಯಲಿದೆ. ಈ ಸಂಘಗಳು ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 600 ರಷ್ಟು ಪ್ರಾ.ಕೃ.ಪ.ಸ.ಸಂಘಗಳಿವೆ.

ಈ ಚುನಾವಣೆಗಳು ಸಾಮಾನ್ಯ ಚುನಾವಣೆಗಳಿಗಿಂತ  ಭಿನ್ನವಾಗಿದ್ದು. ಸಂವಿಧಾನದ 97 ನೇ ಅಡಿ ಕೆಲವೊಂದು ತಿದ್ದುಪಡಿ ಮಾಡಲಾಗಿದ್ದು, ಅದರ ಪ್ರಕಾರವಾಗಿ ಪ್ರಪ್ರಥಮ ಬಾರಿಗೆ ಈ ಚುನಾವಣೆಯನ್ನು ಚುನಾವಣಾ ಆಯೋಗವು ನಡೆಸಲಿದೆ. 1.ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ.2.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ, 3. ಪೆಡರಲ್ 4.ರಾಜ್ಯ ಸಹಕಾರಿ ಆಪೆಕ್ಷ್ ಬ್ಯಾಂಕಗಳು ರಾಜ್ಯದಲ್ಲಿ ಈ ರೀತಿ ವ್ಯವಸ್ಥೆ ಮಾಡಲಾಗಿದ್ದು ನಾಡಿನ ರೈತರಿಗೆ ಇವುಗಳು ಕಲ್ಪವೃಕ್ಷವಾಗಬೇಕಿವೆ.

ಆಯ್ಕೆ ವಿಧಾನ: ಸಾಮಾನ್ಯವಾಗಿ ಪಿಎಸಿಎಸ್ಗಳಲ್ಲಿ ಮೊದಲು 8 ಸದಸ್ಯರು ಇದ್ದು ಈ ಸಲ 2 ಸದಸ್ಯರ ಸಂಖ್ಯೆ ಹೆಚ್ಚಾಗಿ ಒಟ್ಟು 10 ಜನ ಸದಸ್ಯರು ಆಯ್ಕೆಯಾಗುವರು.  ಬ್ಯಾಂಕಿನ ನೀರೀಕ್ಷಕ(ಬಿ.ಐ) ಕರು ಈ ಸಲ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ  ಮತ ಹಾಕುವ ಕಾನೂನು ರೂಪಿಸಲಾಗಿದೆ.

ಸಂಘದಿಂದ ಪ್ರಯೋಜನ : ರೈತರಿಗೆ ಬಡ್ಡಿರಹಿತ ಸಾಲ, ಯಶಸ್ವನಿ ಆರೋಗ್ಯ ವಿಮೆ, ಅಪಘಾತ, ಬೆಳೆವಿಮೆ, ಪಡಿತರ ವಿತರಣೆ, ವಾಹನ ಸಾಲ, ನೌಕರಿ ವೇತನ ಸಾಲ, ರಸಗೊಬ್ಬರ ಹಾಗೂ ಬೀಜ ವಿತರಣೆ. ರಾಜ್ಯದಲ್ಲಿ ಸು 54 ಲಕ್ಷ ರೈತ ಸದಸ್ಯರು ಇರುವರು. 26 ಲಕ್ಷ ಸದಸ್ಯರಿಗೆ 10,000 ಕೊಟಿ ಸಾಲ ಪಡೆದಿರುವರು. 5,000 ಕೊಟಿ ರೂ. ಠೇವಣಿ, 25 ಸಾವಿರದಿಂದ 30 ಸಾವಿರ ಜನ ಉದ್ಯೊಗಿಗಳಿರಬಹುದೆಂದು ಅಂದಾಜಿಸಲಾಗಿದೆ.

ಸಂಘಗಳ ಸಂಕಷ್ಟಗಳು : ಕಳೆದ 2 ವರ್ಷದಲ್ಲಿ ರೈತರ ಸಾಲ ಮನ್ನಾ ಮಾಡಿದ ಹಣ ಸರಕಾರದಿಂದ ಬಿಡುಗಡೆ ವಿಳಂಭ, ಬೆಳೆಸಾಲ ಬಡ್ಡಿ, ಪಡಿತರ, ರಸಗೊಬ್ಬರ, ಬೀಜ ಮಾರಾಟ ಮೇಲೆ ಸಿಗುವ ಸಹಾಯಧನ ಕಡಿಮೆ. ಸ್ವಂತ ಕಟ್ಟಡಗಳಿಲ್ಲ, ಇದ್ದರೂ ಸುಸ್ಥಿತಿ ಇಲ್ಲ. ಸರಕಾರ ಈ ಮೊದಲು 3 ಪ್ರತಿಶತ ಬಡ್ಡಿ ಸಹಾಯಧನ ಬದಲಾಗಿ ಈಗ 2 ಪ್ರತಿಶತ ಹಣ ನೀಡುತ್ತಿದೆ.

ರೈತರ ಬೇಡಿಕೆಗಳು: ಸಾಲದ  ಹಣ ಹೆಚ್ಚಿಸಿ, ನಬಾರ್ಡ್  ಸೂಚನೆಯಂತೆ  ಕೇಂದ್ರದ ಕಿಸಾನ್ ಕ್ರೆಡಿಟ್ ಸಾಲ ಎಟಿಎಂಗಳ ಮೂಲಕ ರೈತರಿಗೆ ಹಣ ವಿತರಣೆಯಾಗಬೇಕು. ಜೋಳ, ರಾಗಿ, ಗೋಧಿ ವಿತರಿಸಬೇಕು. ರೈತರ ಶೇರು ಹಣದ ಮೇಲೆ ಪ್ರತಿವರ್ಷ ಸಂಘಗಳು ಲಾಭಾಂಶವನ್ನು ನೀಡಬೇಕು. ರಾಷ್ಟ್ತ್ರೀಯ ದಿನಾಚರಣೆಯನ್ನು ಕಡ್ಡಾಯವಾಗಬೇಕು ಆಚರಿಸಬೇಕು.  ಕೇಂದ್ರ ಹಾಗೂ ರಾಜ್ಯ ಸರಕಾರ ಪ್ರತಿವರ್ಷ ಯೋಜನೆ ಹಮ್ಮಿಕೊಳ್ಳಬೇಕು.

ಆಯ್ಕೆಯಾದ ಸದಸ್ಯರ ಕೆಲಸಗಳು : ಅನ್ನಭಾಗ್ಯ, ಸಾಲ ವಿತರಣೆ. ಸಂಘದ ಸಭೆ,   ಬ್ಯಾಂಕ ನೀರಿಕ್ಷಕರು (ಬಿ.ಐ), ರೈತರು ಸಭೆಯಲ್ಲಿ ಭಾಗವಹಿಸಲು, ಬೋರ್ಡನಲ್ಲಿ ಸಂಘದ ದಿನಚರಿ ಬರೆಯಬೇಕು. ವಾಣಿಜ್ಯ ಉದ್ದೇಶಗಳಿಗೆ , ಮಹಿಳಾ ಸಂಘಗಳಿಗೆ ಸಾಲ ವಿತರಣೆಗೆ ಇನ್ನಿತರ ರೈತರಿಗೆ ಅನೂಕುಲಕರವಾಗುವ ಸರ್ಮಪಕ ಯೊಜನೆಗಳಿಗೆ ಕ್ರಮ ಕೈಗೊಳ್ಳಬೇಕು.

ಒಟ್ಟಿನಲ್ಲಿ ಸಂಘಗಳು  ಎದುರಿಸುತ್ತೀರುವ ಸಮಸ್ಯೆಗೆ ಸರಕಾರವು ಸ್ಪಂದಿಸಿಬೇಕಾಗಿದೆ. ಈ ರಾಜ್ಯದ ರೈತರ, ಬಡವರ ಅಭಿವೃದ್ದಿಯಾಗಲು ಪ್ರಾಮಾಣಿಕ, ನಿಷ್ಠಾವಂತ, ಪ್ರಜ್ಞಾವಂತರು,  ಸಂಘದ ಬಗ್ಗೆ ಜ್ಞಾನ ಹೊಂದಿದವರನ್ನೇ ಈ ಚುನಾವಣೆಯಲ್ಲಿ ಸಂಘದ ಅಧ್ಯಕ್ಷ ಹಾಗೂ ಸದಸ್ಯರ ಆಯ್ಕೆ ಮಾಡಲು ಯಾವುದೇ ಆಶೆ, ಆಮಿಷಗಳಿಗೆ ಒಳಗಾಗದೇ ನಿಷ್ಪಕ್ಷಪಾತವಾಗಿ ಮತದಾನ ಮಾಡಲು ಪ್ರಯತ್ನಿಸಬೇಕಾಗಿದೆ. ಚುನಾವಣೆಯ ದಿನವೇ ಫಲಿತಾಂಶ ಪ್ರಕಟವಾಗಲಿದ್ದು ಯಾರು ಆಯ್ಕೆಯಾಗುವರು ಎಂಬೂದು ಸಹ ಕುತೂಹಲ ಮೂಡಿಸಿದೆ. ಆದರೂ ಸಹ ಬೆಳಗಾವಿ ಜಿಲ್ಲೆಯಲ್ಲಿ ಸಂಘಗಳ ಚುನಾವಣೆಯ ಪ್ರಕಿಯೆಗೆ ಕೃಷಿ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು ರೈತರು ಇದೀಗ ತೊಂದರೆ ಅನುಭವಿಸುತ್ತಿರುವುದು ಕಟು ಸತ್ಯ. ಈ ಲೇಖನಕ್ಕೆ ಸಂಭಂದಪಟ್ಟಂತೆ ಭಾವ ಚಿತ್ರ ಬಳಸಿಕೊಳ್ಳಿರಿ.

loading...

LEAVE A REPLY

Please enter your comment!
Please enter your name here