ಮನೆ ಮನೆಗೆ ವಚನ ಸಂಪುಟ

0
19
loading...

ಬೈಲಹೊಂಗಲ 7- ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ಬೆಂಗಳೂರು ಬಸವ ಸಮಿತಿಯು ಕನ್ನಡ, ಮರಾಠಿ, ತೆಲಗು, ತಮಿಳು, ಬೆಂಗಾಲಿ, ಪಂಜಾಬಿ, ಹಿಂದಿ, ಸಂಸ್ಕ್ಕತ, ಉರ್ದು ಮತ್ತು ಇಂಗ್ಲೀಷ ಭಾಷೆಗಳಲ್ಲಿ ಪ್ರಕಟಿಸಿರುವ ವಚನ ಸಂಪುಟಗಳನ್ನು ಶ್ರಾವಣ ಮಾಸದ ನಿಮಿತ್ತ ಮನೆ ಮನೆಗೆ ತಲುಪಿಸುವ ಕಾರ್ಯಕ್ರಮವನ್ನು ಬಸವ ಸಮಿತಿ ಹಮ್ಮಿಕೊಂಡಿದೆ.

ಈವರೆಗೆ ಬೆಳಕಿಗೆ ಬಂದ ಬಸವಯುಗ, ಬಸವೋತ್ತರಯುಗಗಳ ಸುಮಾರು 21 ಸಾವಿರ ವಚನಗಳಿಂದ ಆಯ್ದುಕೊಂಡ 2500 ವಚನಗಳ ಸಂಪುಟ ಸಿದ್ದಪಡಿಸಲಾಗಿದೆ. ಲೋಕಮಾನ್ಯ ಸಂದೇಶ, ಮೌಲಿಕ ಸಾಹಿತ್ಯ, ಎಲ್ಲ ಶರಣರ ವಚನಗಳ ಪ್ರಾತಿನಿಧ್ಯ ಈ ಮಾನದಂಡಗಳ ಆದರ್ಶದಲ್ಲಿ ಸಂಪುಟ ರೂಪುಗೊಂಡಿದೆ. ಇದರಲ್ಲಿ 129ಜನ ಶರಣರ, 31 ಜನ ಶರಣೆಯರ, 13 ಜನ ಅಜ್ಞಾತ ಶರಣರ -ಹೀಗೆ 173 ಶರಣರ, ಶರಣೆಯರ ವಚನಗಳಿವೆ. ಆರಂಭದಲ್ಲಿ ಅಭ್ಯಾಸ ಪೂರ್ವ ಪ್ರಸ್ತಾವಣೆ, ಅಂತ್ಯದಲ್ಲಿ ಎಲ್ಲ ವಚನಕಾರರ ಚರಿತ್ರೆ, ವಚನಗಳ ಅಕಾರಾದಿ, ಕಠಿಣಪದಕೋಶ ಪಾರಿಭಾಷಿಕ ಪದಕೋಶ, ಅಂಕಿತಗಳ ಆಕಾರಾದಿ ಇತ್ಯಾದಿಗಳಿವೆ.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಬಸವ ಸಮಿತಿ ನಿರ್ದೇಶಕರಾದ ಮೋಹನ ಬಸವನಗೌಡ ಪಾಟೀಲ ಶಿಬಸವ ನಿವಾಸಷಿ ಚನ್ನಮ್ಮ ನಗರ, ಬೈಲಹೊಂಗಲ – 591102. ಬೆಳಗಾವಿ ಜಿಲ್ಲೆ ಮೊ : 9448920888 ಸಂಪರ್ಕಿಸಬೇಕೆಂದು ಬಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ

loading...

LEAVE A REPLY

Please enter your comment!
Please enter your name here