ಶಾಸಕರಿಂದ ಯಾತ್ರಿನಿವಾಸ ಕಾಮಗಾರಿ ಪರೀಶೀಲನೆ

0
15
loading...

ಗೋಕಾಕ 5: ಪ್ರವಾಸೋದ್ಯಮ ಇಲಾಖೆ ಯಿಂದ 50 ಲಕ್ಷ ರೂ. ಅನುದಾನದಲ್ಲಿ ಹುಣಶ್ಯಾಳ ಪಿಜಿ ಗ್ರಾಮದಲ್ಲಿ ನಿರ್ಮಾಣ ವಾಗುತ್ತಿರುವ ಯಾತ್ರಿ ನಿವಾಸ ಕಾಮಗಾರಿಯನ್ನು ಅರಭಾವಿ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ವೀಕ್ಷಿಸಿದರು.

ಅರಭಾವಿ ಮತಕ್ಷೇತ್ರದ ಹುಣಶ್ಯಾಳ ಪಿಜಿ ಗ್ರಾಮದ ಸಿದ್ಧಲಿಂಗ ಕೈವಲ್ಯಾಶ್ರಮದ ಬಳಿ ನಿರ್ಮಾಣವಾಗುತ್ತಿರುವ ಯಾತ್ರಿ ನಿವಾಸ ಮುಂದಿನ 3 ತಿಂಗಳೊಳಗೆ ಭಕ್ತರಿಗೆ ಸಮರ್ಪನೆಯಾಗಲಿದೆ. 2012-13ನೇ ಸಾಲಿನಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ 50 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದರು.

ಶ್ರೀಮಠದ ಭಕ್ತರು ಹಾಗೂ ಯಾತ್ರಾರ್ತಿಗಳ ಅನುಕೂಲಕ್ಕಾಗಿ ಹುಣಶ್ಯಾಳ ಪಿಜಿ ಗ್ರಾಮದಲ್ಲಿ ಯಾತ್ರಿ ನಿವಾಸ ನಿರ್ಮಾಣ ಮಾಡಬೇಕೆಂಬುದು ಶ್ರೀಗಳ ಆಶಯವಾಗಿತ್ತು. ಶ್ರೀಗಳ ಬೇಡಿಕೆಗೆ ಸ್ಪಂದಿಸಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಕಾಮಗಾರಿಯನ್ನು ಮಂಜೂರು ಮಾಡಿಸಿದ್ದಾಗಿ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಮಠದಲ್ಲಿ ನಡೆಯುತ್ತಿರುವ ಧಾರ್ಮಿಕ ಹಾಗೂ ಶೈಕ್ಷಣಿಕ ಕಾರ್ಯಗಳನ್ನು ಅವರು ಶ್ಲಾಘಿಸಿದರು.

ನಿಜಗುಣ ದೇವರು, ಅಶೋಕ ನಾಯ್ಕ, ಈಶ್ವರ ಕತ್ತಿ, ಹುಣಶ್ಯಾಳ ಪಿಜಿ ಗ್ರಾಪಂ ಅಧ್ಯಕ್ಷೆ ಕಲ್ಲವ್ವ ತಂಗಾಳಿ, ಕೌಜಲಗಿ ಜಿಪಂ ಸದಸ್ಯ ಪರಮೇಶ ಹೊಸಮನಿ, ಹಾಜಿಸಾಬ ನದಾಫ, ಶಂಕರ ಇಂಚಲ, ಬಸು ಕಾಡಾಪೂರ, ಗುರುಸಿದ್ದ ಕರಬಣ್ಣಿ, ಎಂ.ಆರ್.ಭೋವಿ ಮುಂತಾದವರು ಉಪಸ್ಥಿತರಿದ್ದರು.

ಕೈವಲ್ಯಾಶ್ರಮದ ನಿಜಗುಣ ದೇವರು ಇದೇ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ   ಅವರನ್ನು ಸತ್ಕರಿಸಿ, ಗೌರವಿಸಿದರು.

loading...

LEAVE A REPLY

Please enter your comment!
Please enter your name here