ಸರ್ಕಾರಿ ಕಾಲೇಜ್ ವಿದ್ಯಾರ್ಥಿಗಳಿಗಾಗಿ ಉದ್ಯೌಗಮೇಳ

0
9
loading...

ಖಾನಾಪುರ: ಕಾಲೇಜು ಶಿಕ್ಷಣ ಇಲಾಖೆಯ ಧಾರವಾಡದಲ್ಲಿರುವ ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿಯ ವತಿಯಿಂದ ಸರ್ಕಾರಿ ಕಾಲೇಜುಗಳಲ್ಲಿ ಪದವಿ ಪೂರೈಸಿರುವ ಗ್ರಾಮೀಣ ಭಾಗದ ನಿರುದ್ಯೌಗಿ ಪದವೀಧರರಿಗೆ ವಿಶೇಷ ಉದ್ಯೌಗ ಮೇಳವನ್ನು ಮುಂಬರುವ ಸೆ.15 ರಂದು ಧಾರವಾಡ ನಗರದ ವಿದ್ಯಾಗಿರಿಯಲ್ಲಿರುವ ಜೆಎಸ್ಎಸ್ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದೆ.

ಈ ಮೇಳದಲ್ಲಿ ವಿವಿಧೆಡೆಯಿಂದ ಆಗಮಿಸುವ ಸುಮಾರು 100ಕ್ಕೂ  ಹೆಚ್ಚು ಕಂಪನಿಗಳು 1500 ಉದ್ಯೌಗಾಕಾಂಕ್ಷಿಗಳನ್ನು ನೇಮಕ ಮಾಡಿಕೊಳ್ಳುವ ಗುರಿಯನ್ನು ಹೊಂದಿವೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಈಗಾಗಲೇ ಪದವಿ ಪಡೆದವರು ಹಾಗೂ ಅನುತ್ತೀರ್ಣರಾದವರು ಈ ಮೇಳದಲ್ಲಿ ಭಾಗವಹಿಸಬಹುದಾಗಿದೆ. ಈ ನಿಟ್ಟಿನಲ್ಲಿ ಖಾನಾಪುರ ಪಟ್ಟಣದ ಸರ್ಕಾರಿ ಪದವಿ ಕಾಲೇಜ್ನಲ್ಲಿ ವ್ಯಾಸಂಗ ಪೂರೈಸಿರುವ ನಿರುದ್ಯೌಗಿ ಪದವೀಧರರನ್ನು ಈ ಮೇಳಕ್ಕೆ ಕಳುಹಿಸಲು ಪೂರ್ವ ತಯಾರಿ ನಡೆಸಲಾಗುತ್ತಿದೆ. ಆಸಕ್ತ ಉದ್ಯೌಗಾಕಾಂಕ್ಷಿಗಳು ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ಪ್ರಾಚಾರ್ಯ ಡಾ.ರಮೇಶ ಮಾಂಗಲೇಕರ ಮೊ.9916439133 ಅಥವಾ ಉದ್ಯೌಗ ಅಧಿಕಾರಿ ಡಾ.ವೆಂಕಟೇಶ ಮೊ.9535304838 ಅವರನ್ನು ಸಂಪರ್ಕಿಸಿ ಸೆ.2ರ ಒಳಗೆ ತಮ್ಮ ಹೆಸರು ನೊಂದಾಯಿಸಲು ಪ್ರಕಟಣೆ ತಿಳಿಸಿದೆ.

loading...

LEAVE A REPLY

Please enter your comment!
Please enter your name here