ಅಕ್ಕಿ ಮಾರಾಟ

0
19
loading...

ಕಾಂಗ್ರೆಸ್ ಪಕ್ಷ ಚುನಾವಣಾ ಸಮಯದಲ್ಲಿ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಹೇಳಿದ ಭರವಸೆಗಳನ್ನು  ಈಡೇರಿಸುವ ಕುರಿತು ತುಂಬ ಮುತುವರ್ಜಿ ವಹಿಸಿದೆ. ಅಧಿಕಾರಕ್ಕೆ ಬಂದ  ಎರಡೇ ತಿಂಗಳಲ್ಲಿ ಸಿದ್ದು ಸರಕಾರ  ಪಡಿತರ ಚೀಟಿದಾರರಿಗೆ 30ರೂಗಳಲ್ಲಿ 30 ಕೆ.ಜಿ ಅಕ್ಕಿಯನ್ನು ನೀಡುವ ಯೋಜನೆಯನ್ನು ಜಾರಿಗೊಳಿಸಿತ್ತು ಈ ಅನ್ನಭಾಗ್ಯದೊಂದಿಗೆ ಶಾಲಾ ಮಕ್ಕಳಿಗೆ ಬಿಸಿಯೂಟದೊಂದಿಗೆ ಹಾಲು ಕೊಡುವ ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೊಳಿಸಿತು. ಸಿದ್ದು ಸರಕಾರ ಈ ಯೋಜನೆಗಳನ್ನು ಜಾರಿ ಮಾಡಿತಾದರೂ ಅವಗಳ ಸಾಧಕ ಬಾಧಕಗಳ ಕುರಿತು ಪೂರ್ವ ಭಾವಿಯಾಗಿ ಚಿಂತನೆ ಮಾಡಲೇ ಇಲ್ಲ. ಈ ಮೊದಲೆಲ್ಲಾ ಪಡಿತರ ವ್ಯವಸ್ಥೆಯಲ್ಲಿ ಅಕ್ಕಿ, ಗೋದಿ, ಪಾಮ್ ಆಯಿಲ್, ಸಕ್ಕರೆ ಮುಂತಾದವುಗಳನ್ನು ಕೊಡಲಾಗುತ್ತಿತ್ತು ಆ ಸಮಯದಲ್ಲಿಯೂ ಅನೇಕ ಪಡಿತರದಾರರು ತಮಗೆ ದೊರಕು ಧಾನ್ಯ ಸಕ್ಕರೆ ಸಹಿತ ಖಾಸಗಿಯಾಗಿ ಮಾರಿಕೊಳ್ಳುವ ಯತ್ನ ಮಾಡುತ್ತಿದ್ದರು ಅಲ್ಲದೆ ಅನೇಕರು ಮಾರಿಯೇ ಬಿಡುತ್ತಿದ್ದರು. ಈ ಮಾರಾಟದಿಂದ ಕೈಗೆ ದೊರಕುವ ಹಣದಲ್ಲಿ ತಮ್ಮ ಕುಟುಂಬಕ್ಕೆ ಬೇಕಾದ ಇತರೆ ವಸ್ತಗಳನ್ನು ಖರೀದಿಸುತ್ತಿದ್ದರು ಕಡು ಬಡವರು  ಪಡಿತರ ವ್ಯವಸ್ಥೆಯನ್ನು ಈ ರೀತಿ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದ್ದರು. ಈಗ ಸಕ್ಕರೆಯಾಗಲಿ ಇನ್ನಿತರ ವಸ್ತುಗಳು ಅತ್ಯಂತ ದುಬಾರಿ ಬೆಲೆಗೆ ಪಡಿತರ ವ್ಯಸ್ಥೆಯಲ್ಲಿ ದೊರಕುತ್ತಲಿವೆ. ಆದರೆ ಅಕ್ಕಿ ಮಾತ್ರ ರೂಪಾಯಿಗೆ ಕೆ,ಜಿಯಂತೆ 30 ಕೆಜಿ ದೊರೆತಾಗ ಅದರಲ್ಲಿ 25 ಕೆ.ಜಿಯಷ್ಟು ಮಾರಾವದರೂ  ಕೈಗೆ ಕನಿಷ್ಠ 300 ರೂಗಳು ದೊರಕುತ್ತವೆ ಇದು ಬಡ ಕುಟುಂಬಗಳಿಗೆ ಆಗಬಹುದಾದ ಆರ್ಥಿಕ ಲಾಭದ ಲೆಕ್ಕಾಚಾರ. 3-4 ಜನ ಇರುವ ಒಂದು ಬಡ ಕುಟುಂಬ ತಿಂಗಳಿಗೆ 30 ಕೆ.ಜಿ ಅಕ್ಕಿಯನ್ನು ಬಳಸಲು ಸಾಧ್ಯವಿಲ್ಲ. ಈ ಸತ್ಯವನ್ನು ಸರಕಾರ  ಅರಿತುಕೊಳ್ಳದೆ ಇರುವದು ದುರ್ದೈವದ ಸಂಗತಿ. ಹೆಚ್ಚಿನ ಅಕ್ಕಿಯನ್ನು ಮಾರದೆ ಬಡಕುಟುಂಬಗಳಿಗೆ ಗತ್ಯಂತರ ಇಲ್ಲ ಮುಂದಿನ ತಿಂಗಳಿನ ಅಕ್ಕಿ ಖರೀಸಲು ಅವರ ಬಳಿ ಹಣವೇ ಇರುವದಿಲ್ಲ ಇಂಥ ಸ್ಥಿಯಲ್ಲಿ ಹಣ ಹೊಂದಿಸಿಕೊಳ್ಳಲು ಮಾರಾಟದ ತಂತ್ರವನ್ನು ಬಳಸುವದು ಸಹಜ. ಇದರಿಂದ ಪಡಿತರ ವ್ಯವಸ್ಥೆಯೂ ಹಾಳಾಗಿ ಹೋಗುತ್ತಲೇ ಇದೆ. ಇನ್ನು ಒಂದು ಮಾತು ಹೇಳ ಬೇಕೆಂದರೆ ಅನೇಕ ಕಡೆಗೆ ಪಡಿತರ ವಿತರಕದಾರರೇ ಪಡಿತರದಾರರಿಗೆ ಒಂದಿಷ್ಟು ಹೆಚ್ಚು ಹಣ ಕೊಟ್ಟು ಜೊತೆಗೆ 5 ಕೆ.ಜಿ ಅಕ್ಕಿಯನ್ನು ಕೊಟ್ಟು ಕಳುಹಿಸುವ ಪರಿಪಾಠವೂ ಬೆಳೆಯುತ್ತಲಿದೆ. ಇದು ಇಡೀ ಪಡಿತರ ವ್ಯವಸ್ಥೆಯನ್ನೇ ಬುಡಮೇಲು ಮಾಡಿದರೆ ಅಚ್ಚರಿ ಇಲ್ಲ. ಈ ಟೊಳ್ಳು ವ್ಯವಸ್ಥೆಯನ್ನು ರೂಪಿಸುವ ಮೊದಲು ಸರಕಾರ ಚಿಂತನೆ ಮಾಡಬೇಕಿತ್ತು. ಕುಟುಂಬದಲ್ಲಿ ಎಷ್ಟು ಜನರಿದ್ದಾರೆ ಇದ್ದಾರೆ ಎಂಬ ಲೆಕ್ಕ ಹಾಕಿ ಒಂದು ವ್ಯಕ್ತಿಗೆ ಇಂತಿಷ್ಟು ಅಕ್ಕಿ, ಸಕ್ಕರೆ ಎಂಬ ಹಳೆಯ ಪದ್ಧತಿಯನ್ನು ಜಾರಿಗೆ ತರುವದು ಅತ್ಯಂತ ಅವಶ್ಯವಾಗಿತ್ತು. ಅದನ್ನು ಬಿಟ್ಟು ಒಮ್ಮೆಲ್ಲೆ  ತಿನ್ನಲು ಆಗದಷ್ಟು ಭಾರೀ ಪ್ರಮಾಣದ ಅಕ್ಕಿ ಸರಬರಾಜು ಮಾಡಿದರೆಈ ವ್ಯವಸ್ಥೆ ಹಳ್ಳ ಹಿಡಿದಂತೆ ಆಗುವದು. ಬೇರೆ ರಾಜ್ಯಗಳಿಂದ ಹೆಚ್ಚಿಗೆ ಹಣ ನೀಡಿ ಖರೀದಿಸಿದ ಅಕ್ಕಿ ಇಲ್ಲಿ ಕಡ ಬಡುವರಿಗೆ ದಕ್ಕದೆ ಕಳ್ಳ ಸಂತೆಕೋರರ ಪಾಲಾಗುತ್ತಿರುವದು ವಿಷಾದನೀಯ.  ಸರಕಾರ ಬೇಗ ಎಚ್ಚೆತ್ತು ಇಂಥ ಘಟನೆ ಸಂಭವಿಸದಂತೆ ಕಾನೂನು ಕ್ರಮ ತೆಗೆದಕೊಳ್ಳುವದು ಸೂಕ್ತ. ಸರಕಾರ ಇನ್ನೊಂದು ಯೋಜನೆಯಾದ ಕ್ಷೀರಭಾಗ್ಯ ಆತಂಕಕಾರಿ ವಿಷಯವಾಗಿ ಪರಿಣಮಿಸುತ್ತಲಿದೆ. ರಾಜ್ಯಸ ಕೆಲ ಕಡೆಗಳಲ್ಲಿ ಶಾಲಾ ಮಕ್ಕಳು ಬಿಸಿಯೂಟದ ಜೊತೆಗೆ ಹಾಲನ್ನು ಕುಡಿದು ಅಸ್ವಸ್ಥರಾದ ಘಟನೆಗಳು ವರದಿಯಾಗಿವೆ.  ಇದರ ಜೊತೆಗೆ ಬಿಸಿಯೂಟ ತಿಂದು ಅಸ್ವಸ್ಥರಾದ ಘಟನೆಗಳು ನಡೆದಿವೆ. ಬಿಸಿಯೂಟ, ಹಾಲು ಪೂರೈಸುವವರ ಹೊನೆಗೇಡಿತನದಿಂದಾಗಿ ಇಂಥ ಅವಾಂತರಗಳು ಸಂಭವಿಸುತ್ತಲಿವೆ ಎಂಬುವದು ಅತ್ಯಂತ ಸ್ಪಷ್ಟ. ಅದರಲ್ಲಿಯೂ ಚಿಕ್ಕೌಡಿಯಲ್ಲಿ ಬಾಲಕನೊಬ್ಬ ಬಿಸಿಯೂಟ ಸಾಂಬಾರದಲ್ಲಿ ಬಿದ್ದು ಗಾಯಗೊಂಡ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಓರ್ವ ಬಾಲಕಿ ಸಾಂಬಾರ ಬಾಂಡೆಯಲ್ಲಿ ಬಿದ್ದು ಅಸುನೀಗಿದಳು. ಇವೆಲ್ಲವು ಹೊಣೆಗೇಡಿತನದ ಕೃತ್ಯಗಳಾಗಿವೆ. ಇವುಗಳಿಗೆ ಸಂಬಂಧಿಸಿದಂತೆ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಂಡರೆ ಸಾಲದು ಭವಿಷ್ಯದಲ್ಲಿ ಇಂಥ ಘಟನೆ ಜರುಗದಂತೆ ಸೂಕ್ತ ಕ್ರಮಕೈಗೊಳ್ಳುವದು ಅತಿ ಅವಶ್ಯ. ಬಿಸಿಯೂಟ ತಯಾರಿಸುವಾಗ ಅಥವಾ ಕ್ಷೀರಭಾಗ್ಯದಡಿ ಹಾಲನ್ನು ಪೂರೈಸುವಾಗ ಅತ್ಯಂತ ಜಾಗೃತಿಯಿಂದ ಶಿಸ್ತಿನ ಕ್ರಮಗಳನ್ನು ಅನುಸರಿಸುವದು ಅನಿವಾರ್ಯವೂ ಆಗಿದೆ.

ಈ ಹಿಂದೆಯೂ ಬಿಸಿಯೂಟದಿಂದ ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಅನೇಕ ಘಟನೆಗಳು ಜರುಗಿದ್ದರು ಸಂಬಂಧಿಸಿದ ಇಲಾಖೆಗಳು ಆಗಲಿ ಅಥವಾ ಸರಕಾರದವರೆ ಆಗಲಿ ಗಂಭೀರ ಕ್ರಮ ತೆಗೆದುಕೊಳ್ಳದೆ ಇರುವದು ಸಾರ್ವಜನಿಕರ ಆಕ್ರೌಶಕ್ಕೆ ಗುರಿಯಾಗಿದ್ದು ಸಹಜ ಶಾಲೆಗಳಲ್ಲಿ ಮಕ್ಕಳಿಗೆ ಬೇಕಾಬಿಟ್ಟ ಶಿಕ್ಷೆ ವಿಧಿಸಿ ವಿವಾದಕ್ಕೆ ಕಾರಣವಾಗುವ ಶಿಕ್ಷಕರು ಮಕ್ಕಳ ಸುರಕ್ಷಿತಬಗ್ಗೆಯೂ ಗಮನ ಕೊಡುವದು ಆಗಬೇಕಾದ ಪರಮ ಕರ್ತವ್ಯ ಆಗಿದೆ. ಈ ನಿಟ್ಟಿನಲ್ಲಿ ಸರಕಾ ಸರಿಯಾದ ಕ್ರಮಗಳನ್ನು ತೆಗೆದಕೊಳ್ಳಬೇಕು.

loading...

LEAVE A REPLY

Please enter your comment!
Please enter your name here