ಜಗನ್ಗೆ ಜಾಮೀನು

0
21
loading...

ಹೈದರಾಬಾದ್, ಸೆ.23: ಅಕ್ರಮ ಆಸ್ತಿ ಪ್ರಕರಣದ ಆರೋಪಿಂುುಾಗಿ ಜೈಲು ಸೇರಿ ಸುಮಾರು ಒಂದು ವರ್ಷದ ನಂತರ ವೈಎಸ್ಸಾರ್ ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ನಾಂಪಲ್ಲಿ ಸಿಬಿಐ ವಿಶೇಷ ನ್ಯಾಂುುಾಲಂುು ಸೆ.23ರಂದು ಜಾಮೀನು ಮಂಜೂರು ಮಾಡಿದೆ.

ಹೈದರಾಬಾದಿನ ನಾಂಪಲ್ಲಿಂುುಲ್ಲಿರುವ ಸಿಬಿಐ ನ್ಯಾಂುುಾಲಂುು ಸೋಮವಾರ ಮಾಜಿ ಸಚಿವ ಮೋಪಿದೇವಿ ವೆಂಕಟರಮಣ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಜೈಲುವಾಸ ಅನುಭವಿಸುತ್ತಿರುವ ಜಗನ್ ಮೇಲಿನ ಕೇಸುಗಳನ್ನು ನಾಲ್ಕು ತಿಂಗಳಿನಲ್ಲಿ ಮುಕ್ತಾಂುುಗೊಳಿಸುವಂತೆ ಸಿಬಿಐ ತಂಡಕ್ಕೆ ಸುಪ್ರೀಂಕೊರ್ಟ ಕಳೆದ ಮೇ ತಿಂಗಳಿನಲ್ಲಿ ಆದೇಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಸಿಬಿಐ ವಿಶೇಷ ನ್ಯಾಂುುಾಲಂುು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಗನ್ ಮೋಹನ್ ರೆಡ್ಡಿ ಅವರ ಜಾಮೀನು ಅರ್ಜಿ ವಿಚಾರಣೆಂುುನ್ನು ಸೆ.18 ರಂದು ಕೈಗೆತ್ತಿಕೊಂಡು ವಿಚಾರಣೆ ನಡೆಸಲಾಗಿದೆ.

ಸಿಬಿಐ ತಂಡ ಮಂಗಳವಾರ ಪ್ರತ್ಯೇಕವಾಗಿ ಚಾರ್ಜ ಶೀಟ್ ಸಲ್ಲಿಸಿ ಇನ್ನಷ್ಟು ಆರೋಪಿಗಳನ್ನು ಈ ಪ್ರಕರಣದಲ್ಲಿ ಹೆಸರಿಸಿದೆ. ಒಟ್ಟಾರೆ ತನಿಖೆ, ಚಾರ್ಚ ಶೀಟ್ ಸಲ್ಲಿಕೆಗೆ ಇನ್ನಷ್ಟು ಕಾಲ ಬೇಕು ಎಂದು ಸಿಬಿಐ ಅರ್ಜಿ ಹಾಕಿದೆ. ಸಿಬಿಐ ಹೊಸ ಚಾರ್ಜ ಶೀಟ್ನಲ್ಲಿ ಆಂಧ್ರದ ಕೈಗಾರಿಕಾ ಮಂತ್ರಿ ಜೆ ಗೀತಾ ರೆಡ್ಡಿ ಹೆಸರು ಸೇರ್ಪಡೆಗೊಂಡಿದೆ. ಆದರೆ, ಸಿಬಿಐ ವಿಶೇಷ ಕೋರ್ಟ ತೀರ್ಪನ್ನು ಪ್ರಕಟಿಸಿದೆ.

loading...

LEAVE A REPLY

Please enter your comment!
Please enter your name here