ನ್ಯಾಯಬಾಗಿಲಿಗೆ ಬೆಂಕಿ

0
11
loading...

ಗೋಕಾಕ:ಇಲ್ಲಿನ ನ್ಯಾಯಾಲಯದ ಕಟ್ಟಡಕ್ಕೆ ಬೆಂಕ್ಕಿ ಹಚ್ಚುವ ವಿಫಲ ಯತ್ನ ನಡೆದಿದೆ.ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು ಗೋಕಾಕ ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ನ್ಯಾಯವಾದಿಗಳ ಸಂಘದ ಕೊಠಡಿ ಬಾಗಿಲಿಗೆ ಬೆಂಕಿ ಹಚ್ಚುವ ಪ್ರಯತ್ನ,ಹಲವಾರು ಸಂಶಯಗಳಿಗೆ ಎಡೆ ಮಾಡಿ ಕೊಟ್ಟಿದೆ.

ಪ್ರಕರಣ ಕುರಿತು ತನಿಖೆ ನಡೆಸಿ ಶೀಘ್ರ ತಪ್ಪಿಸ್ಥರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಕೊಳ್ಳಬೇಕೆಂದು ಒತ್ತಾಯಿಸಿ ನ್ಯಾಯವಾದಿಗಳು ಇಂದು ನ್ಯಾಯಾಲಯದ ಕಾರ್ಯಕಲಾಪಗಳಿಂದ ದೂರ ಉಳಿದು ಪ್ರತಿಭಟನೆ ವ್ಯಕ್ತಪಡಿಸಿದರು.

ಕಿಡಿಗೇಡಿ ಕೃತ್ಯದ ಶಂಕೆ;ಸೋಮವಾರ ನ್ಯಾಯಾಲದ ಆವರಣದಲ್ಲಿ ದ್ವಿಚಕ್ರ ವಾಹನ ನಿಲ್ಲಿಸುವ ವಿಷಯಕ್ಕೆ ವಾದ ವಿವಾದ ಉಂಟಾಗಿದೆ. ದ್ವಿಚಕ್ರ ವಾಹನದ ಗಾಳಿ ತೆಗೆದ ವಿಷಯಕ್ಕೆ ವಾಹನ ಸವಾರ,ಜವಾನನ ಮದ್ಯೆ ವಾಗ್ವಾದವಾಗಿದೆ. ನ್ಯಾಯವಾದಿಗಳು ದ್ವಿಚಕ್ರವಾಹನ ಸವಾರನಿಗೆ ಬುದ್ದಿ ಹೇಳಿದ್ದಾರೆ. ಈ ಘಟಣೆಗೆ ಸಂಬಂದಪಟ್ಟಂತೆ ದ್ವಿಚಕ್ರ ವಾಹನದವನ ಮೇಲೆ ಸಂಶಯ ಪಟ್ಟರೆ ಮತ್ತೊಂದು ಮೂಲದ ಪ್ರಕಾರ ಆತನನ್ನೆ ಪ್ರಕರಣದಲ್ಲಿ ಸಿಲುಕಿಸಲು ಈ ಕೃತ್ಯ ನಡೆದಿದೆ ಎನ್ನಲಾಗುತ್ತಿದೆ. ಯಾವುದಕ್ಕೂ ಪೊಲೀಸ್ ಇಲಾಖೆಯ ತನಿಖೆಯಿಂದ ಸತ್ಯ ಹೊರಬೀಳಬೇಕಿದೆ. ನ್ಯಾಯಾಲಯದ ಕಟ್ಟಡದ ಬಾಗಿಲಿಗೆ ಬೆಂಕಿ ಹಚ್ಚಿದ ಭೂಪ ಯಾರೆಂಬುದು ನಗರದ ಜನತೆಯಲ್ಲಿ ಕುತೂಹಲ ಮೂಡಿಸಿದೆ

loading...

LEAVE A REPLY

Please enter your comment!
Please enter your name here