ಮನಸ್ಸಿನ ನಿಯಂತ್ರಣಕ್ಕೆ ದ್ಯಾನ ಅವಶ್ಯಕ : ಉಮಾಶ್ರೀ

0
153
loading...

ಮಹಾಲಿಂಗಪುರ : ದ್ಯಾನ ಮಾಡುವುದರಿಂದ ಮಾತ್ರ ಮನುಷ್ಯನ ಬುದ್ದಿ ಮತ್ತು ಮನಸ್ಸುನ್ನು ನಿಯಂತ್ರಣದಲ್ಲಿಡಲು ಸಾಧ್ಯ ಎಂದು ಕನ್ನಡ ಮತ್ತು ಸಂಸ್ಕ್ಕತಿ ಇಲಾಖೆ ಸಚಿವೆ ಉಮಾಶ್ರೀ ಹೇಳಿದರು.

ಇವರು ತಾ. 18 ರಂದು ಸೈದಾಪುರ- ಸಮೀರವಾಡಿ ಶ್ರೀ ಸ.ಸ. ಮಾಧವಾನಂದ ಪ್ರಭುಜಿ ಸಾಂಸ್ಕ್ಕತಿಕ ಆಧ್ಯಾತ್ಮ ಆಶ್ರಮದಲ್ಲಿ ವಿಶ್ವ ಶಾಂತಿಗಾಗಿ ದ್ಯಾನಯೋಗ ಸಾಧನ ಸಪ್ತಾಹ ಹಾಗೂ ಶ್ರೀ ಸ.ಸ. ಮಾಧವಾನಂದ ಪ್ರಭುಜಿಯವರ ಮತ್ತು ಶ್ರೀ ಸ.ಸ ಗೀರೀಶ ಶ ಮೈತ್ರಿ ಮಹಾರಾಜರ ಪುಣ್ಯತಿಥಿ ಸಪ್ತಾಹದ ಸಮಾರೋಪ ಸಮಾರಂಭವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು ಇಂಚಗೇರಿ ಸಾಂಪ್ರದಾಯದ ಕಾರ್ಯಕ್ರಮಗಳು ಜ್ಯಾತ್ಯಾತೀತವಾಗಿ ನಡೆದುಬಂದಿರುವದು ಜನರಲ್ಲಿ ಜ್ಯಾತಿ ಭಾವನೆ ಹೊಗಲಾಡಿಸಲು ಅನುವುಮಾಡಿದಂತಾಗಿದೆ. ಅಲ್ಲದೆ ಮನುಷ್ಯನು ದಿನನಿತ್ಯದ ತನ್ನ ಕೆಲಸದ ಒತ್ತಡದ ಗಡಿಬಿಡಿಯಲ್ಲಿ ತನ್ನ ಮನಶಾಂತಿ ಕಳೆದುಕೊಳ್ಳುತ್ತಿದ್ದಾನೆ. ಇದರಿಂದ ಅನಾಹುತಗಳೆ ಹೆಚ್ಚು ಆದ್ದರಿಂದ ಇಂಥ ಆದ್ಯಾತ್ಮ ಕಾರ್ಯಕ್ರಮಗಳಲ್ಲಾದರೂ ಆ ಭಗವಂತ ದ್ಯಾನ ಮಾಡುವುದರಿಂದ ಮನಸ್ಸು ನಿಯಂತ್ರಣಕ್ಕೆ ಬರುತ್ತದೆ ಎಂದರು.

ಶ್ರೀ ಬೆನ್ನಾಳ ಮಹಾರಾಜರು, ಗುರುನಾಥ ಮಹಾರಾಜರು, ಪಾರೀಸಪ್ಪ ಗುರ್ಲಾಪುರ, ಗುರುನಾಥ ಮಹಾರಾಜರು, ಪ್ರದೀಪ ಮಹಾರಾಜರು,ಶಿವಶರಣೆ ಚ್ಯಾಯಾದೇವಿ ಚೌಗಲಾ ಶಿವಾನಂದ ಮಹಾರಾಜರು, ತಾ. 17-18 ರಂದು ಎರಡು ದಿನಗಳ ಕಾಲ ಪುರಾಣ ಪ್ರವಚನ ಉಪನ್ಯಾಸ ನೀಡಿದರು. ಮಂಗಳವಾರ ರಂದು ರಾತ್ರಿ ಜಾಗರಣೆ ನಿಮಿತ್ಯವಾಗಿ ಶ್ರೀ ಮಾಧವಾನಂದ ಭಜನಾ ಮಂಡಳಿ ಕಪ್ಪಲಗುದ್ದಿ ಹಾಗೂ ಶಿವಲಿಂಗೇಶ್ವರ ಭಜನಾ ಮಂಡಳ ಸೈದಾಪುರ ಸಮೀರವಾಡಿ ಇವರಿಂದ ಭಜನೆಗಳ ಜರುಗಿದವು. ಕಪ್ಪಲಗುದ್ದಿ ಕ್ಷೇತ್ರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ದಿಂಡಿ ಪಲ್ಲಕ್ಕಿಯೊಂದಿಗೆ ಪಾದಯಾತ್ರಿಕರು ಆಗಮಿಸಿದ್ದರು. ಹಾಗೂ ಸಹಸ್ರಾರು ಸಂಖ್ಯೆಯಲ್ಲಿ ನಾಮ ಧಾರಿ ಸಂತರು ಭಕ್ತಾಧಿಗಳು ಪಾಲ್ಗೊಂಡಿದ್ದರು.

ವೇದಿಕೆ ಮೇಲೆ ಮಹಾಲಿಂಗಪ್ಪ ಕೋಳಿಗುಡ್ಡ, ರಂಗನಗೌಡ ಪಾಟೀಲ, ಸಂಗಪ್ಪ ಹಲ್ಲಿ, ಶಿವಲಿಂಗಪ್ಪ ಮುಸಿ, ದುಂಡಪ್ಪ ಜಾಧವ, ಜಾವೇದ ಬಾಗವಾನ, ಶಂಕರ ಸೋರಗಾಂವಿ, ತುಕಾರಾಂ ಮಹಾರಾಜರು ಇದ್ದರು.

ಮಂಗಳವಾರ ಸಂಜೆ 4 ಘಂ.ಗೆ ಇಂಚಗೇರಿ ಮಠದ ಸದ್ಗುರು ಶ್ರೀ ಪ್ರಭುಜಿ ಬೆನ್ನಾಳ ಮಹಾರಾಜರ ಅಮೃತ ಹಸ್ತದಿಂದ ದಾಸಭೋದ ಹಾಗೂ ವೀಣಾ ಪೂಜೆಯೊಂದಿಗೆ ಪ್ರಾರಂಭವಾಗಿ ಬುಧುವಾರ ಮುಂಜಾನೆ 11 ಘಂ.ಗೆ ವಿಮಲ ಬ್ರಹ್ಮ ನಿರೂಪಣೆ ಪುಷ್ಪವೃಷ್ಠಿಯೊಂದಿಗೆ ಸಪ್ತಾಹವು ಮಂಗಲಗೊಂಡಿತು.

ಯಲ್ಲಪ್ಪ ಮುಗಳಖೋಡ, ಮಲ್ಲಪ್ಪ ಬಾಯಪ್ಪಗೋಳ, ಮಲಗೌಡ ಪಾಟೀಲ, ಭೀಮಶಿ ತಿಮ್ಮಾಪುರ, ಅಣ್ಣೇಶಗೌಡ ಉಳ್ಳಾಗಡ್ಡಿ, ಮಹಾದೇವ ಮೇಟಿ, ಮುತ್ತು ನಾಯಿಕ. ಬಿ.ಬಿ. ಉಂದ್ರಿ, ಬಾಬು ಜಾಡರ, ಮಲ್ಲಪ್ಪ ನಾವಿ, ಎ.ಬಿ.ಕೋಳಿ, ರಾಜು ಸರಕೌಸ, ಬಸು ಉದಗಟ್ಟಿ ಉಪಸ್ಥೀತರಿದ್ದರು. ನಿರೂಪಣೆ ಡಾ. ಆರ್.ಎಸ್. ದೊಡ್ಡನಿಂಗಪ್ಪಗೋಳ. ವಂದನಾರ್ಪಣೆ ಭರತೇಶ ಉಂದ್ರಿ ಮಾಡಿದರು.

loading...

LEAVE A REPLY

Please enter your comment!
Please enter your name here