ವಿದ್ಯಾರ್ಥಿಗಳು ಗಣಿತದ ಮಹತ್ವ ತಿಳಿಯಿರಿ

0
61
loading...

ಬೈಲಹೊಂಗಲ:27- ಗಣಿತ ವಿಷಯದ ಮಹತ್ವದ ಬಗ್ಗೆ ಪ್ರತಿಯೊಬ್ಬ ವಿದ್ಯಾರ್ಥಿ ತಿಳಿದುಕೊಳ್ಳುವ ಅವಶ್ಯಕತೆ ಇದೆ ಎಂದು ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಂ.ಡಿ.ನಂದೆಣ್ಣವರ ಹೇಳಿದರು.

ತಾಲೂಕಿನ ಅಮಟೂರ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಡಾ.ಡಿ.ಸಿ.ಪಾವಟೆ ಗಣಿತ ಸಂಘದಿಂದ ನಡೆದ ಗಣಿತ ಶಿಕ್ಷಕರು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಗಣಿತ ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ಆಗುವ ಪ್ರಯೋಜನ ಹಾಗೂ ಗಣಿತದ ಮಹತ್ವದ ಬಗ್ಗೆ ಮಾತನಾಡಿದರು. ಎಂ.ಡಿ.ಬೆನಕಟ್ಟಿ ಅಧ್ಯಕ್ಷತೆವಹಿಸಿದ್ದರು. ನೂತನವಾಗಿ ಎನ್ಜಿಓ ನಿರ್ದೇಶಕರಾದ ಎಸ್.ವ್ಹಿ.ಯರಡ್ಡಿ ಅವರನ್ನು ಸನ್ಮಾನಿಸಲಾಯಿತು.  ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದ ಎಸ್.ಡಿ.ಪಾಟೀಲ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿನಿ ದೀಪಾ ಸಂಪಗಾಂವಿ ಇವರನ್ನು ಗಣಿತ ಶಿಕ್ಷಕರ ಸಂಘದಿಂದ ಸತ್ಕರಿಸಲಾಯಿತು.

ಜಿ.ಎ. ಮೂಲಿಮನಿ, ಸಂಪನ್ಮೂಲ ಶಿಕ್ಷಕ ಶಂಕರ ರೇವಣ್ಣವರ, ಈರಣ್ಣ ವಾಲಿ ಉಪಸ್ಥಿತರಿದ್ದರು. ಎಸ್.ಕೆ.ತಲ್ಲೂರ ನಿರೂಪಿಸಿ, ವಂದಿಸಿದರು

loading...

LEAVE A REPLY

Please enter your comment!
Please enter your name here