ವಿವಿಧ ಬೇಡಿಕೆಗೆ ಒತ್ತಾಯಿಸಿ ಗ್ರಾಪಂ ನೌಕರರಿಂದ ಜಿಪಂಗೆ ಮುತ್ತಿಗೆ

0
21
loading...

ಬೆಳಗಾವಿ,16: ಜಿಲ್ಲೆಯ ಗ್ರಾಮ ಪಂಚಾಯತಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಕನಿಷ್ಠ ವೇತನ, ತುಟ್ಟಿ ಭತ್ಯ, ಸೇವಾ ಬಡ್ತಿ ಸೇರಿದಂತೆ ವಿವಿಧ ಸೌಲತ್ತು ಕಲ್ಪಿಸಬೇಕೆಂದು ಒತ್ತಾಯಿಸಿ ಸೋಮವಾರ ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಜಿಲ್ಲಾ ಸಂಘಟನೆಯಿಂದ ಬೇಡಿಕೆ ಇಡೇರಿಸುವಂತೆ ಬೆಳಗಾವಿ ಜಿಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.

ಸಂಘಟನೆಯ ಅಧ್ಯಕ್ಷ ವಿ.ಪಿ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಜಿ.ಎನ್. ಜೈನೆಖಾನ, ಯು.ಎಫ್ ದಂಡಿನ, ವಿ.ಎಸ್ ಪಟ್ಟೇದ, ಎಸ್.ಬಿ.ಭಜಂತ್ರಿ, ಕಲ್ಲಪ್ಪ ಮಾದರ, ಬಿ.ಎನ್ ಪಾಟೀಲ, ಟಿ.ಎ.ಭಜಗೌಡ, ವಾಗಪ್ಪ ಚೌಗಲಾ, ಅನುಜದ ಜಮಾದಾರ, ದುರ್ಗಪ್ಪ ಕುರಂಗಿ, ನಾಗೇಶ ನಾವಲಗಿ ಮೊದಲಾದವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಕ್ಷಣ ನೌಕರರ ಬೇಡಿಕೆ ಇಡೇರಿಸದಿದ್ದಲ್ಲಿ ಬರುವ ದಿನಗಳಲ್ಲಿ ಉಗ್ರಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.

ಕಳೆದ 2011ರಲ್ಲಿ ಸರಕಾರ ವೇತನ ನಿಗದಿ ಮಾಡಿದಂತೆ ಬಟವಡೆ ಮಾಡಬೇಕು ಪಂಚಾಯತ ಕ್ಲಾರ್ಕಗೆ 4.807 ರೂ, ಪಂಪಮ್ಯಾನ್ಗೆ 4.698ರೂ. ವಾಟರ್ಮನ್ಗೆ 4.587 ರೂ, ಸಿಪಾಯಿಗೆ 3.484 ರೂ ವೇತನ ನಿಗದಿ ಪಡಿಸಿದ್ದರೂ ಈ ವೇತನ ನೀಡಲಾಗುತ್ತಿಲ್ಲ.  ತಕ್ಷಣ ತುಟ್ಟಿ ಭತ್ಯ ಸೇರಿಸಿ ಈ ವೇತನ ನೀಡುವುದಾಗಬೇಕು ಎಂದು ಒತ್ತಾಯಿಸಿದರು.

ಬಹುತೇಕ ಕಡೆಗಳಲ್ಲಿ 12-14 ತಿಂಗಳವರೆಗೆ ವೇತನವಾಗುತ್ತಿಲ್ಲ. ಅಭಿವೃದ್ದಿ ಅನುದಾನದಲ್ಲಿ ಶೇ.40 ರಷ್ಟು ಹಾಗೂ ವಸೂಲಿಯ ಶೇ.40 ಹಣ ಮೀಸಲಿಟ್ಟು ವೇತನ ನೀಡಬೇಕೆಂದು ಆದೇಶ ಮಾಡಿದ್ದರೂ ಈ ನಿಯಮ ಪಾಲಿಸಲಾಗುತ್ತಿಲ್ಲ ಎಂದು ನೌಕರರು ಆರೋಪಿಸಿದರು. ಬಿಲ್ಲ್ ಕಲೇಕ್ಟರ್ಗಳು ಬಡ್ತಿ ಹೊಂದಿ ಕ್ಲರ್ಕ ಹುದ್ದೆಗಳು ತೆರವಾದಲ್ಲಿ ಅದೇ ಪಂಚಾಯತಿಯಲ್ಲಿ 5 ವರ್ಷ ಮೇಲ್ಪಟ್ಟ ಸಿಬ್ಬಂದಿಗೆ ಕ್ಲರ್ಕ ಹುದ್ದೆಗೆ ಬಡ್ತಿ ನೀಡಬೇಕೆಂದು ಆಗ್ರಹಿಸಲಾಯಿತು.

2003ರ ಆದೇಶದಂತೆ ಸಿಬ್ಬಂಧಿ ನೇಮಕಾತಿಗೆ ಜಿಪಂ ಪೂರ್ವಾನುಮತಿ ಪಡೆಯುವ ಆದೇಶವಿದ್ದರೂ ಇದನ್ನು ಪಾಲಿಸಲಾಗುತ್ತಿಲ್ಲ. ಸೇವಾ ಪುಸ್ತಕ, ರಜೆ, ಗ್ರಾಚ್ಯೂಟಿ ಸೌಲಭ್ಯ ನೀಡಬೇಕು ತಕ್ಷಣ ಜಿಲ್ಲೆಯ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳ ಹಾಗೂ ಸಿಬ್ಬಂದಿಯ ಸಭೆ ನಡೆಸಿ ಬೇಡಿಕೆ ಇಡೇರಿಸುವಂತೆ ನೌಕರರು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಜಿಪಂ ಅಧಿಕಾರಿ ಈ ಕುರಿತು ಕ್ರಮ ಜರುಗಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.

loading...

LEAVE A REPLY

Please enter your comment!
Please enter your name here