ಸೋಲೆ ಗೆಲುವಿನ ಸೋಪಾನ – ಬನಶಂಕರಿ

0
67
loading...

ಪಾಲಭಾಂವಿ 23: ಕ್ರೀಡೆಯಲ್ಲಿ ಸೋಲು, ಗೆಲುವು ಅನಿವಾರ್ಯ. ಕ್ರೀಡಾಪಟುಗಳು ಸೋಲನ್ನು ಲೆಕ್ಕಿಸದೆ ಕ್ರೀಡೆಯನ್ನು ಕ್ರೀಡಾ ಮನೋಭಾವನೆಯಿಂದ ಆಡಬೇಕು. ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಎರಡನ್ನೂ ಸಮಾನ ಭಾವನೆಯಿಂದ ಸ್ವೀಕರಿಸಬೇಕು. ಕ್ರೀಡೆಯಲ್ಲಿ ಸೋಲೇ ಗೆಲುವಿನ ಸೋಪಾನ ಎಂದು ಕ್ರೀಡಾಪಟುಗಳು ಮನಗಂಡು ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಬೇಕೆಂದು ಗ್ರಾ.ಪಂ. ಸದಸ್ಯ ಭೀಮಶಿ ಬನಶಂಕರಿ ಹೇಳಿದರು.

ಅವರು ಸಮೀಪದ ಮುಗಳಖೋಡ ಗ್ರಾಮದ ಬನಶಂಕರಿ ನಗರದಲ್ಲಿ ಮೊದಲ ವರ್ಷದ ಗಣೇಶ ಪ್ರತಿಷ್ಠಾಪನಾ ಸಮಾರಂಭದ ಪ್ರಯುಕ್ತ ಶ್ರೀ ರೇಣುಕಾದೇವಿ ಶಿಕ್ಷಣ ಸಂಸ್ಥೆ ಇವರ ಆಶ್ರಯದಲ್ಲಿ ಪುರುಷರ ಮುಕ್ತ ಕಬಡ್ಡಿ ಪಂದ್ಯಾವಳಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿ.ಪಂ. ಸದಸ್ಯ ಪ್ರಣಯ ಪಾಟೀಲ ಕ್ರೀಡೆಗೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಜಿ.ಪಂ. ಮಾಜಿ ಸದಸ್ಯ ಡಾ.ಸಿ.ಬಿ. ಕುಲಿಗೋಡ, ಪಿಕೆಪಿಎಸ್ ಬ್ಯಾಂಕ ಅಧ್ಯಕ್ಷ ಮಾರುತಿ ಗೋಕಾಕ, ಎಪಿಎಮ್ಸಿ ಮಾಜಿ ಉಪಾಧ್ಯಕ್ಷ ಹನಮಂತ ಶೇಗುಣಸಿ, ಗಿರಿಗೌಡ ಪಾಟೀಲ, ಗ್ರಾ.ಪಂ. ಅಧ್ಯಕ್ಷೆ ಮಲ್ಲವ್ವ ಹಳಿಂಗಳಿ, ಉಪಾಧ್ಯಕ್ಷೆ ಲತಾ ಹುದ್ದಾರ, ಪಿಡಿಓ ಶ್ರೀಕಾಂತ ಯಡ್ರಾಂವಿ, ಸಿದ್ಧಲಿಂಗ ತೂಗದಲಿ (ವಕೀಲರು) ರಾಯಗೌಡ ಖೇತಗೌಡ ಆಗಮಿಸಿದ್ದರು. ಕ್ರೀಡಾಕೂಟದಲ್ಲಿ 26 ಕಬಡ್ಡಿ ತಂಡಗಳು ಭಾಗವಹಿಸಿ ದ್ದವು. ಪ್ರಥಮ ಸ್ಥಾನಕ್ಕಾಗಿ ಶ್ರೀ ಬಸವೇಶ್ವರ ಕಬಡ್ಡಿ ತಂಡ ತೇರದಾಳ ಹಾಗೂ ಶ್ರೀ ಕರಿಸಿದ್ದೇಶ್ವರ ಕಬಡ್ಡಿ ತಂಡ ಆಲಕನೂರ ಕಬಡ್ಡಿ ತಂಡಗಳ ನಡುವೆ ತುರುಸಿನ ಪಂದ್ಯದಲ್ಲಿ ಶ್ರೀ ಬಸವೇಶ್ವರ ಕಬಡ್ಡಿ ತಂಡ ತೇರದಾಳ ಜಯಶಾಲಿಯಾಗಿ ನಗದು ಬಹುಮಾನ ಹಾಗೂ ಡಾಲ್ ಪಡೆದುಕೊಂಡಿತು. ಎಲ್.ಬಿ.ಮುನ್ಯಾಳ, ಎಸ್.ಪಿ. ತಹಶೀಲ್ದಾರ, ಎಸ್.ಎಸ್.ರಗಟಿ ಹಾಗೂ ಮಲ್ಲಾಪೂರ ಸರ್ ನಿರ್ಣಾಯಕರಾಗಿದ್ದರು. ಮುಖ್ಯೌಪಾಧ್ಯಾಯ ಎಮ್.ಜೆ.ಪಾರತನಳ್ಳಿ ಸ್ವಾಗತಿಸಿ, ನಿರೂಪಿಸಿದರು. ಎಸ್. ಎಸ್. ಮುನ್ಯಾಳ ವಂದಿಸಿದರು.

loading...

LEAVE A REPLY

Please enter your comment!
Please enter your name here