ಅಕ್ರಮ ಕಲ್ಲು ಗಣಿಗಾರಿಕೆಯ ಕ್ರಶರ್ಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಪ್ರತಿಭಟನೆ

0
26
loading...

ಬ್ಯಾಡಗಿ: ತಾಲೂಕಿನ ಛತ್ರ ಗ್ರಾಮದ ಹತ್ತಿರ ನಡೆಯುತ್ತಿರುವ ಸುಮಾರು 20ಕ್ಕಿಂತಲೂ ಹೆಚ್ಚಿನ ಅಕ್ರಮ ಕಲ್ಲು ಗಣಿಗಾರಿಕೆಯ ಕ್ರಶರ್ಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಛತ್ರ ಗ್ರಾಮದ ನಾಗರಿಕರು ಪಟ್ಟಣದಲ್ಲಿ ಪ್ರತಿಭಟನೆ ಮಾಡುವ ಮೂಲಕ ಸೋಮವಾರ ಉಪತಹಶೀಲದಾರ ನಾಯಕ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರವಿಕುಮಾರ ಓಲೇಕಾರ ಮಾತನಾಡಿ ಛತ್ರ ಗ್ರಾಮದ ಬಳಿಯಲ್ಲಿ ಹಲವು ವರ್ಷಗಳಿಂದ ಅಕ್ರಮ ಕಲ್ಲು ಗಣಿಕಾರಿಕೆಗಳ ಕ್ರಶರ್ಗಳು  ನಡೆಸುತ್ತಲಿವೆ. ಇದರಿಂದಾಗಿ  ಅನೇಕ ಗುಡ್ಡಗಳು, ಬಂಡೆಗಳು ಹಾಳಾಗುವ ಮೂಲಕ ನಮ್ಮ ಪರಿಸರವು ನಾಶವಾಗುತ್ತಲಿದೆ. ರಾಷ್ಟ್ತ್ರೀಯ ಹೆದ್ದಾರಿ ಬಳಿಯಿಂದ ಸುಮಾರು 2 ಕಿ.ಮೀಟರ್ ದೂರದಲ್ಲಿ ಕ್ರಶರ್ಗಳನ್ನು ಪ್ರಾರಂಭಿಸುವಂತೆ ಇಲಾಖೆಯ ನಿಯಮಗಳಿದ್ದರೂ ಕೂಡಾ ಅಧಿಕಾರಿಗಳು ಇದ್ಯಾವುದನ್ನು ಪರೀಶೀಲಿಸದೇ ಕ್ರಶರ್ ಮಾಲೀಕರಿಂದ ಕಪ್ಪ ಕಾಣಿಕೆಗಳನ್ನು ಪಡೆದು ಏನೂ ಅರಿಯದವರಂತಿದ್ದಾರೆ. ಅಕ್ರಮ ಕಲ್ಲುಗಣಿಗಳ ಕ್ರಶರ್ಗಳು ರಾಷ್ಟ್ತ್ರೀಯ ಹೆದ್ದಾರಿಗೆ ಹೊಂದಿಕೊಂಡು ಅತಿ ಸ್ವಮೀಪದಲ್ಲಿ ಕಾರ್ಯನಿರ್ವಹಿಸುತ್ತಲಿದ್ದರೂ ಕೂಡಾ ಕಣ್ಣು ಮುಚ್ಚಿಕುಳಿತಿರುವುದು ನೋವನ್ನು ತರುವಂತಾಗಿದೆ. ಇದರಿಂದಾಗಿ ರಾಷ್ಟ್ತ್ರೀಯ ಹೆದ್ದಾರಿ ಮೇಲೆ ಸಂಚರಿಸುವ ವಾಹನಗಳಿಗೆ ಕ್ರಶರ್ಗಳಿಂದ ಸಿಡಿದು ಮೇಲೆ ಬರುವ ಕಲ್ಲುಗಳು ತಾಗುತ್ತಲಿವೆ. ಅಲ್ಲದೇ ಕ್ರಶರ್ ದೂಳು ಮೇಲೆದ್ದು ರಾಷ್ಟ್ತ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಲಿರುವ ವಾಹನಗಳ ಚಾಲಕರಿಗೆ ಅಡ್ಡಿ ಪಡಿಸುತ್ತಲಿದೆ. ಇದರಿಂದಾಗಿ ದಿನ ನಿತ್ಯ ಚಿಕ್ಕ ಪುಟ್ಟ ಅಪಘಾತಗಳು ಸಂಭವಿಸುತ್ತಲಿವೆ. ಅಲ್ಲದೇ ನಮ್ಮ ಹೊಲಗಳಿಗೆ ಹೋಗಲು ಅಕ್ರಮ ಕಲ್ಲುಗಣಿಗಳ ಕ್ರಶರ್ ಮೂಲಕವೆ ಹಾದು ಹೋಗುತ್ತಲಿದ್ದು ನಮಗೆ ಸಾಕಷ್ಟು ತೊಂದರೆಯಾಗುತ್ತಲಿದೆ. ನಮ್ಮ ಹೊಲಗಳಲ್ಲಿ ಬೆಳದ ಫಸಲುಗಳು ಅಕ್ರಮ ಕಲ್ಲು ಗಣಿಗಳ ಕ್ರಶರ್ಗಳ ದೂಳಿನಿಂದಾಗಿ ಹಾಳಾಗುತ್ತಲಿವೆ ಎಂದು ಆಕ್ರೌಶ ವ್ಯಕ್ತ ಪಡಿಸಿದ ಅವರು ಈ ಕೂಡಲೇ ಜಿಲ್ಲಾ ಆಡಳಿತ ಹಾಗೂ ತಾಲೂಕಾ ಆಡಳಿತ ಅಕ್ರಮ ಕಲ್ಲುಗಣಿಗಾರಿಕೆ ಕ್ರಶರ್ಗಳನ್ನು ನಡೆಸುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಒತ್ತಾಯಿಸಿದರು.

ಫಕ್ಕೀರಪ್ಪ ಕುರಿಯವರ ಮಾತನಾಡಿ ಛತ್ರ ಗ್ರಾಮದ ಬಳಿಯಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ಕ್ರಶರ್ಗಳನ್ನು ನಿಷೇಧಿಸಿ ಸೂಪರ್ ಜೂನ್ ಮಾಡುವಂತೆ ಸರಕಾರ ಹಾಗೂ ಸುಪ್ರಿಂ ಕೋರ್ಟ್ ಆದೇಶವಿದ್ದರೂ ಕೂಡಾ ಅನೇಕರು ಕಾನೂನನ್ನು ಉಲ್ಲಂಘಿಸಿ ಅಕ್ರಮ ಕಲ್ಲುಗಣಿಗಾರಿಕೆ ಕ್ರಶರ್ಗಳನ್ನು ನಡೆಸುತ್ತಲಿದ್ದಾರೆ. ಅಕ್ರಮ ಕಲ್ಲುಗಣಿಗಾರಿಕೆ ಕ್ರಶರ್ಗಳ ಮಾಲೀಕರಿಗೆ ಅಧಿಕಾರಿಗಳು ಮರುಳಾಗುತ್ತಿದ್ದಾರೆಂಬ ಶಂಕೆ ಜನತೆಯಲ್ಲಿ ಮೂಡಿದೆ. ಎರಡು ವರ್ಷಗಳ ಹಿಂದೆ ಮೇಲಾಧಿಕಾರಿಗಳು ಗ್ರಾಮಕ್ಕೆ ಬಂದು ಇಲ್ಲಿನ ಕ್ರಶರ್ಗಳನ್ನು ಬೇರೆಡೆ ವರ್ಗಹಿಸಲಾಗುವುದೆಂದು ಹೇಳಿ ಹೋದವರು ಮತ್ತೇ ಗ್ರಾಮದತ್ತ ಮುಖ ಮಾಡಿಲ್ಲ. ಹೀಗಾದರೇ ನಮ್ಮ ಗೋಳನ್ನು ಕೇಳುವವರ್ಯಾರು ಹಾಗೂ ಅಧಿಕಾರಿಗಳನ್ನು ನಂಬುವುದಾದರೂ ಹೇಗೆ ಎಂದು ತಮ್ಮ ನೋವನ್ನು ತೋಡಿಕೊಂಡರು. ಈ ವಿಷಯವಾಗಿ ಹಲವಾರು ಭಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ ಇತ್ತೀಚೆಗೆ ಛತ್ರ ಗ್ರಾಮದ ರಿ.ಸ.ನಂಬರ್ 442/ಕ ಜಮೀನಿನಲ್ಲಿ ಹೊಸದಾಗಿ ಕ್ರಶರ್ ನಡೆಸಲು ಪರವಾನಿಗೆ ನೀಡಲಾಗಿದೆ ಎಂದು ತಮ್ಮ ಆಕ್ರೌಶ ವ್ಯಕ್ತ ಪಡಿಸಿದ ಅವರು ಈ ಹಿನ್ನೆಲೆಯಲ್ಲಿ ಗ್ರಾಮದ ರೈತರೆಲ್ಲಾ ಸೇರಿ ಮುಂದಿನ ವಾರ ಸಭೆ ಸೇರಿ ವಿವಿಧ ಸಂಘಟನೆಗಳೊಂದಿಗೆ ಸೇರಿಕೊಂಡು ಜಿಲ್ಲಾಧಿಕಾರಿಗಳ ಕಛೇರಿ ಎದರು ಉಗ್ರ ಹೋರಾಟ ಮಾಡವುದಾಗಿ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಶೇಖಪ್ಪ ಓಲೇಕಾರ, ಜಿ.ಎಂ.ಕುರಿಯವರ, ಗುಡ್ಡಪ್ಪ ಕುರಿಯವರ, ಪಾಟೀಲ, ಶಶಿಧರ ಹಿರೇಮಠ ಇನ್ನಿತರರು ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here