ಅ.29 ರಂದು ಪಾರ್ಶ್ವವಾಯು ವಿಶ್ವ ದಿನಾಚರಣೆಯಂಗವಾಗಿ ಶಿಜಾಗೃತಿ ನಡಿಗೆಷಿ

1
16
loading...

ಹುಬ್ಬಳ್ಳಿ,ಅ.25- ವಿಶ್ವ ಪಾರ್ಶ್ವದಿನಾಚರಣೆಯಂಗವಾಗಿ ಸ್ಥಳೀಯ ಬಾಲಾಜಿ ನರರೋಗ ವಿಜ್ಞಾನ ಸಂಸ್ಥೆಯ ಸಹಯೋಗದಲ್ಲಿ ಇದೇ ದಿನಾಂಕ 29ರ ಮುಂಜಾನೆ 8.30ಕ್ಕೆ ಶಿಜಾಗೃತಿ ನಡಿಗೆಷಿ ಅಭಿಯಾನವನ್ನು ಆಯೋಜಿಸಲಾಗಿದೆ.

ಸುದ್ದಿಗೋಷ್ಟಿಯಲ್ಲಿಂದು ಈ ಕುರಿತು ಮಾಹಿತಿ ನೀಡಿದ ಸಂಸ್ಥೆಯ ಮುಖ್ಯಸ್ಥ ಡಾ.ಕ್ರಾಂತಿಕಿರಣ,   ವಿಶ್ವದೆಲ್ಲೇಡೆ ಅ.29ನ್ನು ಪಾರ್ಶ್ವವಾಯು ವಿಶ್ವ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಜನರಲ್ಲಿ ಪಾರ್ಶ್ವವಾಯು ಖಾಯಿಲೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಅಭಿಯಾನವನ್ನು ಆಯೋಜಿಸಲಾಗಿದ್ದು,

ಅಂದು ನಡೆಯುವ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಸಮೀರ ಶುಕ್ಲಾ ಚಾಲನೆ ನೀಡಲಿದ್ದು, ಸ್ಥಳೀಯ ಗಣ್ಯರು, ವಿದ್ಯಾರ್ಥಿಗಳು ಹಾಗೂ ನಾಗರೀಕರು ಭಾಗವಹಿಸಲಿದ್ದಾರೆ.

ನುರಿತ ತಜ್ಞರಿಂದ ಪಾರ್ಶ್ವವಾಯು ಖಾಯಿಲೆ ಕುರಿತು ಉಪನ್ಯಾಸ, ಜಾಗೃತಿ ಘೋಷಣಾ ಫಲಕ,  ಏರ್ಪಡಿಸಲಾಗಿದ್ದು, ಜಾಗೃತಿ ನಡಿಗೆಯು ನಗರದ ಹೊಸೂರ ಕೆಎಸ್ಆರ್ಟಿಸಿ ಡಿಪೋ ಹಿಂಬಾಗದಲ್ಲಿರುವ ಬಾಲಾಜಿ ನರರೋಗ ವಿಜ್ಞಾನ ಸಂಸ್ಥೆಯಿಂದ ಕಿತ್ತೂರ ರಾಣಿ ಚನ್ನಮ್ಮ ಸರ್ಕಲ್ ವರೆಗೆ ನಡೆಯಲಿದೆ ಎಂದು ತಿಳಿಸಿದರು.

loading...

1 COMMENT

 1. ಪಾರ್ಶ್ವವಾಯು (ಲಕ್ವ) ಏಷ್ಟೇ ಹಳೇಯದಾದರೂ ಗುಣ ಪಡಿಸಬಹುದು 12 ರಿಂದ 18 ವಾರಗಳ ನೂತನ ಚಿಕಿತ್ಸಾ ಪದ್ದತಿಯಿಂದ
  ಹೆಚ್ಚಿನ ಚಿಕಿತ್ಸಾ ಮಾಹಿತಿಗೆ ಸಂಪರ್ಕಿಸಿ
  ಡಾ ಚಂದ್ರಶೇಖರ್ ಬೆಳ್ಳೂಡಿ
  ಪಾರ್ಶ್ವವಾಯು ಪುನಃಶ್ಚೇತನ ತಜ್ಞರು
  ಬೆಂಗಳೂರು
  8710964433
  https://www.facebook.com/dcintrehab/

LEAVE A REPLY

Please enter your comment!
Please enter your name here