ಆಂಧ್ರಕ್ಕೆ ಅಪ್ಪಳಿಸಿದ ಚಂಡ: 7 ಬಲಿ

0
6

5ಲಕ್ಷ ಜನ ಸುರಕ್ಷಿತ

ಒಡಿಸ್ಸಾ, ಆಂಧ್ರ ಪ್ರದೇಶ ಕರಾವಳಿಗುಂಟ ವಿಮಾನ, ರೈಲು, ಬಸ್ಸ

ಸಂಚಾರ ಸ್ಥಗಿತ

ಕರಾವಳಿಗುಂಟ 2399 ಬೋಟುಗಳ ರಕ್ಷಣೆ ಆದಾಗ್ಯೂ 22

ಬೋಟುಗಳು ಇನ್ನು ನಾಪತ್ತೆ

ಚಂಡಮಾರುತ ಗ್ರಸ್ತ ಪ್ರದೇಶದ ನಿರಾಶ್ರಿತರಿಗಾಗಿ 550 ಟನ್ ಆಹಾರ

ದಾಸ್ತಾನು ಶೇಖರಣೆ

ಮುಂದಿನ 24 ಗಂಟೆಗಳಲ್ಲಿ 2 ರಾಜ್ಯಗಳಲ್ಲಿ ಭಾರಿ ಮಳೆ ಬೀಳುವ
ಸಾಧ್ಯತೆ
loading...

ಉತ್ತರ ಕರ್ನಾಟಕದ ಬೀದರ, ಗುಲ್ಬರ್ಗಾ, ರಾಯಚೂರ

ಮುಂತಾದೆಡೆಗಳಲ್ಲಿ 25 ಸೆಂ.ಮಿ ಅಧಿಕ

ಮಳೆ ಬೀಳುವ ಸಾಧ್ಯತೆ

ಪರಿಹಾರಕಾರ್ಯಕ್ಕಾಗಿ 40 ಸೇನಾ ತುಕಡಿಗಳು ವಿಶಾಖಾಪಟ್ಟಣಂದಲ್ಲಿ
ಸನ್ನದ್ದ

ವಾಯುಸೇನೆಯ 40 ವಿಮಾನಗಳು ರಕ್ಷಣಾ ಕಾರ್ಯಕ್ಕೆ ಸಜ್ಜು

ನವದೆಹಲಿ, ಅ.12- ಇಂದು ಮದ್ಯಾಹ್ನವೇ 400ಕಿಮಿ ವೇಗದಲ್ಲಿ ಆಗಮಿಸಿದ

ಫೈಲಿನ್ ಚಂಡಮಾರುತ ಓಡಿಶಾ ಕರಾವಳಿಯ ಮೇಲೆ ದಾಳಿ ಇಟ್ಟು 7ಜನ ದುರ್ಮರಣಕ್ಕೆ

ಇಡಾಗುವಂತೆ ಮಾಡಿದೆ ಆಂಧ್ರ ಮತ್ತು ಓಡಿಶಾ ಸರಕಾರಗಳ ಮುನ್ನೆಚ್ಚರಿಕೆಯಿಂದ

ಭಾರಿ ಅನಾಹುತಗಳು ಸಂಭವಿಸಲಿಕ್ಕಿಲ್ಲ ಎಂದು ಅಂದಾಜಿಸಲಾಗಿದೆ.

ಭಾರೀ ಅನಾಹುತ ಸೃಷ್ಟಿಸಲಿದೆ ಎಂದು ಅಂದಾಜಿಸಿರುವ ಫೈಲಿನ್

ಚಂಡಮಾರುತದ ಮುನ್ಸೂಚನೆಯಿಂದಾಗಿ ಆಂಧ್ರ ಪದ್ರೇಶ ಮತ್ತು ಒರಿಸ್ಸಾ ರಾಜ್ಯಗಳಲ್ಲಿ

ರೈಲು ಸಂಚಾರವನ್ನು ರದ್ದು ಪಡಿಸಲಾಗಿದೆ.

ಸ್ವತಂತ್ರ ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಅಪ್ಪಳಿಸಲಿರುವ

ಭೀಕರ ಚಂಡಮಾರುತಕ್ಕೆ ಹೆದರಿ ಸುಮಾರು ಐದು ಲಕ್ಷಕ್ಕೂ ಹೆಚ್ಚು ಜನರನ್ನು

ಸ್ಥಳಾಂತರ ಮಾಡಲಾಗಿದೆ.

ಈ ಹಿಂದೆ ಅಮೆರಿಕದಲ್ಲಿ ಭಾರೀ ಅನಾಹುತ ಸೃಷ್ಟಿಸಿದ್ದ ಕತ್ರೀನಾ

ಚಂಡಮಾರುತಕ್ಕಿಂತಲೂ ಫೈಲಿನ್ ಚಂಡಮಾರುತ ಹೆಚ್ಚಿನ ಅನಾಹುತ ಸೃಷ್ಟಿಸಲಿದೆ

ಎಂದು ಕೇಂದ್ರ ಹವಾಮಾನ ಇಲಾಖೆ ಅಧಿಕಾರಿಗಳು ಅಂದಾಸಿದ್ದಾರೆ.

 

loading...

LEAVE A REPLY

Please enter your comment!
Please enter your name here