ಐ.ಟಿ.ಸಿ ಕಂಪನಿಯಲ್ಲಿ ನೇಮಕಾತಿ

0
16
loading...

ಹುಬ್ಬಳ್ಳಿ (ಕರ್ನಾಟಕ ವಾರ್ತೆ) ಅ.:22: ಮಾನವ ಸಂಪನ್ಮೂಲ ಅಭಿವೃದ್ದಿ ಕೇಂದ್ರ, ಜಿಲ್ಲಾ ಉದ್ಯೌಗ ವಿನಿಮಯ ಕಚೇರಿ, ಹುಬ್ಬಳ್ಳಿ ಮತ್ತು ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ದಿ ತರಬೇತಿ ನಿಗಮ ನಿಯಮಿತ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 26-10-2013 ರಂದು ಹುಬ್ಬಳ್ಳಿಯ ಜಿಲ್ಲಾ ಉದ್ಯೌಗ ವಿನಿಮಯ ಕೇಂದ್ರದಲ್ಲಿ ಆಫ್-ಕ್ಯಾಂಪಸ್ ಸಂದರ್ಶನವನ್ನು ಮುಂಜಾನೆ 9-30 ರಿಂದ ಮಧ್ಯಾಹ್ನ 2-30 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ. ಕೋಲಾರನ ಐ.ಟಿ.ಸಿ (ಫುಡ್ಸ ಡಿವಿಜನ್) ಉದ್ಯೌಗದಾತರು ಭಾಗವಹಿಸಿ ತಮ್ಮ ಸಂಸ್ಥೆಯಲ್ಲಿ ಟ್ರೇನಿ ಹುದ್ದೆಗೆ ಅಭ್ಯರ್ಥಿಗಳ ಸಂದರ್ಶನ ನಡೆಸಿ ನೇಮಕಾತಿ ಮಾಡಿಕೊಳ್ಳುವವರಿರುತ್ತಾರೆ. ಐ.ಟಿ.ಐ – ಫಿಟ್ಟರ್, ಟರ್ನರ್, ಮಶಿನಿಸ್ಟ್, ಎಮ್ಎಮ್ವಿ, ಡೀಸೆಲ್ ಮೆಕ್ಯಾನಿಕ್, ಇಲೆಕ್ಟ್ತ್ರೀಶಿಯನ್ ಹಾಗೂ ಇಲೆಕಾ್ತ್ರನಿಕ್ ಮೆಕ್ಯಾನಿಕ್ ಉತ್ತೀರ್ಣರಾದ, 18 ರಿಂದ 27 ವರ್ಷದೊಳಗಿನ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದು. ಅರ್ಹತೆಯನ್ನು ಹೊಂದಿ ಸದರಿ ಸಂದರ್ಶನಕ್ಕೆ ಹಾಜರಾಗುವ ಇಚ್ಛೆ ಹೊಂದಿದ್ದಲ್ಲಿ ಹುಬ್ಬಳ್ಳಿಯ ನವನಗರದಲ್ಲಿರುವ ಜಿಲ್ಲಾ ಉದ್ಯೌಗ ವಿನಿಮಯ ಕೇಂದ್ರಕ್ಕೆ ವಿದ್ಯಾರ್ಹತೆಯ ಎಲ್ಲ ಮೂಲ ಪ್ರಮಾಣ ಪತ್ರ, ಪಾಸಪೋರ್ಟ ಅಳತೆಯ ಭಾವಚಿತ್ರ ಹಾಗೂ ಬಯೋಡಾಟಾದೊಂದಿಗೆ ತಮ್ಮ ಸ್ವಂತ ಖರ್ಚಿನಲ್ಲಿ ದಿನಾಂಕ 26-10-2013 ರ ಶನಿವಾರದಂದು ಮುಂಜಾನೆ 9-30 ಗಂಟೆಗೆ ಹಾಜರಿರಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0836-2225289 ನ್ನು ಸಂಪರ್ಕಿಸಲು ಜಿಲ್ಲಾ ಉದ್ಯೌಗ ವಿನಿಮಯ ಕಚೇರಿ ,ಸಹಾಯಕ ನಿರ್ದೇಶಕ ಶ್ರೀಕಾಂತ ಮಾಲಗತ್ತಿ ಅವರು ಪ್ರಕಟಣೆ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here