ಕಣ್ಮನ ಸೆಳೆದ ವಿದ್ಯಾರ್ಥಿನಿಯರ ಸೋಬಾನೆ ಪದ

0
59
loading...

ಬೈಲಹೊಂಗಲ: 24- ಇಳಕಲ ಸೀರೆ, ಕುಪ್ಪಸ, ಒಡವೆ, ಸುಗಂಧ ಪರಿಮಳದ ಮಲ್ಲಿಗೆ ಹೂ ಮುಡಿದು ಹಸೆಮನೆ ಮೇಲೆ ಕುಳಿತ ವಧುವರ ಕುರಿತು ಸೋಬಾನ ಪದ ಹೇಳಿದ ವಿದ್ಯಾರ್ಥಿನಿಯರು ಸೋಬಾನ ಪದ ಮೆರಗು ಹೆಚ್ಚಿಸಿದರು. ವಧು ನಾಚೀ ನೀರಾಗಿದ್ದರೆ, ವರ ತನ್ನ ಗತ್ತಿನಲ್ಲಿ ಮಿಂಚುತ್ತಿದ್ದ. ಕೈಯಲ್ಲಿ ವಾಚು, ಹಣೆಗೆ ತಿಲಕ, ತಲೆಗೆ ಪೇಠ, ಕೈಗೆ ಕಟ್ಟಿದ ಅರಿಶಿನ ದಾರ ವರನ ಕಳೆ ಹೆಚ್ಚಿಸಿತ್ತು. ತಾಳಿಕಟ್ಟಲು ತುದಿಗಾಲಲ್ಲಿ ನಿಂತಿದ್ದ ದೃಶ್ಯ ಅಮೋಘವಾಗಿ ಮೂಡಿ ಬಂದಿತು.

ಇಲ್ಲಿಯ ಗಣಾಚಾರಿ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ಅಕ್ಕಮಹಾದೇವಿ ಮಹಿಳಾ ಪದವಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ರಾಷ್ಟ್ತ್ರೀಯ ಸೇವಾ ಯೋಜನೆಯಡಿಯಲ್ಲಿ ನಡೆದ ಸೋಬಾನ ಪದ ಸ್ಪರ್ಧೆ ಕಣ್ಮನ ಸೆಳೆಯಿತು. ತಾಯಿಯಿಲ್ಲದ ತವರಿಗೆ…!! ಹೋಗಿ ನಾ ಬರುವಾಗ…!! ನಡುದಾರ್ಯಾಗ ಎದುರಾದ…!! ನಮ್ಮಣ್ಣ.. ಮರಳಿ ನಡೆಯವ್ವ ಎನ ತಂಗಿ ಮನೆಗೆ…!!  ಎನ್ನುವ ಹಾಡು…, ಬ್ಯಾಸಗಿ ಬಿಸಿಲವ್ವ, ಕುಸಿನ ತಾಯವ್ವಾ…!! ನೀರಕೊಡ ಹೊತ್ತು ಬರುತಾಳ ನೋಡು…!! ಸೋ..ನಿಂಗ್…!! ಎಂದೆನ್ನುವ ಸೋಬಾನೆ ಪದ ಕೇಳುಗರ ಹೃದಯಬಾರ ಹಗುರ ಮಾಡಿತು. ಪ್ರತಿಯೊಬ್ಬ ವಿದ್ಯಾರ್ಥಿನಿ ಸೊಗಸಾಗಿ ಸೋಬಾನೆ ಪದ ಹಾಡಿ ರಂಜಿಸಿದರು. ಸಮಾರಂಭದ ಮುಖ್ಯಅತಿಥಿ, ಶಿಕ್ಷಕಿ ರಾಷ್ಟ್ತ್ರ ಪ್ರಶಸ್ತಿ ಪುರಸ್ಕ್ಕತರಾದ ಇಬ್ಬರು ಶಿಕ್ಷಕಿ ಸಾಹಿತಿಗಳಾದ ಗೌರಾದೇವಿ ತಾಳಿಕೋಟಿಮಠ ಮತ್ತು ಅನ್ನಪೂರ್ಣ ಕನೋಜ ಮಾತನಾಡಿ, ಮನಸ್ಸಿಗೆ ಉಲ್ಲಾಸ ನೀಡುವದೆ ಜಾನಪದ ಸಾಹಿತ್ಯವಾಗಿದೆ. ಇಂದಿನ ಯುವ ಸಮುದಾಯ ಜಾನಪದ ಕಲೆ ಬೆಳೆಸಿ, ಉಳಿಸಿಕೊಳ್ಳಬೇಕೆಂದರು. ಗ್ರಾಮೀಣ ಕಲೆ, ಮೌಲ್ಯ ಕುರಿತು ವಿವರಿಸಿದರು. ಗ್ರಾಮೀಣ ಸೊಗಡನ್ನು ನೆನಪು ಮಾಡುವ ಸದುದ್ದೇಶದಿಂದ ಗಣಾಚಾರಿ ಶಿಕ್ಷಣ ಸಂಸ್ಥೆ ವಿದ್ಯಾರ್ಥಿನಿಯರು ಹಮ್ಮಿಕೊಂಡಿರುವ ಸೋಬಾನೆ ಪದ ಸ್ಪರ್ಧೆ ಏರ್ಪಡಿಸಿದ್ದ ಸಂತಸದ್ದಾಗಿದೆ ಎಂದರು. ಪತ್ರಕರ್ತ ಈಶ್ವರ ಹೋಟಿ ಸಮಾರಂಭ ಉದ್ಘಾಟಿಸಿದರು. ಸಂಸ್ಥೆ ಪ್ರಾಚಾರ್ಯ ಸಿ.ಬಿ.ಗಣಾಚಾರಿ ಅಧ್ಯಕ್ಷತೆವಹಿಸಿದ್ದರು. ಅತಿಥಿಗಳಾಗಿ ಪ್ರೊ.ಎಸ್.ಆರ್.ಕಲಹಾಳ, ಪ್ರೊ. ಹೆಬ್ಬಳ್ಳಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು

loading...

LEAVE A REPLY

Please enter your comment!
Please enter your name here