ಕುಡಿಯುವ ನೀರಿನ ಕಾಮಗಾರಿ : ಆದ್ಯತೆಗೆ ಸೂಚನೆ

0
30
loading...

ಹುಬ್ಬಳ್ಳಿ,ಅ.09- ಹುಬ್ಬಳ್ಳಿ ತಾಲೂಕಿನ  ಹಾಗೂ ನವಲಗುಂದ ಮತಕ್ಷೇತ್ರದ ಕೆಲ ಗ್ರಾಮಗಳಲ್ಲಿ ಕುಡಿಯುವ  ನೀರಿನ ಸಮಸ್ಯೆ ಮುಂದುವರಿದ್ದು ಅಧಿಕಾರಿಗಳು ಕಾಮಗಾರಿಗಳನ್ನು ಆದ್ಯತೆಯ  ಮೇಲೆ ಕೈಕೊಳ್ಳಬೇಕೆಂದು  ಹುಬ್ಬಳ್ಳಿ ತಾಲೂಕು ಪಂಚಾಯತ ಉಪಾಧ್ಯಕ್ಷೆ ಶ್ರೀಮತಿ ರೇಖಾ  ಮಲ್ಲಾರಿ ಅವರು ಪಂಚಾಯತ್  ಇಂಜೀನಿಯರಿಂಗ್  ಹಾಗೂ ಹೆಸ್ಕಾಂ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.

ಇತ್ತೀಚೆಗೆ ಜರುಗಿದ ಹುಬ್ಬಳ್ಳಿ ತಾಲೂಕು ಪಂಚಾಯತದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ  ಅವರು , ಶಿಶಾಸಕರು  ಈ ಸಮಸ್ಯೆಯ ಬಗ್ಗೆ ತಾಲೂಕು ಪಂಚಾಯತಿಯೂ ಗಮನ ಸೆಳೆದಿದ್ದು , ಅಧಿಕಾರಿಗಳು ತುರ್ತು ಅಗತ್ಯವಿರುವೆಡೆ ಟ್ಯಾಂಕರ್  ಮೂಲಕ ನೀರು ಪೂರೈಕೆಯನ್ನು ಮುಂದುವರಿಸಬೇಕು ಮತ್ತು ಅಪೂರ್ಣ  ಕಾಮಗಾರಿಗಳನ್ನು ಸಕಾಲಕ್ಕೆ ಪೂರ್ಣಗೊಳಿಸಿ , ವಿದ್ಯುತ್ ಸಂಪರ್ಕ ಕಲ್ಪಿಸಿ ನೀರು ಪೂರೈಕೆ ಸುಗಮಗೊಳಿಸಬೇಕು ಲಿಳಿ ಎಂದು ಸೂಚಿಸಿದರು.

ಸಭೆಯಲ್ಲಿ ಭಾಗವಹಿಸಿದ್ದ ತಾಲೂಕು ಪಂಚಾಯತಿ ಸದಸ್ಯ ವಿರುಪಾಕ್ಷಗೌಡ ಭರಮಗೌಡ್ರ ಅವರು ಮಾತನಾಡಿ , ನಾಗರಹಳ್ಳಿ ಗ್ರಾಮಕ್ಕೆ ಕುಡಿಯುವ ನೀರನ್ನು ಟ್ಯಾಂಕರ್  ಮೂಲಕ ಪೂರೈಸಲಾಗುತ್ತಿತ್ತು. ಗ್ರಾಮದ ಹಳೆ ಪೈಪ್ ಲೈನ್ ಬದಲು ಹೊಸ ಪೈಪ್ ಲೈನ್ ಅಳವಡಿಸಿ ಹಳೇ ಕೊಳವೆ ಬಾವಿಗೆ ಸಂಪರ್ಕ ಕಲ್ಪಿಸಿದರೂ  ನೀರು ಪೂರೈಕೆಯಲ್ಲಿ ಸುಧಾರಣೆಯಾಗಿರುವುದಿಲ್ಲ. ಆದ್ದರಿಂದ , ಈಗ ನಿಲುಗಡೆ ಮಾಡಿರುವ ಟ್ಯಾಂಕರ್ ನೀರು ಪೂರೈಕೆಯನ್ನು ಮುಂಚಿನಂತೆ ಮುಂದುವರಿಸಬೇಕೆಂದು ಒತ್ತಾಯಿಸಿದರು.

ಶಾಸಕ ಎನ್. ಎಚ್. ಕೋನರೆಡ್ಡಿ ಅವರು ಮಾತನಾಡಿ , ಗ್ರಾಮಕ್ಕೆ ನೀರಿನ ವ್ಯವಸ್ಥೆ ಪೈಪ್ಲೈನ್ ಅಳವಡಿಕೆ ನಂತರವೂ  ಸುಧಾರಿಸದಿರುವುದರಿಂದ  ,  ತಕ್ಷಣವೇ ಟ್ಯಾಂಕರ್ ಮೂಲಕ  ನೀರು ಪೂರೈಸಬೇಕೆಂದು ಸೂಚಿಸಿದರು. ಶಿರಗುಪ್ಪಿ ಮಂಟೂರ  ಹಾಗೂ ಬಂಡವಾಡ ಗ್ರಾಮದ ಕೆರೆಗಳಿಗೆ ಮಲಪ್ರಭಾ ಕಾಲುವೆಯಿಂದ ಬಿಡುವ ನೀರು ಹಸಿರಾಗಿ ಮಲೇ ಕುಡಿಯಲು ಯೋಗ್ಯವಿಲ್ಲವಾದ್ದರಿಂದ  , ಹಾಗೂ ಅಲ್ಲಿನ ಕೊಳವೆ ಬಾವಿ ನೀರು ಸಹ ಕಠಿಣವಾಗಿದ್ದು , ಬಹುಮಟ್ಟಿಗೆ ಕೆರೆ ನೀರನ್ನೇ  ಅವಲಂಬಿಸುವ ಸ್ಥಿತಿಯಾಗಿದೆ. ಆದ್ದರಿಂದ ಈ ಗ್ರಾಮಗಳಿಗೆ ಕುಡಿಯುವ ನೀರಿನ ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದರು.

ಅದರಂತೆ, ಬಂಡಿವಾಡ ಕ್ರಾಸ್ ಬಳಿ ಹೊಸ ಬೋರ್ವೆಲ್ಗೆ ಕೂಡಲೇ ಪೈಪ್ಲೈನ್ ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದು ಅವರು  ಸೂಚಿಸಿದರು.

ನವಲಗುಂದ ಮತ ಕ್ಷೇತ್ರದ ಮಲ್ಲಿಗವಾಡ ಮತ್ತು  ಉಮಚಗಿ ಗ್ರಾಮಗಳಲ್ಲಿ   ಈಗಾಗಲೇ ಶುಖದ್ಧ ಕುಡಿಯುವ ನೀರಿನ ಘಟಕಗಳನ್ನು  ಸ್ಥಾಪಿಸಲಾಗಿದ್ದು , ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದೂ ಸೂಚಿಸಲಾಯಿತು.

ಸಭೆಯಲ್ಲಿ ತಾಲೂಕಿನ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಅಧಿಕಾರಿಗಳು ಸಕಾಲಕ್ಕೆ ಜನರ ಸಮಸ್ಯೆಗಳಿಗೆ  ಸ್ಪಂದಿಸಬೇಕು ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಂ. ಬಿ. ಗಂಗಲ ಅವರು ಸೂಚಿಸಿದರು.

loading...

LEAVE A REPLY

Please enter your comment!
Please enter your name here