ಗೌರವ ಶಿಕ್ಷಕರ ಹುದ್ದೆಗೆ ಮೀಸಲಾತಿ ನೀಡಲು ಆಗ್ರಹ

0
9
loading...

ಖಾನಾಪುರ: ತಾಲೂಕಿನ ವಿವಿಧ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಅತಿಥಿ ಶಿಕ್ಷಕರ ನೇಮಕಾತಿಯ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭ್ಯರ್ಥಿಗಳಿಗೆ ಮೀಸಲಾತಿಯನ್ನು ನಿಗದಿಪಡಿಸಬೇಕೆಂದು ಆಗ್ರಹಿಸಿ ಚಲವಾದಿ ಮಹಾಸಭಾದ ಖಾನಾಪುರ ತಾಲೂಕು ಘಟಕದ ಪದಾಧಿಕಾರಿಗಳು ತಹಶೀಲ್ದಾರರ ಮೂಲಕ ಮುಖ್ಯ,ಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡಗಳಲ್ಲಿ ಸಾವಿರಾರು ಶಿಕ್ಷಣ ಪದವಿಯನ್ನು ಪಡೆದ ವಿದ್ಯಾರ್ಥಿಗಳು ಇಂದು ಸೂಕ್ತ ಉದ್ಯೌಗವಿಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಇವರಿಗೆ ಉದ್ಯೌಗ ದೊರಕುವ ನಿಟ್ಟಿನಲ್ಲಿ  ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೀಸಲಾತಿ ಪ್ರಕಟಿಸುವಂತೆ ಆದೇಶಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ತಾಲೂಕು ಘಟಕದ ಅಧ್ಯಕ್ಷ ನಾರಾಯಣ ಚಲವಾದಿ, ಕಾರ್ಯದರ್ಶಿ ಬಿ.ಎಲ್ ಭಂಡಾರಕರ, ಶಿವಾನಂದ ರಾಮಣ್ಣವರ, ಮಹಾದೇವ ಕೋಲಕಾರ, ಪರಶುರಾಮ ಕಾಂಬಳೆ, ರಾಯಪ್ಪ ಚಲವಾದಿ ಮತ್ತಿತರರು ಉಪಸ್ಥಿತರಿದ್ದರು. ಉಪತಹಶೀಲ್ದಾರ ಬಿ.ಆರ್ ಪಾಟೀಲ ಮನವಿ ಸ್ವೀಕರಿಸಿದರು

loading...

LEAVE A REPLY

Please enter your comment!
Please enter your name here