ಜನತಾ ಪ್ಲಾಟ ಮನೆಗಳಿಗೆ ರಸ್ತೆ ನಿರ್ಮಿಸಿಕೊಡಿ : ಪ್ರತಿಭಟನೆ

0
16
loading...

ಮೂಡಲಗಿ 17- ಸಮೀಪದ ನಾಗನೂರ ಗ್ರಾಮದ 2 ನೇ ವಾರ್ಡಿನ ನಿವಾಸಿಗಳು  25 ರಿಂದ 30 ವರ್ಷಗಳ ಹಿಂದೆ ಸರಕಾರ ನಿರ್ಮಿಸಿರುವ ಜನತಾ ಪ್ಲಾಟ್ನಲ್ಲಿಯ ಮನೆಗಳಿಗೆ ಸಂಚಾರಕ್ಕಾಗಿ ರಸ್ತೆ ಸೌಲಭ್ಯಕ್ಕಾಗಿ ಮಂಗಳವಾರ ಹಮ್ಮಿಕೊಂಡಿದ್ದ ಸಂಪೂರ್ಣ ಬಂದ್ ಕರೆ ಹಿನ್ನೆಲೆಯಲ್ಲಿ ತಹಶೀಲ್ದಾರ್ ಮಧ್ಯಸ್ಥಿಕೆಯಲ್ಲಿ ಮಧ್ಯಾಹ್ನ 12 ಕ್ಕೆ ಹಿಂದಕ್ಕೆ ಪಡೆದುಕೊಂಡ ಪ್ರಸಂಗ ಜರುಗಿತು.

ನಾಗನೂರ ಗ್ರಾಮ ಪಂಚಾಯತ ವತಿಯಿಂದ ವಸತೀಹೀನರಿಗೆ ಘನ ಸರಕಾರ  25 ರಿಂದ 30 ವರ್ಷಗಳ ಹಿಂದೆ ಸುಮಾರು 350 ಜನತಾ ಮನೆಗಳನ್ನು ನೀಡಿದ್ದರು, ಆ ಪ್ರದೇಶಕ್ಕೆ ಈಗ ಧಿಡೀರಣೆ ಖಾಸಗಿ ವ್ಯಕ್ತಿಗಳು ರಸ್ತೆ ನಮಗೆ ಸಂಬಂಧಪಡುತ್ತದೆಂದು ಹೇಳಿ ರಸ್ತೆಯನ್ನು ಬಂದ್ ಮಾಡಿರುವದರಿಂದ ಕಳೆದ 3-4 ತಿಂಗಳಿಂದ ತೊಂದರೆ ಅನುಭವಿಸುವಂತಾಗಿದೆ. ಅಗತ್ಯ ರಸ್ತೆ ಸೌಲಭ್ಯ ಒದಗಿಸಬೇಕೆಂದು ಮಂಗಳವಾರ ಮುಂಜಾನೆಯಿಂದ ಮೂಡಲಗಿ-ಗೋಕಾಕ, ನಾಗನೂರ- ಘಟಪ್ರಭಾ ರಸ್ತೆ ಸಂಚಾರ, ಅಂಗಡಿ ಮುಗ್ಗಟ್ಟುಗಳನ್ನು ಬಂದ ಮಾಡಿ ಪ್ರತಿಭಟಿಸುತ್ತಿದ್ದರು. ಸುದ್ದಿ ತಿಳಿದು ಪ್ರತಿಭಟನಾಕಾರರ ಸ್ಥಳಕ್ಕೆ ಆಗಮಿಸಿದ ಗೋಕಾಕ ತಹಶೀಲ್ದಾರ್ ಸಿದ್ದು ಹುಲ್ಲೌಳ್ಳಿ  ಅವರು 2 ನೇ ವಾರ್ಡಿನ ಜನರ ತೊಂದರೆಯನ್ನು ಆಲಿಸಿ  ಹದಿನೈದು ದಿನದಲ್ಲಿ  ಸುಗಮ ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿಕೊಡುವದಾಗಿ ಬರವಸೆ ನೀಡಿ ಗೋಕಾಕ ತಾ.ಪಂ ಇಒ ಸಕ್ರಿ ಮತ್ತು ಗ್ರಾ.ಪ ಅಧ್ಯಕ್ಷ ಹಾಗೂ ಪಿಡಿಒ ಅಧಿಕಾರಿಗಳಿಗೆ ರಸ್ತೆ ಸೌಲಭ್ಯ ಒದಗಿಸಲು ಸೂಚಿಸಿದರು.

ಶಂಕರ ಹೋಸಮನಿ, ರಾಜು ಕರಿಹೊಳಿ, ಧನಂಜಯ ಜೋಕಿ, ಶಿವಪ್ಪ ಮಾಲಗಾರ, ದುಂಡಪ್ಪ ನಂದಗಾವ, ತವನ್ನಪ್ಪಾ ಹಾರೂಗೇರಿ, ಅಬಾಸಲಿ ಮೋಮಿನ, ಅಲ್ಲಾಭಕ್ಷ ನಧಾಫ್ ಮತ್ತಿತರರು ಇದ್ದರು. ಡಿವೈಎಸ್ಪಿ ಶೇಖರ ಅಗಡಿ ಮತ್ತು  ಮೂಡಲಗಿ ಸಿಪಿಐ ಬಾಲಚಂದ್ರ ಸಿಂಗ್ಯಾಗೋಳ ಅವರು ಸೂಕ್ತ ಬಂದೋಬಸ್ತ ಒದಗಿಸಿದ್ದರು.

ಗ್ರಾಮದಲ್ಲಿ ರಸ್ತೆ ಸಂಚಾರ ಮತ್ತು ಅಂಗಡಿ ಮುಂಗಟ್ಟುಗಳು ಸ್ಥಗಿತಗೊಂಡ ಕಾರಣ ಪ್ರಯಾಣಿಕರು ಪರದಾಡುವಂತಾಯಿತು

loading...

LEAVE A REPLY

Please enter your comment!
Please enter your name here