ಜಾಂಬೋಟಿಯಲ್ಲಿ ನಿರ್ಮಲ ಭಾರತ ಅಭಿಯಾನಕ್ಕೆ ಚಾಲನೆ

0
13
loading...

ಖಾನಾಪುರ 2: ತಾಲೂಕಿನ ಜಾಂಬೋಟಿ ಗ್ರಾಮದ ಗ್ರಾಮ ಪಂಚಾಯತ ಕಚೇರಿಯಲ್ಲಿ ಇತ್ತೀಚೆಗೆ ನಿರ್ಮಲ ಭಾರತ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಎ.ಎಮ್.ಪಾಟೀಲ ಬಯಲು ಮಲವಿಸರ್ಜನೆಯಿಂದ  ಹಲವಾರು ಸಮಸ್ಯೆಗಳನ್ನು ಎದುರಿಸಲಾಗುತ್ತಿದೆ. ಆ ಸಮಸ್ಯೆಗಳನ್ನು ತಪ್ಪಿಸಲು ಪ್ರತಿ ಯೊಬ್ಬರು ಶೌಚಾಲಯ ಹೊಂದಬೇಕಾದ ಅವಶ್ಯಕತೆಯಿದೆ. ಪ್ರತಿಯೊಬ್ಬರು ಆರೋಗ್ಯವಂತರಾಗಿರಲು ಬಯಲು ಮಲವಿಸರ್ಜನೆ ನಿಲ್ಲಿಸಿ, ಕಡ್ಡಾಯವಾಗಿ ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳಿ ಎದು ಅವರು ಕರೆ ನೀಡಿದರು.

ಜಾಂಬೋಟಿ ಗ್ರಾಮದಲ್ಲಿ ನಿರ್ಮಲ ಭಾರತ ಅಭಿಯಾನ ಯೋಜನೆಯಲ್ಲಿ 100 ಕ್ಕೆ 100 ರಷ್ಟು ಶೌಚಾಲಯ ನಿರ್ಮಿಸುವ ಗುರಿಯನ್ನು ಹೊಂದಲಾಗಿದೆ. ಅದಕ್ಕೆ ಗ್ರಾಮಸ್ಥರ ಸಹಕಾರ ಅಗತ್ಯವಾಗಿ ಬೇಕು. ನಿರ್ಮಲ ಭಾರತ ಅಭಿಯಾನ ಯೋಜನೆಯಲ್ಲಿ 4700 ರೂಪಾಯಿ ಸಹಾಯಧನ, ಮಹಾತ್ಮಾ ಗಾಂಧೀ ರಾಷ್ಟ್ತ್ರೀಯ ಗ್ರಾಮೀಣ ಯೋಜನೆ ಅಡಿಯಲ್ಲಿ 4500 ರೂಪಾಯಿ ಸಹಾಯಧನ ಹಾಗೂ ಸ್ಟೇಟ್ ಬ್ಯಾಂಕ್ ಆಪ್ ಮೈಸೂರು ಬ್ಯಾಂಕ್ ವತಿಯಿಂದ ಶೇ 4 ರಷ್ಟು ಸಾಲ ಸೌಲಭ್ಯ ದೊರೆಯಲಿದೆ. ಸರಕಾರದ ಯೋಜನೆಯ ಸದುಪಯೋಗವನ್ನು ಪಡೆದುಕೊಂಡು ಆರೋಗ್ಯಯುತ ಸಮಾಜ ನಿರ್ಮಿಸಿ ಎಂದು ನಿರ್ಮಲ ಭಾರತ ಅಭಿಯಾನ ಯೋಜನೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಚವ್ಹಾನ ಮಾಹಿತಿ ನೀಡಿದರು.

ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಖಾನಾಪುರ ಶಾಖೆಯ ಪ್ರಬಂಧಕ ಅನೀಲ ಕೋಲೇಕರ, ನಿರ್ಮಲ ಭಾರತ ಅಭಿಯಾನ ಯೋಜನೆಯ ಕಛೇರಿಯ ಅಧಿಕಾರಿ ಅರ್ಜುನ ಕಡಟ್ಟಿ, ಗ್ರಾಪಂ ಅಧ್ಯಕ್ಷ ಜಯರಾಮ ದೇಸಾಯಿ, ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮೀ ಮಾದಾರ, ಪಿಡಿಓ ಎಫ್. ಆಯ್. ವಡಗಾಂವ್ಕರ್ ಹಾಗೂ ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here