ನಮ್ಮ ದೇಶಿ ಕ್ರಿಡೆಗಳು ನಶಿಸುತ್ತಿವೆ : ಶಾಸಕ ಸವದಿ

0
71
loading...

ಅಥಣಿ; 12ನಮ್ಮ ದೇಶಿ ಕ್ರಿಡೆಗಳು, ಪರಂಪರೆ, ಕಲೆ, ಇಂದಿನ ದಿನಗಳಲ್ಲಿ ನಶಿಸಿಹೊಗುತ್ತಿವೆ. ಅವುಗಳನ್ನು ಉಳಿಸಿ ಬೆಳಸಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಇಲ್ಲಿಯ ಗಚ್ಚಿನಮಠದಲ್ಲಿ ನಡೆದ ಆಜಾದ ಗೆಳೆಯರ ಬಳಗ ಎಲ್.ಎಸ್ ಗ್ರೂಪ್ ವತಿಯಿಂದ ಹಮ್ಮಿಕೊಂಡ ಸಾರ್ವಜನಿಕ ಗಣೇಶೊತ್ಸವ ಮಂಡಳಿಯವರಿಗೆ 18 ನೇ ಲೋಕಮಾನ್ಯ ಟಿಳಕ ಮತ್ತು ರಾಣಿ ಚೆನ್ನಮ್ಮ ಪ್ರಶಸ್ತಿಯನ್ನು ವಿತರಿಸಿ ಮಾತನಾಡಿ. ಸ್ವತಂತ್ರ್ಯ ಪೂರ್ವದಲ್ಲಿ ಟಿಳಕರು ದೇಶಾಭಿಮಾನ ಬೇಳೆಸುವದರ ಜೋತೆಗೆ ಭಾವನಾತ್ಮಕ ಸಂಭಂದ ರೂಪಿಸಿ ಗಣೇಶ ಉತ್ಸವವನ್ನು ಆಚರಣೆಗೆ ತರುವಲ್ಲಿ ಇವರ ಪಾತ್ರ ಪ್ರಮುಖವಾಗಿದೆ ಎಂದರು.

ಇಂದು ಸಮಾಜದಲ್ಲಿ ಉತ್ಸಾಹ ತುಂಬುವ ಕಾರ್ಯವನ್ನು ಗಣೇಶ ಮಂಡಳಿಗಳು ಹಾಗೂ ಯವಕರು ಬಳಗಗಳು ಮಾಡಯತ್ತಿರುವದು ಸ್ಲಾಘನಿಯ. ಯುವಕರು ಸದೃಡ ಶರೀರ ಹೊಂದಲು ಮತಕ್ಷೇತ್ರದ 68 ಹಳ್ಳಿಗಳಲ್ಲಿ ವ್ಯಾಯಮ ಶಾಲೆ,(ಗರಡಿ ಮನೆ) ತೆರೆಯಲಾಗುವದು. ಇಗಾಗಲೆ 22 ಹಳ್ಳಿಗಳಲ್ಲಿ ತೆರೆಯಲಾಗಿದೆ. ದೇಶಿ ಕ್ರೀಡೆಗಳಾದ ಕುಸ್ತಿ, ಕಬ್ಬಡಿ, ಖೊ.ಖೋ ಆಟಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ತೀಳಿಸಿದರು.

ಈ ವೇಳೆ ಪಾರಗಾಂವ ಗಲ್ಲಿ ಡಿ.ಎಸ್.ಎಮ್.ಎಸ್ ಕಾಲೋನಿ, ಪಾಟೀಲ ಗಲ್ಲಿ ಕ್ರಮವಾಗಿ ಪ್ರಥಮ,ದ್ವಿತಿಯ, ತೃತಿಯ ಲೋಕಮಾನ ಟಿಳಕ ಪ್ರಶಸ್ತಿಯನ್ನು ಪಡೆದರು ಅದೇ ರೀತಿ ವೀರರಾಣಿ ಕಿತ್ತೂರ ಚೆನ್ನಮ್ಮ ಪ್ರಶಸ್ತಿಯನ್ನು ಹಿಪ್ಪರಗಿ ಗಲ್ಲಿ, ಕಾಗಜಿ ಗಲ್ಲಿ, ಗಚ್ಚಿನಮಠ ಗಲ್ಲಿ ಕ್ರಮವಾಗಿ ಪ್ರಥಮ ದ್ವೀತಿಯ ತೃತಿಯ ಪ್ರಶಸ್ತಿ ಪಡೆದವು. ಈ ಸಂಧರ್ಭದಲ್ಲಿ ಅರವಿಂದ ದೇಶಪಾಂಡೆ, ಡಾ, ಎಮ್.ಜಿ ಹಂಜಿ, ಮಾತನಾಡಿದರು. ಎಮ್.ಜಿ ಕನಶೇಟ್ಟಿ, ರಾಜು ಬುಲಬುಲಿ, ಸಲಾಂ ಕಲ್ಲಿ, ವಿಲಿನ ಎಳಮಲಿ, ಉಪಸ್ಥಿತರಿದ್ದರು,

 

loading...

LEAVE A REPLY

Please enter your comment!
Please enter your name here