ಬೃಹತ್ ಮೊತ್ತದತ್ತ ಭಾರತ 66 ರನ್ಗಳ ಮುನ್ನಡೆ

0
42
loading...

ಸ್ಕೌರ್ ವಿವರ

ಭಾರತ ಎ ಪ್ರಥಮ ಇನ್ನಿಂಗ್ಸ್ ದ್ವಿತೀಯ ದಿನ 334-3

95 ಓವರ್

ಬ್ಯಾಟಿಂಗ್ ವಿವರ

ವಿ.ಜಗದೀಶ ಬಿ. ಡಿ.ಜಾನ್ಸ್ನ 16(40)

ಗೌತಮ ಗಂಭೀರ ಬಿ.ದೇವ ನರೈನ್ 123(236)

ವಿರೇಂದ್ರ ಸೆಹ್ವಾಗ್ ಬಿ.ನಿಕಿತಾ ಮಿಲ್ಲರ್ ಸಿ.ಅಶ್ಲೇ

ನರ್ಸ್ 38(49)

ವೆಸ್ಟ್ಇಂಡೀಸ್ ಎ

ಬೌಲಿಂಗ್ ವಿವರ

ಡಿ.ಜಾನ್ಸ್ನ 15-3-50-1

ಕಮ್ಮಿನ್ಸ್ 6-1-22-0

ಜೆ.ಕಾರ್ಟರ್ 6-1-22-0

ನಿಕಿತಾ ಮಿಲ್ಲರ್ 23-3-70-1

ಅಶ್ಲೇ ನರ್ಸ್ 16-1-57-0

ಅಸಾದ್ ಪುದುದ್ದೀನ 8-1-28-0

ನರಸಿಂಗ್ ದೇವ ನರೈನ್ 9-1-41-1

ಬ್ರಾಥ್ವೈಟ್ 1-0-10-0

ವಿಕೆಟ್ ಪತನ

35-1, 242-2 ,317-3

ಇತರೆ 8( 5 ಲೆಗ್ ಬೈಸ್, 1 ನೋ ಬಾಲ್, 2 ವೈಡ್)

ಬಿ.ಕಿಶನ್ ಸಿಂಗ್

ಹುಬ್ಬಳ್ಳಿ.ಅ.10: ಸತತ ಎರಡನೇಯ ದಿನವೂ

ಮೈದಾನದಲ್ಲಿ ಪ್ರಾಬಲ್ಯ ಮೆರೆದ ಭಾರತ ಎ ತಂಡ

ದ್ವಿತೀಯ ದಿನದ ಅಂತ್ಯಕ್ಕೆ 334 ರನ್ 3 ವಿಕೆಟ್

ನಂಷಂಓಕಇಋ ಗಳಿಸುವದರ ಮೂಲಕ ಮಹತ್ವದ 66

ರನ್ಗಳ ಮುನ್ನಡೆ ಪಡೆದಿದೆ.

ಇಲ್ಲಿನ ರಾಜ್ನಗರದ ಕೆಎಸ್ಸಿಎ

ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಡಿಯಾ ಎ

ಹಾಗೂ ವೆಸ್ಟ್ಇಂಡೀಸ್ ಎ ತಂಡಗಳ ನಡುವಿನ

ಅನೌಪಚಾರಿಕ ಟೆಸ್ಟ್ ಪಂದ್ಯದ ದ್ವಿತಿಯ ದಿನ

ಅತಿಥೇಯ ಭಾರತ ತಂಡ ತನ್ನ ಬ್ಯಾಟಿಂಗ್ ಪ್ರಾಬಲ್ಯ

ಮೆರೆದಿದ್ದು ನಾಯಕ ಚೇತೇಶ್ವರ ಪೂಜಾರಾ ಹಾಗೂ

ಗೌತಮ ಗಂಭೀರ ಅವರ ಶತಕಗಳ ಕಾಣಿಕೆಯಿಂದ

ಬೃಹತ್ತ ಮೊತ್ತ ದಾಖಲಿಸುವಲ್ಲಿ ಯಶ ಕಂಡಿದೆ.

ನಿನ್ನೆಯ ಹತ್ತು ರನ್ಗಳಿಸಿದ್ದ ಭಾರತ

ತಂಡ ಇಂದು ಬೆಳಿಗ್ಗೆ ತಂಡ ಮೊತ್ತಕ್ಕೆ 25 ರನ್

ಸೇರಿಸುವಂಷಂಓರಂನ್ಲಿ ವಿ.ಜಗದೀಶ ಅವರ ವಿಕೆಟ್

ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು.

ಎರಡನೇಯ ಕ್ರಮಾಂಕದಲ್ಲಿ ಆಡಲು ಬಂದ

ನಾಯಕ ಚೇತೇಶ್ವರ ಪೂಜಾರ ಅಜೇಯ 139 ರನ್

ಸಿಡಿಸಿದರಲ್ಲದೇ ಗೌತಮ ಗಂಭೀರ ಜತೆ ಗೂಡಿ

ದಾಖಲೆಯ 207 ರನ್(378 ಎಸೆತ) ಜತೆಯಾಟ

ನಿಭಾಯಿಸಿದರು.

ಗಂಭೀರ ಪೂಜಾರಾ ಜುಗಲ್ಬಂದಿ:ವಿ.

ಜಗದೀಶ ಡಿ.ಜಾನ್ಸ್ನ ಎಸೆತದಲ್ಲಿ ಕ್ಲಿನ್ ಬೌಲ್ಡ್

ಆದ ನಂತರ ಕ್ರಿಸ್ಗೆ ಇಳಿದ ನಾಯಕ ಚೇತೇಶ್ವರ

ಪೂಜಾರಾ ಮೊದ ಮೊದಲು ನಿಧಾನವಾಗಿ

ಆಡಿದರು ಊಟದ ಸಮಯದ ವರಗೆ

ಆಕ್ರಮಣಕಾರಿಯಾಗಿ ಆಡಿ 38 ರನ್ ಕಲೆಹಾಕಿದರು.

ಗೌತಮ ಗಂಭೀರ ಪ್ರಥಮ ಎಸೆತದಿಂದಲೇ

ಎಚ್ಚರಿಕೆ ಮಿಶ್ರಿತ ಆಟಕ್ಕೆ ಶರಣಾದರೂ ಸಹ

ಭೋಜನ ವಿರಾಮದ ವರೆಗೆ 107 ಎಸತೆಗಳಲ್ಲಿ

60 ರನ್ ಗಳಿಸಿದರು. 56 ರನ್ಗಳಿಸಿದ್ದಾಗ

ಜೋನಾಥನ ಕಾರ್ಟ್ರ ಎಸೆತದಲ್ಲಿ ಸ್ಲಿಪ್ನಲ್ಲಿ ಅಶ್ಲೇ

ನರ್ಸ್ ಕ್ಯಾಚ್ ಬಿಟ್ಟಿದನ್ನು ವರವಾಗಿ ಮಾಡಿಕೊಂಡ

ಗಂಭೀರ ಭೋಜನದ ವಿರಾಮದ ಬಳಿಕ ತೀರಾ

ನಿಧಾನವಾಗಿ ಆಡಿ ಚಹಾ ವಿರಾಮದ ಅಂತ್ಯಕ್ಕೆ

ಕೇವಲ 33 ರನ್ಗಳನ್ನು ಮಾತ್ರ ಪೇರಿಸಿದರು.

ಮತ್ತೊಂದೆಡೆ ಪೂಜಾರಾ ಸಹ ಭೋಜನದ

ವಿರಾಮದ ಬಳಿಕ ಮಂಕು ಕವಿದವರಂತೆ

ಆಡಿ ಕೇವಲ 40 ರನ್ ಗಳಿಸಿದರು. ಭಾರತದ

ಬ್ಯಾಟಿಂಗ್ ಇನ್ನಿಂಗ್ಸ್ನಲ್ಲಿ ಈ ಅವಧಿಯು ತೀರಾ

ಕಳಪೆಯದಾಗಿದ್ದರು ಸಹ ಯಾವುದೇ ವಿಕೆಟ್

ಪತನ ವಾಗಲಿಲ್ಲ ಒಟ್ಟು 24 ಓವರ್ಗಳಲ್ಲಿ 81 ರನ್

ಗಳಾದವು.

ಚಹಾ ವಿರಾಮದ ಬಳಿಕ ಗೌತಮ

ಗಂಭೀರ ಕಮ್ಮಿನ್ಸ್ ಎಸೆತವನ್ನು ಮಿಡ್ ಆನ್ನಲ್ಲಿ

ಆಕಂಷಂಜಕಂವಾಗಿ ಬೌಂಡರಿಗಟ್ಟುವ ಮೂಲಕ ಶತಕ

ಬಾರಿಸಿದರು. ಶತಕದ ನಂತರ ವೇಗವಾಗಿ ರನ್ಗಳಿಕೆ

ಮುಂದಾದರು ಅಂತಿಮವಾಗಿ 74 ನೇ ಓವರನಲ್ಲಿ

ನರಸಿಂಗ್ ದೇವನರೈನ್ ಎಸೆತದಲ್ಲಿ ದೊಡ್ಡ

ಹೊಡೆತಕ್ಕೆ ಪ್ರಯತ್ನಿಸಿ ಬೌಲ್ಡ್ ಆಗಿ ನಿರ್ಗಮಿಸಿದರು.

ಓಟ್ ಆಗುವ ಮುನ್ನಾ ಗಂಭೀರ ಪೂಜಾರ

ಜತೆಗೂಡಿ 207 ರನ್ ಜತೆಯಾಟ ವಾಡಿದರು

ವೈಯಕ್ತಿಕವಾಗಿ 123(236) ರನ್ ಕಲೆಹಾಕಿದರು.

ಗಂಭೀರ ಓಟ ಆದನಂತರ ಮತ್ತೆ

ನಿದಾನಗತಿಯಲ್ಲಿ ರನ್ ಗಳಿಸಿದ ಪೂಜಾರಾ ನಿಕಿತಾ

ಮಿಲ್ಲರ್ ಎಸತೆದಲ್ಲಿ ಕವರ್ನಲ್ಲಿ ಬೌಂಡರಿ ಗಳಿಸುವ

ಮೂಲಕ ಶತಕ ಸಂಪಾದಿಸಿದರು.

ವಿರೂ ಎಂಟ್ರಿ ಮೈದಾನದಲ್ಲಿ ವಿದ್ಯುತ್

ಸಂಚಾರ:ಗಂಭೀರ ಓಟ್ ಆದನಂತರ ಮೈದಾನಕ್ಕೆ

ಇಳಿದ ಸ್ಪೌಟಕ ಬ್ಯಾಟ್ಸ್ಮನ್ ವಿರೇಂದ್ರ ಸೆಹ್ವಾಗ್ಗೆ

ಪ್ರೇಕ್ಷಕರಿಂದ ಭಾರಿ ಕರಾಡತನ,ಶಿಳ್ಳೆ,ಚಪ್ಪಾಳೆ

ಮೂಲಕ ಸ್ವಾಗತ ದೊರಕಿತು.

ಪ್ರೇಕ್ಷಕರ ನಾಡಿ ಮಿಡಿತಕ್ಕೆ ಸರಿಯಾಗಿ ಸ್ಪಂದಿಸಿ

ಆಡಿದ ವಿರೇಂದ್ರ ಸೆಹ್ವಾಗ ತಾವು ಎದುರಿಸಿದ

ಎರಡನೇ ಓವರನಲ್ಲಿ ಪಂದ್ಯದ ಪ್ರಥಮ ಸಿಕ್ಸ್ರ

ಎತ್ತಿದರು, ಲಾಂಗ್ ಆನ್ ನಲ್ಲಿ ನಿಕಿತಾ ಮಿಲ್ಲರ್

ಎಸತದಲ್ಲಿ ಎತ್ತಿದ ಸಿಕ್ಸ್ ಮೀಡಿಯಾ ಗ್ಯಾಲರಿಯ

ಮೇಲೆ ಬಂದು ಬಿತ್ತು.

ಇದಾದ ಬಳಿಕ ದೇವ ನರೈನ್ ನ

ಓವರ್ನಲ್ಲಿ ಸತತವಾಗಿ ಎರಡು ಬೌಂಡರಿಗಳನ್ನು

ಬಾರಿಸಿದರು.ವೀರೂ ಇರುವರೆಗೂ ಚುರುಕಿನಿಂದ

ಸಾಗಿದ ಸ್ಕೌರ್ ಬೋರ್ಡ್ ಅವರು ಓಟ್

ಆದನಂತರ ಮಂದವಾಯಿತು. ಆಕ್ರಮಣಕಾರಿ

ಆಟವಾಡಿದ ಸೆಹ್ವಾಗ್ ಅಂತಿಮವಾಗಿ 38(49)

ರನ್ ಗಳಿಸಿ ನಿಕಿತಾ ಮಿಲ್ಲರ್ ಎಸೆತದಲ್ಲಿ ಅಶ್ಲೇ

ನರ್ಸ್ಗೆ ಕ್ಯಾಚ್ ನೀಡಿ ಮರಳಿದರು. ಇದಕ್ಕೂ

ಮುಂಚೆ ಪೂಜಾರಾ ಜತೆಗೂಡಿ 55 ರನ್ಗಳ

ಜತೆಯಾಟ ನಿಭಾಯಿಸಿ ಭಾರತದ ಮೊತ್ತ 300 ರ

ಗಡಿ ದಾಟುವಂತೆ ನೋಡಿಕೊಂಡರು.

ದಿನದ ಅಂತ್ಯಕ್ಕೆ ಭಾರತ 3 ವಿಕೆಟ್ ನಷ್ಟಕ್ಕೆ 334

ರನ್ಗಳಿಸಿದ್ದು ನಾಯಕ ಚೇತೇಶ್ವರ ಪೂಜಾರಾ

139(228) ಹಾಗೂ ಅಭಿಷೇಕ ನಾಯರ್ 10( 18)

ಅಜೇಯರಾಗಿ ಉಳಿದಿದ್ದಾರೆ.

ವೆಸ್ಟ್ಇಂಡೀಸ್ ಪರ ಡಿ.ಜಾನ್ಸ್ನ್, ನಿಕಿತಾ

ಮಿಲ್ಲರ್, ಹಾಗೂ ನರಸಿಂಗ್ ದೇವನರೈನ್ ತಲಾ

ಒಂದು ವಿಕೆಟ್ ಪಡೆದರು.

ಮುಂಬೈ, ಅ.10- ಜಾಗತಿಕ ಕ್ರಿಕೆಟ್ನ

ದಂತಕತೆ, ಶತಕೋಟಿ ಭಾರತೀಯರ ಆರಾಧ್ಯದೈವ,

ಭಾರತ ಕ್ರಿಕೆಟ್ ತಂಡದ ಆಧಾರಸ್ತಂಭ ವಿಶ್ವ ಕ್ರಿಕೆಟ್ನ

ವಾಮಾನಮೂರ್ತಿ .ಮಾಸ್ಟರ್ ಬ್ಲಾಸ್ಟರ್ ಸಚಿನ್

ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಣೆ

ಮಾಡಿದ್ದಾರೆ.

ತಮ್ಮ ತವರು ನೆಲ ಮುಂಬೈನಲ್ಲಿ

ನಡೆಯಲಿರುವ ಆಸ್ಟ್ತ್ರೇಲಿಯಾ ವಿರುದ್ಧದ 200 ನೇ

ಪಂದ್ಯದಲ್ಲಿ 25 ವಂಷಂಜಗಂಳ ಕ್ರಿಕೆಟ್ ವೃತ್ತಿ ಜೀವನಕ್ಕೆ

ವಿದಾಯ ಹೇಳುವುದಾಗಿ ಸ್ವತಃ ಸಚಿನ್ ಇಂದು

ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.

1973 ಏಪ್ರಿಲ್ 24ರಂದು ಮುಂಬೈನಲ್ಲಿ

ಜನಿಸಿದ್ದ ಸಚಿನ್ ರಮೇಶ್ ತೆಂಡೂಲ್ಕರ್ ತಮ್ಮ

17 ನೇ ವಯಸ್ಸಿನಲ್ಲೇ ಅಂತಾರಾಷ್ಟ್ತ್ರೀಯ ಕ್ರಿಕೆಟ್ಗೆ

ಪಾದಾರ್ಪಣೆ ಮಾಡಿದ್ದರು. ಪಾಕ್ ವಿರುದ್ಧ

ಮೊದಲ ಪಂದ್ಯವಾಡಿದ್ದ ಸಚಿನ್ ವಿಶ್ವ ಕ್ರಿಕೆಟ್ನಲ್ಲಿ

ದಾಖಲೆಗಳ ಸರದಾರ ಎನಿಸಿಕೊಂಡವರು. ಏಕದಿನ,

ಟೆಸ್ಟ್ ಪ್ರಾಕಾರಗಳಲ್ಲಿ ವಿಶ್ವ ದಾಖಲೆಗಳನ್ನು ಬರೆದ

ಶಇಚಿಂಷಂಪ ದಾಂಡಿಗ.

ಒಟ್ಟು 463 ಏಕ ದಿನ ಪಂದ್ಯಗಳನ್ನು ಆಡಿರುವ

ಸಚಿನ್ 49 ಶತಕ, 96 ಅರ್ಧಶತಕ ಸೇರಿದಂತೆ

18426 ರನ್ ದಾಖಲಿಸಿದ್ದಾರೆ. 198 ಟೆಸ್ಟ್ಗಳಲ್ಲಿ

51 ಶತಕ ಮತ್ತು 67 ಅರ್ಧಶತಕ ಒಳಗೊಂಡಂತೆ

15837 ರನ್ಗಳನ್ನು ಕೂಡಿ ಹಾಕುವ ಮೂಲಕ

ರನ್ ಮೆಷಿನ್ ಎಂಥಲೇ ಖ್ಯಾತಿ ಗಳಿಸಿದ್ದಾರೆ.

ಆಸ್ಟ್ತ್ರೇಲಿಯಾದ ಸರ್ ಬ್ರಾಡ್ಮನ್ ಸೇರಿದಂತೆ

ಜಗತ್ತಿನ ಸರ್ವಶಇಚಿಂಷಂಪ ಕ್ರೀಡಾ ಪ್ರಶಸ್ತಿ, ಪುರಸ್ಕಾರಗಳು

ಸಚಿನ್ ಪಾಲಾಗಿವೆ. ಒಟ್ಟು 6 ವಿಶ್ವಕಪ್ಗಳಲ್ಲಿ

ಭಾರತ ತಂಡವನ್ನು ಪ್ರತಿನಿಧಿಸಿದ್ದ ಸಚಿನ್ ಅವರು

ಕ್ರಿಕೆಟ್ನ ದೈತ್ಯನೆಂದೇ ಖ್ಯಾತಿಯಾದವರು.

ಎರಡುವರೆ ದಶಕಗಳ ಕಾಲ ಭಾರತ ಕ್ರಿಕೆಟ್

ತಂಡದ ಆಧಾರಸ್ತಂಭವಾಗಿದ್ದ ಸಚಿನ್ ತಮ್ಮ

ವೃತ್ತಿ ಜೀವನೆಕ್ಕೆ ಘಇಂಂಷಂಣಇಮಾಡುತ್ತಿದ್ದಂತೆ

ಕ್ರಿಕೆಟ್ ಲೋಕದಲ್ಲಿ ಮಿನುಗುವ ನಕ್ಷತ್ರವೆಂದೇ

ಹೇಳುತ್ತಿದ್ದ ಲಿಟ್ಲ್ ಮಾಸ್ಟರ್ ಖ್ಯಾತಿಯ ಯುಗಾಂತ್ಯ

ಕೊನೆಗೊಂಡಿತು.

ಆ ದೇವರು ಸಚಿನ್ ತೆಂಡ್ಯುಲ್ಕರ್ ಅವರನ್ನು

ರನ್ ಹೊಡೆಯಲೆಂದೇ ಈ ಪ್ರಪಂಚಕ್ಕೆ

ಕಳುಹಿಸಿದ್ದಾನೆಂದು ಒಂದು ಭಾರಿ ಸುನಿಲ್

ಗಾವಸ್ಕರ್ ಹೇಳಿದಂತೆ ಅಭಿಮಾನಿಗಳ ಪಾಲಿಗೆ

ರನ್ ಮೇಷಿನ್ ಎಂದೇ ಹೆಸರುವಾಸಿಯಾಗಿದ್ದರು.

ಗುರುವಾರ ಇದ್ದಕ್ಕೀದ್ದಂತೆ ನಿವೃತ್ತಿಘೋಷಣೆ

ಮಾಡಿದ ಸಚಿನ್, ತಮ್ಮ ಟ್ವಿಟ್ಟರ್ನಲ್ಲಿ ನನ್ನ

ಜೀವನವನ್ನೆಲ್ಲ ಕ್ರಿಕೆಟ್ಗಾಗಿ ಮುಡಪಾಗಿಟ್ಟಿದ್ದೆ.

ವೃತ್ತಿ ಜೀವನದ 24 ವರ್ಷಗಳಲ್ಲಿ ಸಾಕಷ್ಟು ಏಳು

ಬೀಳುಗಳನ್ನು ಕಂಡಿದ್ದೇನೆ. ನನಗೆ ಕ್ರಿಕೆಟ್ ಇಲ್ಲದ

ಜೀವನವನ್ನು ಉಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

11 ನೇ ವಂಷಂಜಕಇಋ ಕ್ರಿಕೆಟ್ಗೆ ಪಾದರ್ಪಣೆ

ಮಾಡಿದ್ದೇನೆ.ನನಗೆ ನನ್ನ ದೇಶ ಸೇರಿದಂತೆ ವಿಶ್ವದ

ಎಲ್ಲೆಡೆ ಸಂಕಂಷಂಂಓ ಗೌರವಧಾರಗಳು ಸಿಕ್ಕಿವೆ. 200ನೇ

ಟೆಸ್ಟ್ ಪಂದ್ಯವನ್ನು ನನ್ನ ಮಾತೃಭೂಮಿಯಾದ

ಮುಂಬೈನಲ್ಲಿ ಆಡಬೇಕೆಂಬುದು ನನ್ನ

ಬಯಕೆಯಾಗಿದೆ.ಆದಕ್ಕಾಗಿ ಆ ದಿನವನ್ನು ಎದುರು

ನೋಡುತ್ತಿದ್ದೇನೆಂದು ಹೇಳಿದ್ದಾರೆ.

24 ವರ್ಷ ನನ್ನ ವೃತ್ತಿ ಜೀವನದ ಭಾಗವಾಗಿದ್ದ

ಬಿಸಿಸಿಐ , ತಂಡದ ಆಟಗಾರರು, ನನ್ನ

ಅಭಿಮಾನಿಗಳು, ನನ್ನ ಏಳ್ಗೆಗೆಗೆಕಾರಣೀಭೂತರಾದ

ಕುಟುಂಬದ ಸದಸ್ಯರಿಗೆ ಸಚಿನ್ ಕೃತಜ್ಞೆತೆ

ಸಲ್ಲಿಸಿದ್ದಾರೆ.ನನ್ನ ಸಾಧನೆಗೆ ಬೆನ್ನು ತಟ್ಟಿ

ಪ್ರೌತ್ಸಹಿಸಿದ ಆಚಾರ್ಯರಮಾಕಾಂತ್ ಅವರಿಗೂ

ಧನ್ಯವಾದ ಹೇಳುವುದನ್ನು ಮರೆತಿಲ್ಲ.

ಕ್ರಿಕೆಟ್ನ ಎಲ್ಲಾ ಗೌರವಧರಗಳಿಗೆ ಭಾಜನರಾಗಿದ್ದ

ಸಚಿನ್ ಆನೆ ನಡೆದದ್ದೇ ದಾರಿ ಎಂಬಂತೆ ಈ

ವಾಮಾನ ಮೂರ್ತಿಗೆ ಸರಿಸಾಟಿಯಾಗುವ

ಆಟಗಾರ ಮತ್ತೇ ಹುಟ್ಟಿಬರುವ ಸಾಧ್ಯತೆಗಳು ತೀರಾ

ಕಡಿಮೆ ಎಂದರೂ ಅತೀಶಯೋಕ್ತಿಯಾಗುವುದಿಲ್ಲ.

ಮುಂಬೈನಲ್ಲಿ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ್ದ ಈ

ಪುಟ್ಟ ಬಾಲಕ ಮುಂದೆ ವಿಶ್ವವೇ ಬೆರಾಗುವಂತಹ

ಆಟಗಾರನಾಗಿ ಬೆಳೆಯುತ್ತಾನೆಂದು ಯಾರೊಬ್ಬರು

ಉಹಿಸರಲಿಲ್ಲ.

ಸಾಧನೆ ಮಾತನಾಡಬೇಕು, ಮಾತು

ಸಾಧನೆಯಾಗಬಾರದೆಂಬುದನ್ನು ಮನಗಂಡಿದ್ದ

ಸಚಿನ್ ಎಂದಿಗೂ ಬೇರೆ ಆಟಗಾರನಂತೆ ಅತೀ

ಎನಿಸುವಷ್ಟು ವರ್ತಿಸಿದವರಲ್ಲ. ವಿಶ್ವ ಕ್ರಿಕೆಟ್ಗ ಡಾನ್

ಬ್ರಾಡ್ಮನ್ ಅವರಿಂದಲೇ ಪ್ರಶಂಶಗೆ ಒಳಗಾಗಿದ್ದ ಈ

ವಾಮಾನಮೂರ್ತಿ ಕ್ರೀಡಾಂಗಣದಲ್ಲಿರುವವರೆಗೂ

ಬೌಲರ್ಗಳ ಬೆವರಿಳಿಸುತ್ತಿದ್ದರು. ಎಷಇಓಂ ಎತ್ತರಕ್ಕೆ

ಬೆಳೆದರೂ ಅವರು ಎಂದಿಗೂ ಲಕ್ಷಣ ರೇಖೆ

ದಾಟಿದವರಲ್ಲ. ಹಿರಿಯರಿರಲಿ ಇಲ್ಲವೇ ಕಿರಿಯರಿರಲಿ

ಎಲ್ಲರೊಂದಿಗೆ ಬೆರೆಯುವ ರೀತಿಯೇ ಎಂಥವರನ್ನು

ಮಂತ್ರಮುಗ್ದರನ್ನಾಗಿ ಮಾಡಿ ಬಿಡುತ್ತಿತ್ತು.

ಅತೀ ಹೆಚ್ಚು ಟೆಸ್ಟ್ ಮತ್ತು ಅತೀ ಹೆಚ್ಚು ಏಕದಿನ

ಪಂದ್ಯವಾಡಿದ್ದ ಈ ಲಿಟ್ಲ್ ಮಾಸ್ಟರ್ ಸ್ವಾರ್ಥಕ್ಕಾಗಿ

ಆಡದೆ ದೇಶಕ್ಕಾಗಿ ಆಡಿದ್ದೇ ಹೆಚ್ಚು. ಒಂದು

ಬಾರಿ ಇಂಗ್ಲೆಂಡ್ನಲ್ಲಿ ವಿಶ್ವಕಪ್ ಪಂದ್ಯದ ವೇಳೆ

ಅವರ ತಂದೆ ಇದ್ದಕ್ಕೀದ್ದಂತೆ ತೀರಿಕೊಂಡರು. ಆ

ಸಂದರ್ಭದಲ್ಲಿ ತಂದೆಯವರ ಆಂತ್ಯ ಸಂಸ್ಕಾರದಲ್ಲಿ

ಭಾಗವಹಸಿ ನಂತರ ತಂಡವನ್ನು ಸೇರಿಕೊಂಡು

ಕ್ರೀಡಾ ಸ್ಪೂರ್ತಿ ಮೆರೆದಿದ್ದರು.

ಸತತ ಆರು ವಿಶ್ವಕಪ್ ಆಡಿದ್ದ ತೆಂಡ್ಕುಲ್ಕರ್,

ಇಲ್ಲಯೂ ದಾಖಲೆ ನಿರ್ಮಿಸಿದ್ದಾರೆ.ಒಂದು

ಭಾರಿಯಾದರೂ ತಮ್ಮ ಅವಧಿಯಲ್ಲಿ ಭಾರತ

ವಿಶ್ವಕಪ್ ಗೆಲ್ಲಬೇಕು ಎಂಬ ಕನಸು ಕಂಡಿದ್ದರು.

2011 ರಲ್ಲಿ ತಮ್ಮ ಹುಟ್ಟೂರಾದ ಮುಂಬೈನಲ್ಲಿ

ಭಾರತ , ಶ್ರೀಲಂಕ ವಿರುದ್ದ ವಿಶ್ವಕಪ್ ಗೆದ್ದಾಗ

ತಂಡದ ಎಲ್ಲಾ ಆಟಗಾರರು ಭುಜದ ಮೇಲೆ

ಹೊತ್ತುಕೊಂಡು ಕ್ರೀಡಾಂಗಣದ ಸುತ್ತ ಕುಣಿದು

ಕೇಕೆ ಹಾಕಿದ್ದರು. 18 ವಂಷಂಜಗಂಳ ನಂತರ ಭಾರತ

ವಿಶ್ವಕಪ್ ಗೆದ್ದಾಗ ಇಡೀ ತಂಡವೇ ಈ ಪಕ್ನ್ನು

ಅವರಿಗೆ ಅರ್ಪಿಸಿತ್ತು.

ಸಚಿನ್ ಬಗ್ಗೆ ಎಷಇಓಂ ಹೊಗಳಿದರೂ ಅದು

ಒಂದು ದಿನಕ್ಕೆ ಮುಗಿಯುವಂತದ್ದಲ್ಲ. .ಭಾರತ

ಕ್ರಿಕೆಟ್ ತಂಡದ ಎರಡೂವರೆ ದಶಕ ಕಾಲ

ಆಧಾರಸ್ತಂಭವಾಗಿದ್ದ ಸಚಿನ್ ಇಲ್ಲದ ಭಾರತ

ತಂಡವನ್ನು ಉಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

loading...

LEAVE A REPLY

Please enter your comment!
Please enter your name here