ಬೇಲೆಕೇರಿ ಅದಿರು ಪ್ರಕರಣ ಶೀಘ್ರದಲ್ಲೇ ಅಧಿಕಾರಿಗಳ ಬಂಧನ

0
21
loading...

ಬೆಂಗಳೂರು, ಅ.13- ಮಾಜಿ ಸಚಿವರು,

ಶಾಸಕರಿಗೆ ಜೈಲು ದರ್ಶನ ಮಾಡಿಸಿದ್ದ ಬೇಲೇಕೇರಿ

ಅದಿರು ಅಕ್ರಮ ಇದೀಗ ಪೊಲೀಸ್ ಇಲಾಖೆಯ

ಅಧಿಕಾರಿಗಳಿಗೂ ಸೆರೆವಾಸದ ಭೀತಿ ಹುಟ್ಟಿಸಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಸದ್ಯದಲ್ಲೇ

ಹಲವು ಅಧಿಕಾರಿಗಳನ್ನು ಬಂಧಿಸಲು ಸಿದ್ಧತೆ ನಡೆಸಿದೆ.

ಬಳ್ಳಾರಿ, ತುಮಕೂರು, ಚಿತ್ರದುರ್ಗದಲ್ಲಿ

ನಡೆದ ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ನೀಡಿದ

ಕೆಲವು ಐಪಿಎಸ್, ಡಿವೈಎಸ್ಪಿ ಇನ್ಸ್ಪಸಕ್ಟರ್ಗಳು,

ಸಬ್ಇನ್ಸ್ಪಸಕ್ಟರ್ಗಳು ಸೇರಿದಂತೆ ಕೆಲವರನ್ನು ವಶಕ್ಕೆ

ತೆಗೆದುಕೊಳ್ಳಲು ಸಿಬಿಐ ಮುಂದಾಗಿದೆ.

2009-10ರಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆಗೆ

ಪ್ರೌತ್ಸಾಹ ನೀಡಿದ್ದು ಮತ್ತು ಅದಿರನ್ನು ಕಾರವಾರ

ಜಿಲ್ಲೆಯ ಬೇಲೇಕೇರಿ ಬಂದರಿಗೆ ಸಾಗಿಸಲು ಕೆಲವು

ಹಿರಿಯ ಪೊಲೀಸ್ ಅಧಿಕಾರಿಗಳು ಕುಮ್ಮಕ್ಕು ನೀಡಿರುವ

ಆರೋಪವಿದೆ.

ಈಗಾಗಲೇ ಬೇಲೇಕೇರಿ ಬಂದರಿನಿಂದ

ಅಕ್ರಮ ಅದಿರು ಸಾಗಾಣಿಕೆ ಪ್ರಕರಣವನ್ನು ಸಿಬಿಐ

ತನಿಖೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ಶಾಸಕರಾದ

ಸುರೇಶ್ ಬಾಬು, ಸತೀಶ್ ಸೈಲ್, ನಾಗೇಂದ್ರ

ಬಂಧನಕ್ಕೊಳಪಟ್ಟಿದ್ದರೆ ಮತ್ತೊಬ್ಬ ಶಾಸಕ ಆನಂದ್

ಸಿಂಗ್ರನ್ನು ಯಾವುದೇ ವೇಳೆ ಸಿಬಿಐ ಬಂಧಿಸುವ

ಸಾಧ್ಯತೆಯಿದೆ.

ಇದೇ ಪ್ರಕರಣದಲ್ಲಿ ಮಾಜಿ ಸಚಿವ ಜನಾರ್ದನರೆಡ್ಡಿ

ಈಗಾಗಲೇ ಹೈದರಾಬಾದ್ನ ಚಂಚಲಗುಡ ಜೈಲಿನಲ್ಲಿ

ಕಾಲ ಕಳೆಯುತ್ತಿದ್ದಾರೆ.

ಬಳ್ಳಾರಿ, ಗದಗ, ಹಾವೇರಿ, ಹುಬ್ಬಳ್ಳಿ, ಧಾರವಾಡ,

ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅದಿರು ಸಾಗಾಣಿಕೆಗೆ

ಸಹಕಾರ ನೀಡಿದ ಹಿರಿಯ ಪೊಲೀಸ್ ಅಧಿಕಾರಿಗಳನ್ನು

ಸಿಬಿಐ ಯಾವುದೇ ವೇಳೆ ವಿಚಾರಣೆಗೊಳಪಿಸುವ

ಸಾಧ್ಯತೆ ಇದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ಕೆಲವು ಪೊಲೀಸ್ ಅಧಿಕಾರಿಗಳು ಗಣಿ ಕಂಪೆನಿಗಳ

ಮಾಲೀಕರಿಂದ ಕಪ್ಪ ಪಡೆದು ಬೇಲೇಕೇರಿ ಬಂದರಿಗೆ

ರಫ್ತು ಮಾಡಲು ಸಹಾಯ ಮಾಡಿದ್ದರ ಹಿನ್ನೆಲೆಯಲ್ಲಿ

ಹೆಚ್ಚಿನ ವಿಚಾರಣೆಗಾಗಿ ಸಿಬಿಐ ವಶಕ್ಕೆ ತೆಗೆದುಕೊಳ್ಳುವ

ಸಾಧ್ಯತೆ ಇದೆ.

ಇದರಲ್ಲಿ ಪ್ರಮುಖವಾಗಿ ದಾವಣಗೆರೆ

ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರವಿ

ನಾರಾಯಣ್, ಬೀದರ್ನ ಹೆಚ್ಚುವರಿ ಎಸ್ಪಿ ಸಂಗೀತಾ,

ರಾಯಚೂರಿನ ಡಿವೈಎಸ್ಪಿ ತುರೈ, ನಿವೃತ್ತ ಡಿವೈಎಸ್ಪಿ

ಬಾಬು ಕೋಲೇಕರ್, ಕೊಪ್ಪಳದ ಡಿವೈಎಸ್ಪಿ ವಿಜಯ

ದಂಬಲ, ಬಸವಕಲ್ಯಾಣದ ಇನ್ಸ್ಪೆಕ್ಟರ್ ಎಸ್.ಎಸ್.

ಹುಲ್ಲೂರು, ಉಲ್ಲಾಳದ ಇನ್ಸ್ಪೆಕ್ಟರ್ ಮಂಜುನಾಥ್,

ಧರ್ಮೇಂದ್ರ ಸೇರಿದಂತೆ ಕೆಲವು ಎಸ್ಐಗಳು

ಸೇರಿದಂತೆ ಕೆಲವರು ಸಿಬಿಐ ಪಟ್ಟಿಯಲ್ಲಿದ್ದಾರೆ.

ಪೇದೆಯಿಂದ ಹಿಡಿದು ಎಸ್ಪಿವರೆಗೂ ಅಕ್ರಮ

ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದು, ಜನಾರ್ದನರೆಡ್ಡಿ

ಒಡೆತನದ ಅಸೋಸಿಯೇಟ್ ಮೈನಿಂಗ್ ಕಂಪೆನಿ,

ಡೆಕನ್ ಮೈನಿಂಗ್ ಸಿಂಡಿಕೇಟ್ ಸೇರಿದಂತೆ ಕೆಲವು

ಕಂಪೆನಿಗಳ ಮಾಲೀಕರ ಜತೆ ಶಾಮೀಲಾಗಿದ್ದಾರೆ ಎಂಬ

ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳನ್ನು ವಶಕ್ಕೆ

ಪಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.

ಬೇಲೇಕೇರಿ ಬಂದರಿಗೆ ಕಾನೂನು ಬಾಹಿರವಾಗಿ

ಅದಿರು ಸಾಗಾಣಿಕೆ ಮಾಡಲು ಪೊಲೀಸ್ ಅಧಿಕಾರಿಗಳು,

ಅರಣ್ಯ, ಸಾರಿಗೆ, ಕಂದಾಯ ಅಧಿಕಾರಿಗಳ ಮೂಲಕ

ಡೀಲ್ ಕುದುರಿಸಿ ಕೈ ಬೆಚ್ಚಗೆ ಮಾಡಿಕೊಂಡಿದ್ದರು

ಎಂದು ಹೇಳಲಾಗಿದೆ0.

 

loading...

LEAVE A REPLY

Please enter your comment!
Please enter your name here