ಸೆನ್ಸಾರ್ಸಗಳ ಎರಡು ದಿನಗಳ ಕಾರ್ಯಾಗಾರ

0
13
loading...

ಚಿಕ್ಕೌಡಿ 11: ಸ್ಥಳಿಯ ಕೆ.ಎಲ್.ಇ ಸಂಸ್ಥೆಯ ಅಂಗಸಂಸ್ಥೆ ಸಿ.ಬಿ ಕೋರೆ ಪಾಲಿಟೆಕ್ನಿಕ್ ಮಹಾವಿದ್ಯಾಲಯದಲ್ಲಿ ಭಾರತೀಯ ತಾಂತ್ರಿಕ ಶಿಕ್ಷಣ, ನವದೆಹಲಿ ಹಾಗೂ ಅಟೋಮೊಬೈಲ್ ಕ್ಷೇತ್ರದಲ್ಲಿ ಡಿಗ್ಗಜ ಉದ್ದಿಮೆಯಾದ ಬಾಶ್ ಕಂಪನಿ, ಬೆಂಗಳೂರು ಇವರ ಸಹಯೋಗತ್ವದಲ್ಲಿ  ಅಡ್ವಾನ್ಸಡ ಸಾಫ್ಟವೇರ್ ಹಾಗೂ ಸೆನ್ಸಾರ್ಸಗಳ ಎರಡು ದಿನಗಳ ಕಾರ್ಯಾಗಾರ ಜರುಗಿತ್ತು. ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ  ನಾಗರಾಜ ಹುಲ್ಲ ಅವರು ಅಂತರಾಷ್ಡ್ತ್ರೀಯ ಬಾಶ್ ಕಂಪನಿಯು ಅಟೋಮೊಬೈಲ್ ಕ್ಷೇತ್ರದಲ್ಲಿ ಹೊಸ ಹೊಸ ಸಾಫ್ಟವೇರಗಳನ್ನು ಬಳಕೆ ಮಾಡುತ್ತಿದ್ದು,  ಆಧುನಿಕ ವಾಹನಗಳಲ್ಲಿ ಅಳವಡಿಸಲಾಗುತ್ತಿರುವ ಸೆನ್ಸಾರಗಳ ಮುಖಾಂತರ ವಾಹನಗಳ ದುರಸ್ತಿಯನ್ನು ದೂರದಿಂದಲೇ ಮಾಡ ಬಹುದಾಗಿದೆಂದು ಹೇಳಿದರು.

ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ. ಬಿ.ಎ ಪೂಜಾರಿಯವರು ಇವತ್ತಿನ ಅವಿಷ್ಕಾರದ ಯುಗದಲ್ಲಿ ಗಣಕಯಂತ್ರಗಳ ಸಾಫ್ಟವೇರಗಳು ಪ್ರತಿಯೊಂದು ಕ್ಷೇತ್ರದಲ್ಲಿ ಬಳಕೆ ಮಾಡಿಕೊಂಡು ಯೋಜನಾ ಪದ್ಧತಿಗಳಲ್ಲಿ ಅಳವಡಿಸಲಾಗಿರುವ ಸೆನ್ಸಾರಗಳಿಂದ ಬ್ಲೂಟೂಥ್ ಮುಖಾಂತರ ನ್ಯೂನ್ಯತೆಗಳನ್ನು ಸರಾಗವಾಗಿ ಪತ್ತೆ ಹಚ್ಚಿ ಸರಿಪಡಿಸುವ ಕ್ರಮಗಳು ಸರಳೀಕೃತಗೊಂಡಿವೆ. ಓ.ಬಿ.ಡಿ ಮುಖಾಂತರ ವಾಹನದ ಸಂಪೂರ್ಣ ಪರೀಕ್ಷೆಗಳನ್ನು ಮಾಡಿ ಯಂತ್ರಗಳ ನ್ಯೂನ್ಯತೆಯನ್ನು ಕೂಡ ಸಾಫ್ಟರಗಳ ಮುಖಾಂತರ ಸರಿಪಡಿಸಬಹುದು ಎಂದು ಹೇಳಿದರು.

ಅಟೋಮೊಬೈಲ್ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶವಿದ್ದು ವಿದ್ಯಾರ್ಥಿಗಳು ತರಬೇತಿಯನ್ನು ಸದುಪಯೋಗಪಡಿಸಿಕೊಳ್ಳಲು ಕರೆಯಿತ್ತರು. ವೇದಿಕೆಯ ಮೇಲೆ ಕಾರ್ಯಾಗಾರ ಸಂಯೋಜಕರಾದ ಪ್ರೊ. ಪ್ರಕಾಶ.ಆರ್.ದೇಸಾಯಿ, ಪ್ರೊ.ಎಲ್.ಕೆ ಪಾಟೀಲ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಕುಮಾರ. ಶ್ರೀಧರ ಬೆಂಡೆ ಸ್ವಾಗತಿಸಿದರು. ಮುದಸ್ಸಿರ.ಎಮ್.ಪಟೇಲ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಸಂಗಮೇಶ ಎ.ಕೆ ವಂದಿಸಿದರು.

loading...

LEAVE A REPLY

Please enter your comment!
Please enter your name here