ಹೈದ್ರಾಬಾದ್-ಕರ್ನಾಟಕ್ಕೆ 371ನೇ(ಜೆ) ಕಲಂ ಜಾರಿ ಕಸಾಪ ಸಿಹಿ ಸಂಭ್ರಮಾಚರಣೆ

0
90
loading...

ಕೊಪ್ಪಳ ಅ,28: ಸಂವಿಧಾನದ 371ನೇ ಕಲಂಗೆ ತಿದ್ದುಪಡಿ ಮಾಡಿ ಹೈದ್ರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಿದ ಕೇಂದ್ರ ಸರಕಾರಕ್ಕೆ ಮತ್ತು ರಾಷ್ಟ್ತ್ರಪತಿಗಳು ಶೀಘ್ರ ಸ್ಪಂದಿಸಿ ಅಂಕಿತ ಹಾಕಿದ್ದಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹೈ-ಕ. ಹೋರಾಟ ಸಮಿತಿ ಸಿಹಿ ಸಂಭ್ರಮಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ನಗರದ ಹೃದಯ ಭಾಗದಲ್ಲಿರುವ ಸಾಹಿತ್ಯ ಭವನದಿಂದ ಅಶೋಕ ವೃತ್ತದ ಮುಖಾಂತರ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ನೀಡಿ ಮಾತನಾಡಿದ  ಸಾಹಿತಿ ಹಾಗೂ ಪ್ರಾಚಾರ್ಯ ಡಾ.ವ್ಹಿ.ಬಿ.ರಡ್ಡೆರ ಹೈದ್ರಾಬಾದ್ ಕರ್ನಾಟಕ ಪ್ರದೇಶ ಹಿಂದುಳಿದಿದ್ದು 371ನೇ ಕಲಂ (ಜೆ) ಅನುಷ್ಠಾನದಿಂದ ಈ ಭಾಗಕ್ಕೆ ಶೈಕ್ಷಣಿಕ ಹಾಗೂ ಓದ್ಯೌಗಿಕ ಮೀಸಲಾತಿ ಸಿಗಲಿದೆ. ಇಂಥ ಒಂದು ಸಂದರ್ಭಕ್ಕೆ ದುಡಿದ ಅನೇಕ ಹೋರಾಟಗಾರರ ಪ್ರತಿಫಲ ಇದಾಗಿದೆ ಎಂದರು.

ಹೋರಾಟ ಸಮಿತಿಯ ಹಿರಿಯ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರು, ಎಚ್.ಎಸ್.ಪಾಟೀಲ, ತಮ್ಮ ಹೋರಾಟದ ಅನುಭವಗಳನ್ನು ಮೆಲುಕು ಹಾಕಿದರು. ಸಾಹಿತಿ ಹಾಗೂ ಚಲನಚಿತ್ರನಟ ಪ್ರಹ್ಲಾದ್ ಬೆಟಗೇರಿ ಈ ಸಂದರ್ಭದಲ್ಲಿ ಹೋರಾಟದ ಮಹತ್ವ ಕುರಿತು ಮಾತನಾಡಿದರು.

ನಂತರ ಮೆರವಣಿಗೆ ನೆಡೆಸಿದ ಪದಾಧಿಕಾರಿಗಳು ಅಶೋಕ ವೃತ್ತ ಮತ್ತು ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನೆರೆದ ಸಾರ್ವಜನಿಕರಿಕೆ ಸಿಹಿ ವಿತರಿಸಿದರು. ಹೋರಾಟಗಾರ ಹಾಗೂ ಪತ್ರಕರ್ತ ವಿಠ್ಠಪ್ಪ ಗೋರಂಟ್ಲಿ, ಹೈದ್ರಾಬಾದ್ ಕರ್ನಾಟಕ ಹೋರಾಟ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ವೀರಪ್ಪ ನಿಂಗೋಜಿ ಹಾಗೂ ಯಲಬುರ್ಗಾ ತಾಲೂಕ ಕಸಾಪ ಗೌರವಾಧ್ಯಕ್ಷ ಶಿವಣ್ಣ ರಾಯರಡ್ಡಿ, ಕೊಪ್ಪಳ ತಾಲೂಕಾ ಕಸಾಪ ಅಧ್ಯಕ್ಷ ಶಿ. ಕಾ ಬಡಿಗೇರ, ಜಿಲ್ಲಾ ಕ.ಸಾ.ಪ ಗೌರವ ಕಾರ್ಯದರ್ಶಿಗಳಾದ ಅಕ್ಬರ್  ಕಾಲಿಮಿರ್ಚಿ, ತಾಲೂಕಾ ಕಸಾಪ ಗೌರವ ಕಾರ್ಯದರ್ಶಿಗಳಾದ ಹುಸೇನಪಾಶಾ, ಪ್ರಕಾಶ್ ಬಳ್ಳಾರಿ, ಗೌರವ ಕೋಶಾಧ್ಯಕ್ಷ ಮೈಲಾರಗೌಡ ಹೊಸಮನಿ, ಜಿಲ್ಲಾ ದಲಿತ ಮುಂಖಂಡರಾದ ಡಾ. ಬಿ. ಜ್ಞಾನಸುಂದರ, ರಾಮಣ್ಣ ಕಂದಾರಿ ವೀರಕನ್ನಡಿಗ ಸಂಘದ ಅಧ್ಯಕ್ಷ ಶಿವಾನಂದ ಹೊದ್ಲೂರ, ಅಳವಂಡಿ ಹೋಬಳಿ ಕಸಾಪ ಅಧ್ಯಕ್ಷ ವಾಸುದೇವ ಕುಲಕರ್ಣಿ, ಹೋರಾಟಗಾರ ಗಾಳೆಪ್ಪ ಮುಂಗೋಲಿ,ಮತ್ತೀತರರು ಭಾಗವಹಿಸಿದ್ದರು.

loading...

LEAVE A REPLY

Please enter your comment!
Please enter your name here