ಉಗ್ನಿಕೇರಿಯಲ್ಲಿ ಶೂಟೌಟ್ ಓರ್ವ ಗಂಭೀರ ಗಾಯ

0
22
loading...

ಮೂರು ಸುತ್ತು ಗುಂಡು ಹಾರಿಸಿ ಅಪರಿಚಿತರು ಪರಾರಿ
ಹುಬ್ಬಳ್ಳಿ.ನ.3: ಕಲಘಟಗಿ ತಾಲೂಕಿನ ಉಗ್ನಿಕೇರಿ ಗ್ರಾಮದಲ್ಲಿ ಶನಿವಾರ ರಾತ್ರಿ ಮೂವರು ಅಪರಿಚಿತರು ದರ್ಗಾದ ಮುಜಾವರೊಬ್ಬರಿಗೆ ಗುಂಡು ಹಾರಿಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿರುವ ಪ್ರಕರಣ ದಾಖಲಾಗಿದೆ.
ಖಲೀಲ್ ಅಹ್ಮದ್ ಅಬ್ದುಲ್ ಅಜೀಜ ಶೇಖ(36) ಘಟನೆಯಲ್ಲಿ ಗಾಯಳುವಾಗಿರುವ ವ್ಯಕ್ತಿ.ಇವರು ಗ್ರಾಮದ ಸಮೀಪದಲ್ಲಿರುವ ಖಮರಲಿ ಷಾಹ ದರ್ಗಾದಲ್ಲಿ ಮುಜಾವರ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಶನಿವಾರ ರಾತ್ರಿ ಮನೆಗೆ ಕುಡಿಯಲು ನೀರು ಕೇಳಲು ಬಂದ ಮೂವರು ಅಪರಿಚಿತರು ಇವರ ಮೇಲೆ ಮೂರು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ಘಟನೆಯಲ್ಲಿ ಗಂಭೀರವಾಗಿ ಗಾಯಾಳು ವಾಗಿರುವ ಈತನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಶನಿವಾರ ರಾತ್ರಿಯೇ ಶಸ್ತ್ತ್ರ ಚಿಕಿತ್ಸೆ ನಡೆಸಿದ ವೈದ್ಯರು ಹೊಟ್ಟೆ ಹಾಗೂ ಎದೆ ಭಾಗದಲ್ಲಿ ಹೊಕ್ಕಿದ್ದ ಗುಂಡುಗಳನ್ನು ಹೊರತೆಗೆದಿದ್ದಾರೆ.
ಪ್ರಸ್ತುತ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖಲೀಲ್ ಅಹ್ಮದ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.

ಈ ಬಗ್ಗೆ ಕಲಘಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

ಆಸ್ತಿ ವಿವಾದ ಶೂಟೌಟ್ ಗೇ ಕಾರಣ ?

ಶನಿವಾರ ರಾತ್ರಿ ನಡೆದ ಶೂಟೌಟ್ಗೆ ಆಸ್ತಿ ವಿವಾದ ಕಾರಣವಾಗಿರಬಹುದು. ಖಲೀಲ್ ಅಹ್ಮದ್ ಶೇಖ ಮುಜಾವರ ಆಗಿರುವ ದರ್ಗಾವು ಮೂರು ಎಕರೆ ಜಮೀನಿನಲ್ಲಿದ್ದು ಈ ಜಮೀನು ಖಲೀಲ್ ಅಲ್ಲದೇ ಇವನ ಅಣ್ಣ ಸುಭಾನ್, ತಮ್ಮಂದಿರಾದ ನಿಸಾರ ಅಹ್ಮದ, ನಿಜಾಮುದ್ದೀನ( ಚಿಂಟೂ) ಹಾಗೂ ಇವರ ಚಿಕ್ಕಪ್ಪ ಗೌಸ್ ಮೊದೀನ್ ಎಂಬುವವರ ಹೆಸರಿನಲ್ಲಿದೆ.
ಈ ಮೂರು ಎಕರೆ ಜಮೀನಿಗಾಗಿ ಕಳೆದ ನಾಲ್ಕು ವರ್ಷದ ಹಿಂದೆ ಅಣ್ಣ ತಮ್ಮಂದಿರ ನಡುವೆ ಜಗಳವಾಗಿತ್ತು. ಮೂರು ತಿಂಗಳು ಹಿಂದೆ ಖಲೀಲ್ ಅಹ್ಮದ ದರ್ಗಾ ಬಿಟ್ಟು ಆಶ್ರಯ ಕಾಲೋನಿಯಲ್ಲಿ ಹೊಸ ಮನೆ ನಿರ್ಮಿಸಿಕೊಂಡು ವಾಸವಾಗಿದ್ದರು. ಹಿಂದೆ ಜಗಳವಾದಾಗ ತನಗೆ ಜಮೀನು ಬೇಡವೆಂದು ಅವರು ಹೇಳಿದ್ದರೆನ್ನಲಾಗಿದೆ. ಗ್ರಾಮದಲ್ಲಿಯೂ ಎಲ್ಲರೊಂದಿಗೆ ಹೊಂದಿಕೊಂಡು ಹೋಗುವ ಗುಣ ಅವರದಾಗಿತ್ತು ಯಾರ ಜತೆಯೂ ಅವರು ವೈಷ್ಯಮ್ಯ ಇರಲಿಲ್ಲ ಎನ್ನಲಾಗಿದೆ. ಒಟ್ಟಿನಲ್ಲಿ ಈ ಪ್ರಕರಣದ ಕೂಲಕುಂಶ ತನಿಖೆಯಾಗಿ ಸತ್ಯಾಸತ್ಯತತೇ ಹೊರ ಬೀಳಬೇಕಾಗಿದೆ.

ನಾಡ ಪಿಸ್ತೂಲ್ ಬಳಕೆ?
ಉಗ್ನಿಕೇರಿ ಶೂಟೌಟ್ನಲ್ಲಿ ನಾಡ ಪಿಸ್ತೂಲ್ ಬಳಕೆಯಾಗಿರುವ ಸಾಧ್ಯತೆ ಹೆಚ್ಚಾಗಿದೆ. ರೋಗಿಯ ಹೊಟ್ಟೆಯಿಂದ ಹೊರ ತೆಗೆಯಲಾದ ಎರಡು ಬುಲೆಟ್ಗಳು ನಾಡ ಪಿಸ್ತೂಲ್ನ ಬುಲೆಟ್ಗಳಾಗಿರುವ ಶಂಕೆ ಅಧಿಕವಾಗಿದೆ. ಈ ತರಹದ ಪಿಸ್ತೂಲ್ಗಳು ಸಾಮಾನ್ಯವಾಗಿ ಹಕ್ಕಿಗಳ ಇನ್ನಿತರ ಚಿಕ್ಕ ಪುಟ್ಟ ಬೇಟೆಗೆ ಬಳಸುವಂತಾಗಿರುತ್ತವೆ ಎಂದು ವೈದ್ಯರು ಹೇಳುತ್ತಾರೆ.

loading...

LEAVE A REPLY

Please enter your comment!
Please enter your name here