ಕಂದಾಚಾರಕ್ಕೆ ಕಡಿವಾಣ: ಪ್ರಬಲ ವಿರೋಧ

0
9
loading...

ಬೆಂಗಳೂರು, ನ.7- ರಾಜ್ಯ ಸರ್ಕಾರ

ಜಾರಿಗೊಳಿಸಲು ಮುಂದಾಗಿರುವ

ಮೂಢನಂಬಿಕೆಗಳ ಆಚರಣೆ ನಿಗ್ರಹ ಕಾಯ್ದೆಗೆ

ಭಾರೀ ಪ್ರತಿರೋಧ ವ್ಯಕ್ತವಾಗಿದೆ. ಕಾಯ್ದೆಯಲ್ಲಿನ

ಮೂಲ ಅಂಶಗಳನ್ನು ಕೆಜೆಪಿ ಮತ್ತು ಬಿಜೆಪಿ

ತೀವ್ರವಾಗಿ ವಿರೋಧಿಸಿವೆ.

ಕೆಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ

ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ

ಸದಾನಂದಗೌಡ ಅವರು ಬೆಂಗಳೂರಿನಲ್ಲಿಂದು

ಮಾತನಾಡಿ ಕಾಂಗ್ರೆಸ್ ಸರ್ಕಾರ ಜನರ

ಭಾವನೆಗಳ ವಿಷಂಂಂಂದಂನ್ಲಿ ಅತೀರೇಕವಾಗಿ

ನಡೆದುಕೊಳ್ಳುತ್ತಿದೆ ಎಂದು ಕಿಡಿಕಾರಿದ್ದಾರೆ.

ಇದರ ಬೆನ್ನಲ್ಲೇ ವಿವಿಧ ಸಂಘಟನೆಗಳು

ಪ್ರತಿಭಟನೆಗೆ ಕರೆ ನೀಡಿವೆ. ಕಾಯ್ದೆಯನ್ನು

ವಾಪಾಸ್ ಪಡೆಯಬೇಕು ಎಂಬ ಒತ್ತಾಯಗಳು

ಕೇಳಿ ಬಂದಿವೆ.

ಹುಚ್ಚಾಟ ಸಹಿಸಲು ಸಾಧ್ಯವಿಲ್ಲ ಬಿಎಸ್ವೈ:

ಕಳೆದ ಏಳು ದಿನಗಳಿಂದ ನಗರದ

ಮೌರ್ಯ ಹೋಟೆಲ್ ಬಳಿ ಶಾದಿ ಭಾಗ್ಯ

ಯೋಜನೆಯನ್ನು ಎಲ್ಲಾ ಸಮುದಾಯಗಳಿಗೆ

ವಿಸ್ತರಿಸಬೇಕು ಎಂದು ಒತ್ತಾಯಿಸಿ ಧರಣಿ

ನಡೆಸುತ್ತಿರುವ ಯಡಿಯೂರಪ್ಪ ಅದೇ ಸ್ಥಳದಲ್ಲಿ

ಸುದ್ದಿಗಾರರೊಂದಿಗೆ ಮಾತನಾಡಿ, ಮೂಢನಂಬಿಕೆ

ನಿಷೇಧ ಕಾಯ್ದೆ ವಿಚಾರದಲ್ಲಿ ಸರ್ಕಾರ ಇಲ್ಲಸಲ್ಲದ

ಅತಿರೇಕ, ಹುಚ್ಚಾಟ ಮಾಡುತ್ತಿದೆ. ಇದನ್ನು

ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಮಠಾಧೀಶರ ಪಾದಪೂಜೆ ಮಾಡಬಾರದು,

ಮನೆಯ ಮುಂದೆ ರಂಗೋಲಿ ಹಾಕಬಾರದು

ಎಂಬೆಲ್ಲಾ ಷಂರಂತಂಂಗಗಂಳನ್ನು ಕಾಯ್ದೆಯಲ್ಲಿ

ಅಳವಡಿಸಲಾಗಿದೆ. ಇದನ್ನೇಲ್ಲಾ ಹೇಳಲು

ಸಿದ್ದರಾಮಯ್ಯ ಯಾರು ಎಂದು ಪ್ರಶ್ನೆಸಿದರು.

ಬೇರೆ ಯಾವುದೇ ರಾಜ್ಯದಲ್ಲಿ ಇಲ್ಲದೆ ಇರುವ

ಕಾನೂನನ್ನು ಇಲ್ಲಿ ತರಲು ರಾಜ್ಯ ಸರ್ಕಾರ

ಮುಂದಾಗಿದೆ. ವಿನಾಶ ಕಾಲಕ್ಕೆ ವಿಪರೀತ ಬುದ್ದಿ

ಎನ್ನುವ ರೀತಿಯಲ್ಲಿ ಸರ್ಕಾರ ನಡೆದುಕೊಳ್ಳುತ್ತಿದೆ

ಎಂದು ವಾಗ್ದಾಳಿ ನಡೆಸಿದರು.

ಎಲ್ಲದಕ್ಕೂ ಒಂದು ಇತಿಮಿತಿ ಇದೆ,

ಲೆಕ್ಕಾಚಾರ ಇದೆ. ಅಧಿಕಾರ ನಮ್ಮ ಕೈಗೆ ಸಿಕ್ಕಿದೆ

ಎಂದು ಮನಬಂದಂತೆ ಮಾಡುವುದು ಸರಿಯಲ್ಲ

ಎಂದರು.

 

loading...

LEAVE A REPLY

Please enter your comment!
Please enter your name here