ಕಾಂಗ್ರೆಸ್ ಗಂಟು ಮೂಟೆಯನ್ನು ಕಟ್ಟಲಿದೆ : ಧರೆಣ್ಣವರ

0
23
loading...

ಕುಂದಗೋಳ : ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ಗ್ರಹ ಸಚಿವ ಸುಶೀಲಕುಮಾರ ಸಿಂಧೆ ಅಲ್ಪಸಂಖ್ಯಾಂತರ ಓಲೈಸುವ ಸಂಬಂಧವಾಗಿ ಮುಸ್ಲಿಂ ಮುಗ್ದ ಯುವಕರನ್ನು ಬಂಧಿಸಬಾರದು ಎಂದು ಹೇಳಿಕೆ ನೀಡುತ್ತಿರುವದು ಅವಹೇಳನಕಾರಿಯಾಗಿದೆ ಎಂದು ಉತ್ತರ ಕರ್ನಾಟಕ ಗೋರಕ್ಷಣ ಸಮಿತಿ ಸದಸ್ಯ ಮತ್ತು ಶ್ರೀರಾಮ ಸೇನಾ ಮುಖ್ಯಸ್ಥ ಮತ್ತು ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಗಂಗಾಧರ ಧರೆಣ್ಣವರ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗಂಟು ಮೂಟೆಯನ್ನು ಕಟ್ಟಲಿರುವ ಕಾಂಗ್ರೆಸ್ ಸರ್ಕಾರದ ಯುಪಿಎ ಪ್ರ್ರತಿನಿಧಿಗಳಿಗೆ ಭಯ ಹುಟ್ಟಿದೆ ಎಂದರು.

ಕೇಂದ್ರದಲ್ಲಿ ಅಧಿಕಾರದಲ್ಲಿ ಬರಲು ಅಗುವುದಿಲ್ಲ ಎನ್ನುವದು ಕಾಂಗ್ರೆಸ್ಗೆ ಖಚಿತವಾಗಿದೆ.

ಆದ್ದರಿಂದ ಜಾತ್ಯಾತೀತ ರಾಷ್ಟ್ತ್ರದಲ್ಲಿ ಹಿಂದೂ ಮುಸ್ಲಿಂ ವಿಭಜಿಸಿ ದೇಶದಲ್ಲಿ ಕೋಮು ಬೀಜ ಬಿತ್ತುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರಕ್ಕೂ ಮತಿಬ್ರಮಣೆ ಉಂಟಾಗಿದೆ. ಅದಕ್ಕಾಗಿ ಮುಸ್ಲಿಂ ಪರವಾಗಿರುವ ಶಾದಿ ಬಾಗ್ಯ ಯೊಜನೆಗೆ 50 ಸಾವಿರ ಪ್ರೌತ್ಸಾಹಧನ,ಹಜ್ ಯಾತ್ರಿಗಳ ಪ್ರವಾಸಕ್ಕೆ ಹೆಚ್ಚಿನ ಹಣಕಾಸಿನ ನೆರವು ಹಾಗೂ ಮತ್ತಿತರ ಅನೇಕ ಸೌಲಬ್ಯಗಳನ್ನು ಒದಗಿಸುವದರ ಮೂಲಕ ರಾಜ್ಯ ಸರ್ಕಾರವೇ ಕೋಮು ಭಾವನೆಯನ್ನು ಜನರಲ್ಲಿ ಮೂಡಿಸುತ್ತಿದೆ ಎಂದರು. ಅಲ್ಪ ಸಂಖ್ಯಾತರಿಗೆ ಅಷ್ಟೇ ಶಾದಿ ಬಾಗ್ಯ ಯೊಜನೆ ಜಾರಿ ಮಾಡಿರುವ ಕಾಂಗ್ರೆಸ ಸರ್ಕಾರ ಅಲ್ಪ ಸಂಖ್ಯಾತರಲ್ಲಿ ಬರುವ ಜೈನ್,ಕ್ರಶ್ಚಿನ,ಬೌದ್ ಧರ್ಮಗಳಿಗೆ ಏಕೆ ಈ ಶಾದಿ ಭಾಗ್ಯ ಯೊಜನೆಯಿಲ್ಲಾ ಎಂದು ಪ್ರಶ್ನಿಸಿದರು.ಕೇವಲ ಓಟಿಗಾಗಿ ಕಾಂಗ್ರೆಸ್ ಸರ್ಕಾರ ಜನರ ಕಣ್ಣಿಗೆ ಮಣ್ಣೆರಚಿ ಈ ರಾಜ್ಯ ಹಾಗೂ ದೇಶವನ್ನು ಲೂಟಿ ಹೊಡೆಯುತ್ತಿದೆ ಎಂದು ದೂರಿದರು. ಈ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರೋದಿ ನೀತಿಯನ್ನು ಖಂಡಿಸಿ ನವಂಬರ 8 ರಂದು ಕುಂದಗೋಳದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿರುವದಾಗಿ ತಿಳಿಸಿದರು.

ಶ್ರೀ ರಾಮ ಸೇನಾ ಮತ್ತು ಬಜರಂಗದಲದ ವಿರುಪಾಕ್ಷಗೌಡ ಹಿರೇಗೌಡ್ರ, ಬಾಲಚಂದ್ರ ಪಾಟೀಲ, ನಾಗರಾಜ ಬೂದಿಹಾಳ, ಚನ್ನಬಸವನಗೌಡ್ರ ಚಿಕ್ಕಿಗೌಡ್ರ,ಚಂದ್ರು ಮಳಲಿ, ನಾಗರಾಜ ಕುರಹಟ್ಟಿ, ರಮೆಶ ಕತ್ತಿ, ಬಸವರಾಜ ಕಮ್ಮಾರ ಮುಂತಾದವರು ಹಾಜರಿದ್ದರು.

loading...

LEAVE A REPLY

Please enter your comment!
Please enter your name here