ಮೋದಿ ರ್ಯಾಲಿಗೆ ಕಾರ್ಯಕರ್ತರು ಬೆಂಗಳೂರಿನತ್ತ ದೌಡು

0
6
loading...

ಗೋಕಾಕ: ನಾಳೆ ಭಾನುವಾರದಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ನರೇಂದ್ರ ಮೋದಿ ಯವರ ಭಾರತ ಗೆಲ್ಲಿಸಿ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಅರಭಾಂವಿ ವಿಧಾನಸಭಾ ಮತಕ್ಷೇತ್ರದಿಂದ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ಐದು ಸಾವಿರ ಕಾರ್ಯಕರ್ತರು ಶನಿವಾರ ರಂದು ಬೆಂಗಳೂರಿಗೆ ಪ್ರಯಾಣಿಸಿದರು.

ಶಕ್ತಿಶಾಲಿ ಭಾರತ ನಿರ್ಮಾಣಕ್ಕಾಗಿ ಬಿ.ಜೆ.ಪಿ. ಪ್ರಧಾನ ಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಅವರು ರಾಜ್ಯದ ಲಕ್ಷಾಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದು, ಈ ಸಮಾವೇಶದಲ್ಲಿ ಭಾಗಿಯಾಗಲು ಅರಭಾಂವಿ ಕ್ಷೇತ್ರದಿಂದ ಸುಮಾರು ಐದು ಸಾವಿರ ಬಿ.ಜೆ. ಪಿ. ಕಾರ್ಯಕರ್ತರು ಬೆಂಗಳೂರಿಗೆ ತೆರಳಿದರು. ಕಾರ್ಯಕರ್ತರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸುಮಾರು 300 ಕ್ರುಷರ ವಾಹನಗಳ ವ್ಯವಸ್ಥೆ ಮಾಡಿದ್ದಾರೆ. ಕಾಂಗ್ರೇಸ್ ಸರಕಾರದ ಕುಣಿಕೆಯಿಂದ ದೇಶವನ್ನು ಪಾರು ಮಾಡಲು ಬಿಜೆಪಿ ಯನ್ನು ಆಶೀರ್ವದಿಸಲು ನಮೋ ರ್ಯಾಲಿ ನಡೆಯಲಿದ್ದು, ದೇಶ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಜನತೆಯೊಂದಿಗೆ ಬಹಿರಂಗ ಸಂವಾದ, ಭ್ರಷ್ಟ – ಅದಕ್ಷ ಕೇಂದ್ರ ಯುಪಿಎ ಸರಕಾರದ ಬಚಾವಾಗಲು ಸೂಕ್ತ ಪರಿಹಾರ, ನಗರ ಗ್ರಾಮೀಣ ಜನತೆ ಯುವಕರು, ಮಹಿಳಿಯರು, ಕೃಷಿಕರು, ವೃತ್ತಿ ಪರರ ಆಶೋತ್ತರಗಳಿಗೆ ಸ್ಪಂದನೆ, ಬಿ.ಜೆ.ಪಿ.ಯ ಬೂತಮಟ್ಟದ ಕಾರ್ಯಕರ್ತರಿಗೆ ಗೆಲವು ಸಾಧಿಸುವ ಸಂದೇಶವನ್ನು ದೇಶದ ಆಶಾಕಿರಣ ನರೇಂದ್ರ ಮೋದಿಯವರು ನೀಡಲಿದ್ದಾರೆ.

loading...

LEAVE A REPLY

Please enter your comment!
Please enter your name here