ಒಂದೆ ದಿನ 8 ಮನೆಗಳಲ್ಲಿ ಕಳ್ಳತನ- ಅಪರಾಧಿಗಳು ನಾಪತ್ತೆ

0
17
loading...

ಮಹಾಲಿಂಗಪುರ 16; ಇಲ್ಲಿನ ಸಮೀಪದ ಸಮೀರವಾಡಿ ಪ್ಯಾಕ್ಟರಿಯ

ಎಸ್.ಓ.ಸಿ. ಕಾಲನೀಯಲ್ಲಿ ಡಿ. 15 ರಂದು ರಾತ್ರಿ ಒಟ್ಟು 8 ಮನೆಗಳ ಕಳ್ಳತನ

ನಡೆದ ಘಟನೆ ಸ್ಥಳೀಯ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಾರೋ ಕಳ್ಳರು ಡಿ. 15 ರಂದು ರಾತ್ರಿ 1-30 ಘಂ.ಸುಮಾರಿಗೆ

ಗೋದಾವರಿ ಶುಗರ್ಸ ಫ್ಯಾಕ್ಟರಿಗೆ ಸಂಬಂದಿಸಿದ ಎಸ್.ಓ.ಸಿ ಕಾಲೋನಿಯ

ಸುಮಾರು 8 ಮನೆಗಳ ಬಾಗಿಲ ಚಿಲಕದ ಕೊಂಡಿಯನ್ನು ಮುರಿದು ಮನೆಯಲ್ಲಿ

ಯಾರು ಇಲ್ಲದ ಸಮಯದಲ್ಲಿ ಟ್ರೇಜರಿಗಳನ್ನು ಮೀಟಿ ತೆಗೆದು ಅದರಲ್ಲಿದ್ದ ಒಟ್ಟು

13,40,000/- ರೂ ಕಿಮ್ಮಿತ್ತಿನ ಬೆಳ್ಳಿ-ಬಂಗಾರದ ಆಭರಣಗಳನ್ನು ಹಾಗೂ

ರೋಖ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಲ್ಲದೆ ಇನ್ನೂ ಕೆಲವು

ಮನೆಗಳ ಚಿಲಕದ ಕೊಂಡಿಯನ್ನು ಮುರಿದು ಪರಾರಿಯಾಗಿದ್ದಾರೆ ಎಂದು

ಪೊಲೀಸ ವರಿದಿಯಲ್ಲಿ ತಿಳಿಸಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಜಮಖಂಡಿಯ

ಡಿ.ವಾಯ್.ಎಸ್.ಪಿ ಜಿ.ಎಮ್.ಬೆಸೂರ ಮತ್ತು ಮುಧೋಳದ ಸಿ.ಪಿ.ಐ ಎಸ್.ಬಿ

ಗೀರೀಶ ಬೇಟಿ ನೀಡಿ ಬಾಗಲಕೋಟೆಯಿಂದ ಸ್ವಾನದಳ ಹಾಗೂ ಬೆರಳಚ್ಚು

ತಜ್ಞರಿಂದ ತನಿಖೆ ನಡೆಸಿದ್ದಾರೆ ಆದರೆ ಇಂಥ ಕೆಲಸವನ್ನು ಯಾರೋ

ಗೊತ್ತಿರುವವರೆ ಮಾಡಿರಬೇಕು, ಇಲ್ಲಿನ ಸುತ್ತಲಿನ ಠಾಣೆಗಳಿಗೆ ಮಾಹಿತಿ ಇಗಾಗಲೆ

ಕಳಿಸಿದೆ. ಆದಷ್ಟು ಬೇಗ ಈ ಕಳ್ಳರ ಜಾಲವನ್ನು ಭೇದಿಸುವುದಾಗಿ ಅವರು

ಹೇಳಿದರು. ಕಾಲನಿಜನರ ಹೇಳಿಕೆ: ಎಸ್.ಓ.ಸಿ ಕಾಲೋನಿಯ ಸುತ್ತಲು ಯಾವುದೆ

ರೀತಿಯ ಕಂಪೌಂಡ ಇಲ್ಲದ ಕಾರಣ ಮತ್ತು ಇಲ್ಲಿರು ಜನ ರಾತ್ರಿವೇಳೆ ತಮ್ಮ ಸಿಫ್ಟ

ಪ್ರಕಾರ ರಾತ್ರಿ ಕೆಲಸಕ್ಕಾಗಿ ಕಾರ್ಖಾನೆ ಹೊಗುವರಿಂದ ಮನೆಯಲ್ಲಿ ಯಾರು ಇಲ್ಲದ

ಸಮಯದಲ್ಲಿ ಇಂಥ ಘಟನೆಗಳು ನಡೆಯುತ್ತವೆ. ಹೀಗಾಗಿ ನಮ್ಮನ್ನು ನಾವು ಹೇಗೆ

ಕಾಯಬೇಕು ಮತ್ತು ಮನೆಯನ್ನು ಹೇಗೆ ಕಾಯಬೇಕು ಎಂಬುದು ನಮಗೆ

ತಿಳಿಯದಂತಾಗಿದೆ ಎಂಬುದು ಅವರ ನೋವು. ಕಳ್ಳತನವಾದ ಮನೆ ಮಾಲೀಕರು.

ಸರದೇಸಾಯಿ. ಗೋಡಗೆ. ಉಂದ್ರಿ, ಕೊಲಾರ, ನಾಗರೆ, ಉಂದ್ರಿ. ಗೋಟೆ ಇದರಲ್ಲಿ

ಕೆಲವರ ಮನೆ ಬೀಗ ಮುರಿದು ಇದ್ದದನ್ನು ಲಪಾಟಾಯಿಸಿದರೆ ಇನ್ನೂ ಕೆಲವರ

ಮನೆಲಿ ಎನೂ ಸಿಗದೆ ಇದ್ದ ಬದ್ದ ಸಾಮಾನುಗಳನ್ನು ಮನೆ ತುಂಗ ಚಲ್ಲಾಡಿ

ಹೊಗಿದ್ದಾರೆ

loading...

LEAVE A REPLY

Please enter your comment!
Please enter your name here