ಕಾಂಗ್ರೆಸ್ ಮುಖಂಡರ ತುರ್ತು ಸಭೆ

0
11
loading...

ನವದೆಹಲಿ, ಡಿ.9-ಇದೇ ತಿಂಗಳ 4ರಂದು ನಡೆದ

ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷ

ಹೀನಾಯ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ

ಆತ್ಮಾವಲೋಕನಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ಸೋನಿಯಾಗಾಂಧಿ

ವಿವಿಧ ನಾಯಕರ ತುರ್ತು ಸಭೆ ಕರೆದಿದ್ದಾರೆ.

ಇಂದು ಸಂಜೆ ದೆಹಲಿಯಲ್ಲಿರುವ ಪಕ್ಷದ

ಕಚೇರಿಯಲ್ಲಿ ಕೇಂದ್ರೀಯ ನಾಯಕರು ಹಾಗೂ

ಚುನಾವಣೆಗಳು ನಡೆದಿರುವ, ಮಧ್ಯಪ್ರದೇಶ, ರಾಜಸ್ಥಾನ,

ಛತ್ತೀಸ್ಘಡ ಹಾಗೂ ದೆಹಲಿ ರಾಜ್ಯಗಳ ಕಾಂಗ್ರೆಸ್ನ

ಹಿರಿಯ ನಾಯಕರನ್ನು ಸೋನಿಯಾಗಾಂಧಿ ಚರ್ಚೆಗೆ

ಆಹ್ವಾನಿಸಿದ್ದಾರೆ.

ಈ ಸಭೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್,

ಶರದ್ಪವಾರ್ ಮತ್ತಿತರರು ಪಾಲ್ಗೊಂಡು ಪಕ್ಷದ ಸೋಲಿನ

ಕುರಿತಂತೆ ವಿಮರ್ಶೆ ನಡೆಸಲಿದ್ದಾರೆ.

ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಘಡ, ದೆಹಲಿ

ರಾಜ್ಯಗಳ ಉಸ್ತುವಾರಿ ವಹಿಸಿಕೊಂಡಿದ್ದ ಪಕ್ಷದ ಪ್ರಧಾನ

ಕಾರ್ಯದರ್ಶಿಗಳು ಮತ್ತಿತರೆ ನಾಯಕರು ಚರ್ಚೆಯಲ್ಲಿ

ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪ್ರಧಾನಿ ಅಭಿನಂದನೆ: ಚುನಾವಣೆಯಲ್ಲಿ ಜಯ

ಗಳಿಸಿರುವ ಮಧ್ಯಪ್ರದೇಶ, ರಾಸ್ಥಾನ ಹಾಗೂ ಛತ್ತೀಸ್ಘಡ

ರಾಜ್ಯಗಳ ಮುಖ್ಯಮಂತ್ರಿ ಅಭ್ಯರ್ಥಿಗಳಾಗಿರುವ ಶಿವರಾಜ್

ಸಿಂಗ್ ಚವ್ಹಾಣ್, ವಸುಂಧರ ರಾಜೇ ಹಾಗೂ ರಮಣ್ಸಿಂಗ್

ಅವರನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರು

ಅಭಿನಂದಿಸಿದ್ದಾರೆ.

 

loading...

LEAVE A REPLY

Please enter your comment!
Please enter your name here