ಕಾರ್ತಿಕೋತ್ಸವ ಹಾಗೂ ಸಾಧಕರಿಗೆ ಸಾಧನಾ ಪುರಸ್ಕಾರ

0
13
loading...

ಘಟಪ್ರಭಾ: ಸಮೀಪದ ಶಿರಢಾಣ ಗ್ರಾಮದಲ್ಲಿ ದಿ7

ರಂದು ಶ್ರೀ ಹನುಮಾನ ಕಾರ್ತಿಕೋತ್ಸವದ ಅಂಗವಾಗಿ ಜೈ

ಬಲಭೀಮ ಜಾನಪದ ಸಣ್ಣಾಟ ಕಲಾಸಂಘದ ಉದ್ಘಾಟನೆ

ಹಾಗೂ ಸಾಧಕರಿಗೆ ಸಾಧನಾ ಪುರಸ್ಕಾರ ಸಮಾರಂಭ

ಆಯೋಜಿಸಲಾಗಿದೆ.

ಸಮಾರಂಭದ ದಿವ್ಯ ಸಾನಿದ್ಯವನ್ನು ಘಟಪ್ರಭಾದ

ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿಮಠ ಶ್ರೀ ಮಲ್ಲಕಾರ್ಜುನ

ಸ್ವಾಮಿಜಿಯವರು ವಹಿಸುವರು. ನೇತೃತ್ವವನ್ನು ಶಿರಢಾಣದ

ಗೀರೀಶ ಆಶ್ರಮದ ಶ್ರೀ ಕಲ್ಯಾಣೇಶ್ವರ ಮಹಾರಾಜರು

ವಹಿಸುವರು. ಜಿ.ಪಂ.ಸದಸ್ಯೆ ಶೋಭಾ ಸಿ.ಮದಕರಿ

ಕಾರ್ಯಕ್ರಮ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಗ್ರಾ.ಪಂ.

ಅಧ್ಯಕ್ಷ ಅಪ್ಪಣ್ಣಾ ಖಾತೆದಾರ ವಹಿಸುವರು. ಮುಖ್ಯ

ಅತಿಥಿಗಳಾಗಿ ತಾ.ಪ. ಸದಸ್ಯ ಶಿವನಗೌಡಾ ಪಾಟೀಲ,

ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕ್ತ್ರತಿ ಇಲಾಖೆ

ಬೆಳಗಾವಿ, ಗ್ರಾ.ಪಂ. ಪಿಡಿಓ ಸುನೀಲ ಮದ್ದೀನ್ ಹಾಗೂ

ರಾಷ್ಟ್ತ್ರೀಯ ಯುವ ಪ್ರಶಸ್ತಿ ವಿಜೇತ ಭರತ ಕಲಾಚಂದ್ರ

ಆಗಮಿಸುವರು. ಸ್ಥಳೀಯ ಗ್ರಾ. ಪಂ. ಸದಸ್ಯರು

ಉಪಸ್ಥಿತರಿರುವರು.

ಸಾಧನಾ ಪ್ರಶಸ್ತಿಗೆ ಆಯ್ಕೆಗೊಂಡವರು: ಚಿಕ್ಕೌಡಿ

ತಾಲೂಕಿನ ಡೋಣವಾಡ ಗ್ರಾಮದ ಕಲ್ಲಪ್ಪಾ. ಬಾ.ಭಜಂತ್ರಿ

ಅವರಿಗೆ (ಶಹನಾಯಿ ಶಿರೋಮನಿ ಪ್ರಶಸ್ತಿ), ಹುಕ್ಕೇರಿ

ತಾಲೂಕಿನ ಮದಿಹಳ್ಳಿಯ ವೀರೂಪಾಕ್ಷಿ.ಯ. ಬುಗಡಕಟ್ಟಿ

(ಚರ್ಮವಾದ ಚತುರ ಪ್ರಶಸ್ತಿ), ಸವದತ್ತಿ ತಾಲೂಕಿನ

ಕುರುಬಗಟ್ಟಿಯ ಬಾಲಪ್ಪಾ.ರಾ.ಗಸ್ತಿ (ಸಣ್ಣಾಟ ಜಾನಪದ

ಕಲಾಶ್ರೀ ಪ್ರಶಸ್ತಿ), ರಾಮದುರ್ಗ ತಾಲೂಕಿನ ಸಾಲಹಳ್ಳಿಯ

ಫಕೀರವ್ವಾ.ಯ. ಮ್ಯಾಗಡಿಮನಿ ಅವರಿಗೆ (ಸಣ್ಣಾಟ

ಸಿರಿಗಂಧ ಪ್ರಶಸ್ತಿ), ಗೋಕಾಕದ ಮಾಲಾ ಭೋವಿ ಅವರಿಗೆ

(ಜಾನಪದ ಕಲಾಮಣಿ ಪ್ರಶಸ್ತಿಗೆ ಭಾಜನವಾಗಿದ್ದಾರೆ. ದಿ

7ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಯನ್ನು ನೀಡಿ

ಗೌರವಿಸಲಾಗುವುದೆಂದು ಸಂಘದವರು ಪ್ರಕಟಣೆಯಲ್ಲಿ

ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here