ಗೆಲುವಿಗೆ ತಣ್ಣೀರು ಎರಚಿದ ಪ್ಲಿಸಿಸ್ ಎ,ಬಿ ಆಟ

0
10
loading...

ಜೋಹಾನ್ಸ್ಬರ್ಗ, 23: ವಿಕೆಟ್ ಕೀಪರ್ ಬ್ಯಾಟ್ಸಮನ್ ಎಬಿ ಡಿವಿಲಿಂುುರ್ಸ ಮತ್ತು ಪಾಪ್ ಡು ಪ್ಲೆಸಿಸ್ ದಾಖಲಿಸಿದ ಆಕರ್ಷಕ ಶತಕದ ನೆರವಿನಿಂದ ದಕ್ಷಿಣ ಆಫ್ರಿಕ ತಂಡ ಭಾರತ ವಿರುದ್ಧದ ಮೊದಲ ಟೆಸ್ಟ್ನ್ನು ಡ್ರಾಗೊಳಿಸುಲ್ಲಿ ಂುುಶಸ್ವಿಂುುಾಗಿದೆ.

ಪಂದ್ಯದ ಐದನೆ ಹಾಗೂ ಅಂತಿಮ ದಿನವಾಗಿರುವ ಇಂದು ಎರಡನೆ ಇನಿಂಗ್ಸ್ನಲ್ಲಿ ಗೆಲ್ಲಲು 458 ರನ್ ಮಾಡಬೇಕಿದ್ದ ಆಫ್ರಿಕಾ ನಿಗದಿತ 136 ಓವರ್ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 450 ರನ್ ಗಳಿಸಿ ಸೋಲಿನ ದವಡೆಯಿಂದ ಪಾರಾಯಿತು. ಸೋಲಿನ ಭೀತಿಗೆ ಸಿಲುಕಿದ್ದ ತಂಡವನ್ನು ಪ್ಲೆಸಿಸ್ 134 ರನ್(309ಎ, 15ಬೌ) ಮತ್ತು ಡಿ ವಿಲಿಂುುರ್ಸ 103 ರನ್(168ಎ, 12ಬೌ) ಗಳಿಸಿ ಪಾರು ಮಾಡಿದರು.

ನಾಲ್ಕನೆ ದಿನದಾಟದಂತ್ಯಕ್ಕೆ 45 ಓವರ್ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 138 ರನ್ ಗಳಿಸಿದ್ದ ದಕ್ಷಿಣ ಆಫ್ರಿಕ ತಂಡ ಇಂದು ಬ್ಯಾಟಿಂಗ್ ಮುಂದುವರಿಸಿ 59 ರನ್ ಸೇರಿಸುವಷ್ಟರಲ್ಲಿ ಇನ್ನೆರಡು ವಿಕೆಟ್ ಕಳೆದುಕೊಂಡಿತ್ತು.

ಶನಿವಾರ ದಿನದಾಟದಂತ್ಯಕ್ಕೆ 76 ರನ್ ಗಳಿಸಿ ಅಜೇಂುುರಾಗಿ ಉಳಿದಿದ್ದ ಅಲ್ವಿರೋ ಪೀಟರ್ಸನ್ ಈ ಮೊತ್ತಕ್ಕೆ ಒಂದು ರನ್ನ್ನು ಸೇರಿಸದೆ ಮುಹಮ್ಮದ್ ಶಮಿ ಎಸೆತದಲ್ಲಿ ಬೌಲ್ಡ ಆಗಿ ಪೆವಿಲಿಂುುನ್ ಸೇರಿದರು. ಆದರೆ ಇವರೊಂದಿಗೆ ಓಟಾಗದೆ ಉಳಿದಿದ್ದ ಎಫ್ ಡು ಪ್ಲೆಸಿಸ್ ಭಾರತದ ದಾಳಿಂುುನ್ನು ಪುಡಿ ಪುಡಿ ಮಾಡಿದರು. ಪ್ಲೆಸಿಸ್ ಮತ್ತು ಜಾಕ್ ಕಾಲಿಸ್ ನಾಲ್ಕನೆ ವಿಕೆಟ್ಗೆ 54 ರನ್ ಸೇರಿಸಿ ತಂಡವನ್ನು ಆದರಿಸಿದರು.

60.4ನೆ ಓವರ್ನಲ್ಲಿ ಜಾಕ್ ಕಾಲಿಸ್ರನ್ನು ಝಹೀರ್ ಖಾನ್ ಎಲ್ಬಿಡಬ್ಲು ಬಲೆಗೆ ಕೆಡವಿದರು. 37 ಎಸೆತಗಳಲ್ಲಿ 6 ಬೌಂಡರಿಗಳ ನೆರವಿನಲ್ಲಿ ಕಾಲಿಸ್ 34 ರನ್ ಗಳಿಸಿ ನಿರ್ಗಮಿಸಿದರು. ಪ್ಲೆಸಿಸ್-ವಿಲಿಂುುರ್ಸ ಹೋರಾಟ: ಕಾಲಿಸ್ ಓಟಾದಾಗ ಟೀಮ್ ಇಂಡಿಂುುಾದ ಆಟಗಾರರಿಗೆ ಸಂತಸ ಉಂಟಾಗಿತ್ತು. ಗೆಲುವಿನ ಆಸೆ ಚಿಗುರಿತ್ತು. ಆದರೆ ಟೀಮ್ ಇಂಡಿಂುುಾದ ಬೌಲರ್ಗಳನ್ನು ಚೆನ್ನಾಗಿ ದಂಡಿಸಿದ ಪ್ಲೆಸಿಸ್ ಮತ್ತು ಎಬಿ ಡಿವಿಲಿಂುುರ್ಸ ಜೋಡಿ ಶತಕ ಸಿಡಿಸುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಂುು್ಯುವ ಪ್ರಂುುತ್ನ ನಡೆಸಿದರು. 62.3 ಓವರ್ಗಳನ್ನು ನಿಬಾಯಿಸಿದ ಈ ಜೋಡಿ ಐದನೆ ವಿಕೆಟ್ಗೆ 205 ರನ್ ದಾಖಲಿಸಿ ಭಾರತದ ಗೆಲುವಿನ ಆಸೆಂುುನ್ನು ನುಚ್ಚುನೂರು ಮಾಡಿದರು.

112.3ನೆ ಓವರ್ನಲ್ಲಿ ಝಹೀರ್ ಖಾನ್ ಓವರ್ನಲ್ಲಿ 3 ರನ್ ಗಳಿಸುವ ಮೂಲಕ ಪ್ಲೆಸಿಸ್ ಶತಕ ತಲುಪಿದರು. 252 ಎಸೆತಗಳಲ್ಲಿ 12 ಬೌಂಡರಿಗಳ ನೆರವಿನಲ್ಲಿ ಅವರ 3ನೆ ಶತಕ ದಾಖಲಾಗಿತ್ತು. 120.3ನೆ ಓವರ್ನಲ್ಲಿ ಖಾನ್ ಎಸೆತದಲ್ಲಿ ಒಂದು ರನ್ ಗಳಿಸಿ ಎಬಿ ಡಿವಿಲಿಂುುರ್ಸ 18ನೆ ಶತಕ ಪೂರೈಸಿದರು. 162 ಎಸೆತಗಳಲ್ಲಿ 12 ಬೌಂಡರಿಗಳ ಸಹಾಂುುದಿಂದ ಡಿ ವಿಲಿಂುುರ್ಸ ಶತಕ ಪೂರ್ಣಗೊಂಡಿತು.

ಇಶಾಂತ್ ಶರ್ಮರ 124ನೆ ಓವರ್ನ ಮೊದಲ ಎಸೆತದಲ್ಲಿ ಡಿ ವಿಲಿಂುುರ್ಸ ಬೌಲ್ಡ ಆಗುವುದರೊಂದಿಗೆ ಭಾರತಕ್ಕೆ ತಡವಾಗಿ ಂುುಶಸ್ಸು ಸಿಕ್ಕಿತು. ಡುಮಿನಿ(5) ಬೇಗನೆ ಓಟಾದರು. ಬಂಡೆಂುುಂತೆ ನಿಂತಿದ್ದ ಪ್ಲೆಸಿಸ್ 132.5ನೆ ಓವರ್ನಲ್ಲಿ ರನೌಟಾದರು. ಆಗ ಮತ್ತೆ ಭಾರತ ಗೆಲುವಿಗಾಗಿ ಹೋರಾಟ ನಡೆಸಿದರೆ, ದಕ್ಷಿಣ ಆಫ್ರಿಕದ ಆಟಗಾರರು ಸೋಲು ತಪ್ಪಿಸಲು ಹೋರಾಟ ನಡೆಸಿದರು. ಅಂತಿಮವಾಗಿ ಪಿಲ್ಯಾಂಡರ್ ಓಟಾಗದೆ 25 ಮತ್ತು ಡೇಲ್ ಸ್ಟೇಂುು್ನಾ 6 ರನ್ ಗಳಿಸಿ ತಂಡದ ಸೋಲನ್ನು ತಪ್ಪಿಸಿದರು. ಪಂದ್ಯ ರೋಚಕ ಡ್ರಾದಲ್ಲಿ ಅಂತ್ಯಗೊಂಡಿತು. ಭಾರತದ ಪರ ಶಮಿ 107ಕ್ಕೆ 3, ಝಹೀರ್ ಖಾನ್ ಮತ್ತು ಇಶಾಂತ್ ಶರ್ಮ ತಲಾ 1 ವಿಕೆಟ್ ಪಡೆದರು.

ಸ್ಕೌರ್ ವಿವರ

ಭಾರತ ಪ್ರಥಮ ಇನಿಂಗ್ಸ್: 280

ದಕ್ಷಿಣ ಆಫ್ರಿಕ ಪ್ರಥಮ ಇನಿಂಗ್ಸ್: 75.3 ಓವರ್ಗಳಲ್ಲಿ 244.

ಭಾರತ ದ್ವಿತೀಂುು ಇನಿಂಗ್ಸ್: 120.4 ಓವರ್ಗಳಲ್ಲಿ 421

ದಕ್ಷಿಣ ಆಫ್ರಿಕ ದ್ವಿತೀಂುು ಇನಿಂಗ್ಸ್ 136 ಓವರ್ಗಳಲ್ಲಿ 7 ವಿಕೆಟ್ಗೆ 450

ಅಲ್ವಿರೊ ಪೀಟರ್ಸನ್ ಬಿ ಶಮಿ 76, ಗ್ರೇಮ್ಸ್ಮಿತ್ ರನೌಟ್ 44, ಅಮ್ಲ ಬಿ ಶಮಿ 4, ಪ್ಲೆಸಿಸ್ ರನೌಟ್ 134, ಕಾಲಿಸ್ ಎಲ್ಬಿಡಬ್ಲೂ ಬಿ ಖಾನ್ 34, ಎಬಿ ಡಿ ವಿಲಿಂುುರ್ಸ ಬಿ ಇಶಾಂತ್ ಶರ್ಮ 103, ಡುಮಿನಿ ಬಿ ಶಮಿ 5, , ಪಿಲ್ಯಾಂಡರ್ ಓಟಾಗದೆ 25, ಸ್ಟೇಂುು್ನಾ ಓಟಾಗದೆ 6, ಇತರೆ 19. ವಿಕೆಟ್ಪತನ: 1-108, 2-118, 3-143, 4-197, 5-402, 6-407, 7-442.

ಬೌಲಿಂಗ್:  ಝಹೀರ್ಖಾನ್ 34-1-135-1,ಇಶಾಂತ್ 29-4-91-1ಮುಹಮ್ಮದ್ ಶಮಿ 28-5-107-3, ಅಶ್ವಿನ್ 36-5-83-0, ಮುರಳಿ ವಿಜಂುು್ 1-0-3-0, ದೋನಿ 2-0-4-0, ಕೊಹ್ಲಿ 6-0-18-0.

 

ಪಂದ್ಯಶ್ರೇಷ್ಠ: ವಿರಾಟ್ ಕೊಹ್ಲಿ.

ಝಹೀರ್ 300 ವಿಕೆಟ್

ಜೋಹಾನ್ಸ್ಬರ್ಗ, ಡಿ.22: ಭಾರತದ ವೇಗದ ಬೌಲರ್ ಜಹೀರ್ ಖಾನ್ ಇಂದು ದಕ್ಷಿಣ ಆಫ್ರಿಕ ವಿರುದ್ಧ ಮೊದಲ ಟೆಸ್ಟ್ನ ಅಂತಿಮ ದಿನ ಜಾಕ್ ಕಾಲಿಸ್ ವಿಕೆಟ್ ಉಡಾಯಿಸುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 300 ವಿಕೆಟ್ ಪಡೆದ ಭಾರತದ ನಾಲ್ಕನೆ ಬೌಲರ್ ಎನಿಸಿಕೊಂಡರು.

ಭಾರತದ ಬೌಲರ್ಗಳಾದ ಕಪಿಲ್ ದೇವ್, ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್ ಈ ಹಿಂದೆ 300 ವಿಕೆಟ್ ಪಡೆದ ಸಾಧನೆ ಮಾಡಿದ್ದರು. 35 ಹೆಂುುದ ಝಹೀರ್ ಖಾನ್ ತನ್ನ 89ನೆ ಟೆಸ್ಟ್ನಲ್ಲಿ ಇಂದು ದಕ್ಷಿಣ ಆಫ್ರಿಕದ ಆಲ್ರೌಂಡರ್ ಜಾಕ್ ಕಾಲಿಸ್(44)ರನ್ನು 60.4ನೆ ಓವರ್ನಲ್ಲಿ ಎಲ್ಬಿಡಬ್ಲು ಬಲೆಗೆ ಬೀಳಿಸಿ ತಾನು ಟೆಸ್ಟ್ ಕ್ರಿಕೆಟ್ನಲ್ಲಿ ಸಂಪಾದಿಸಿದ ವಿಕೆಟ್ಗಳ ಸಂಖ್ಯೆಂುುನ್ನು 300ಕ್ಕೆ ಏರಿಸಿದರು.

ಪಿಟ್ನೆಸ್ ಸಮಸ್ಯೆಯಿಂದಾಗಿ ಒಂದು ವರ್ಷದ ಬಳಿಕ ಟೆಸ್ಟ್ ಕ್ರಿಕೆಟ್ಗೆ ಮರಳಿದ್ದ ಝಹೀರ್ ಖಾನ್ ಮೊದಲ ಟೆಸ್ಟ್ನ ಮೊದಲ ಇನಿಂಗ್ಸ್ನಲ್ಲಿ 88ಕ್ಕೆ 4 ವಿಕೆಟ್ ಪಡೆದು ವಿಕೆಟ್ಗಳ ಸಂಖ್ಯೆಂುುನ್ನು 299ಕ್ಕೆ ಏರಿಸಿದ್ದರು.

2000, ನ.10ರಿಂದ 13ರ ತನಕ ಢಾಕಾದಲ್ಲಿ ನಡೆದ ಬಾಂಗ್ಲಾ ವಿರುದ್ಧದ ಟೆಸ್ಟ್ನ ಲ್ಲಿ ಆಡುವ ಮೂಲಕ ಝಹೀರ್ ಖಾನ್ ಟೆಸ್ಟ್ ಕ್ರಿಕೆಟ್ ಪ್ರವೇಶಿಸಿದ್ದರು. ಮೊದಲ ಟೆಸ್ಟ್ನಲ್ಲಿ 69ಕ್ಕೆ 3 ವಿಕೆಟ್ ಪಡೆದಿದ್ದರು. ಟೆಸ್ಟ್ನಲ್ಲಿ ಅವರ ಅತ್ಯುತ್ತಮ ಪ್ರದರ್ಶನ 149ಕ್ಕೆ 10 ವಿಕೆಟ್. 200 ಏಕದಿನ ಪಂದ್ಯಗಳನ್ನಾಡಿರುವ ಝಹೀರ್ ಖಾನ್ 282 ವಿಕೆಟ್ ಪಡೆದಿದ್ದಾರೆ.17 ಟ್ವೆಂಟಿ -20 ಪಂದ್ಯಗಳಲ್ಲಿ 17 ವಿಕೆಟ್ ಮತ್ತು 164 ಪ್ರಥಮ ದಜೆೆರ್ ಕ್ರಿಕೆಟ್ ಪಂದ್ಯಗಳಲ್ಲಿ 653 ವಿಕೆಟ್ ತನ್ನ ಖಾತೆಗೆ ಸೇರಿಸಿಕೊಂಡಿದ್ದಾರೆ.

300ಕ್ಕಿಂತ ಹೆಚ್ಚು ವಿಕೆಟ್ ಪಡೆದ ಭಾರತದ ಬೌಲರ್ಗಳು

ಅನಿಲ ಕುಂಬ್ಳೆ -619

ಕಪಿಲ್ ದೇವ್ – 434

ರ್ಹಜನ್ ಸಿಂಗ್-413

ಝಹೀರ್ ಖಾನ್-300

ನಾಲ್ಕನೇಯವರಾಗಿ ಜಹೀರ್ ಖಾನ್ ಅವರು ಇವರ ಸಾಲಿನಲ್ಲಿ ಸೇರಿದ್ದಾರೆ.

loading...

LEAVE A REPLY

Please enter your comment!
Please enter your name here