ಜಾತಿಗಣತಿಯಲ್ಲಿ ಗಾಣಿಗರು ಗಾಣಿಗ ಎಂದು ಬರೆಸಲು ಮನವಿ

0
66
loading...

ಹುಬ್ಬಳ್ಳಿ.ಡಿ.24 :ರಾಜ್ಯ ಸರಕಾರವು ಮುಂಬರುವ ದಿನಗಳಲ್ಲಿ ನಡೆಸಲಿರುವ ಜಾತಿಗಣತಿಯಲ್ಲಿ ರಾಜ್ಯದ ಎಲ್ಲ ಗಾಣಿಗರು ತಮ್ಮ ಜಾತಿ ಕಾಲಂನಲ್ಲಿ ಶಿ ಗಾಣಿಗಷಿ ಎಂದು ನಮೂದಿಸಬೇಕು. ಆರ್ಥಿಕವಾಗಿ ತುಂಬಾ ಹಿಂದುಳಿದ ಗಾಣಿಗ ಸಮಾಜ ರಾಜಕೀಯವಾಗಿ ಶೈಕ್ಷಣಿಕವಾಗಿ, ಇನ್ನುಳಿದ ಸರಕಾರದ ಸೌಲಬ್ಯ ಪಡೆಯಲು, ಹಕ್ಕು ಪಡೆಯಲು ಸಹಕಾರಿಯಾಗಲಿದ್ದು, ಗಾಣಿಗ ಸಮಾಜದ ಪ್ರತಿಯೊಬ್ಬ ಪದಾಧಿಕಾರಿಗಳು ಈ ನಿಟ್ಟಿನಲ್ಲಿ ಗಮನಹರಿಸಬೇಕು ಎಂದು ಅಖಿಲ ಭಾರತ ಗಾಣಿಗ ಸಮಾಜದ ಗೌರವಾಧ್ಯಕ್ಷ ಜಿ.ಎಸ್.ಛಬ್ಬಿ ತಿಳಿಸಿದರು.
ಅವರು ಹುಬ್ಬಳ್ಳಿಯ ರಾಧಾಕೃಷ್ಣ ನಗರದ ಗಾಣಿಗ ಸಮಾಜದ ಕೇಂದ್ರ ಕಚೇರಿಯಲ್ಲಿ ಜರುಗಿದ ಗಾಣಿಗ ಸಮಾಜದ ರಾಜ್ಯ ಕಾರ್ಯಕಾರಿಣಿಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ರಾಜ್ಯದ ಎಲ್ಲ ಪ್ರವೇಶಗಳಲ್ಲಿ ಗಾಣಿಗರು ವಾಸಿಸುತ್ತಿದ್ದ. ಸರಕಾರ ನಡೆಸುವ ಜಾತಿ ಗಣತಿಯಿಂದ ಗಾಣಿಗ ಜನಸಂಖ್ಯೆ ತಿಳಿಯಲು ಈ ಸಮೀಕ್ಷೆ ಸಹಕಾರಿಯಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯ ಕಾರ್ಯಕಾರಿಸಮಿತಿ ಅಧ್ಯಕ್ಷ ಅಮರಗುಂಡಪ್ಪ ಮೇಲೆ ಮಾತನಾಡಿ ಕೇಂದ್ರ ಸಮಿತಿಯ ಎಲ್ಲ ಪದಾಧಿಕಾರಿಗಳು ರಾಜ್ಯದ ಎಲ್ಲ ಜಿಲ್ಲೆ, ತಾಲೂಕುಗಳಿಗೆ ಬೇಟಿ ನೀಡಿ ಯಾವ ಜಿಲ್ಲೆ ತಾಲೂಕುಗಳಲ್ಲಿ ಸಮಿತಿಗಳ ರಚನೆಯಾಗಿಲ್ಲವೋ. ಅಂತಹ ಜಿಲ್ಲೆ, ತಾಲೂಕುಗಳಿಗೆ ಬೇಟಿ ನೀಡಿ ಸಮಿತಿ ರಚಿಸಲು ಕ್ರಮ ಕೈಗೂಳ್ಳಬೇಕು ಅಲ್ಲದೆ ಕೇಂದ್ರ ಸಮಿತಿಗೆ ಸದಸ್ಯರನ್ನಾಗಿ ಮಾಡಲು ಸದಸ್ಯತ್ವ ಅಭಿಯಾನ ಆರಂಭಿಸಬೇಕು, ಅಲ್ಲದೆ ಪೆಬ್ರುವರಿ 2014ರಲ್ಲಿ ಬೀಜಾಪೂರದಲ್ಲಿ ಜರುಗಲಿರುವ ರಾಜ್ಯಮಟ್ಟದ ಬ್ರಹತ ಗಾಣಿಗ ಸಮಾಜದ ಸಮಾವೇಶಕ್ಕೆ ಪ್ರತಿಯೂಬ್ಬ ಗಾಣಿಗರು ಪಾಲ್ಗೊಳ್ಳುವಂತೆ ವ್ಯಾಪಕ ಪ್ರಚಾರ ನಡೆಸಬೇಕು ಎಂದರು.
ಮಾಲತೇಶ ಜಿಗಳೂರ, ಅಶೋಕ ನವಲಗುಂದ, ಜಿ.ಆರ್ ಪಾಟೀಲ, ಉಮೇಶ ಗಾಣಿಗೇರ, ಜಿ.ಡಿ.ಸೊರಬೂರ, ಶಿವಪುತ್ರಪ್ಪ ಕಣಗಿ, ಈರಣ್ಣ ಗಾಣಿಗೇರ, ಪಿ.ಎಂ.ತಟ್ಟಿಮನಿ, ಎಲ್.ಆಯ್. ಲಕ್ಕಮ್ಮನವರ ಸಂತೋಷಕುಮಾರ ಹುಣಸ್ಯಾಳ, ಸಿ.ಕೆ. ಪಾಟೀಲ, ನಿಂಗಪ್ಪ ಗೋಡಿ, ಶರಣಪ್ಪ ನಾಗೋಜಿ ಸೇರಿದಂತೆ ಕೇಂದ್ರ ಸಮಿತವ ಅನೇಕರ ಹಾಜರಿದ್ದರು ಆರಂಭದಲ್ಲಿ ಪ್ರಧಾನ ಕ್ಯಾರದರ್ಶಿ ಎಸ್.ಪಿ.ಸಿಂದಗಿ ಸ್ಷಾಗತಿಸಿದರು ತಿಪ್ಪಣ್ಣ ಮಜ್ಜಗಿ ನಿರೂಪಿಸಿದರು, ಚಂದನ ಸವದಿ ವಂದಿಸಿದರು.

loading...

LEAVE A REPLY

Please enter your comment!
Please enter your name here