ನಾಯಕ ಜನಾಂಗಕ್ಕೆ ಮೀಸಲಾತಿ ಕಲ್ಪಿಸುವಂತೆ ಮನವಿ

0
21
loading...

ೆಂಗಳೂರು, 20- ತಲಕಾಡು ನಿರ್ಮಿಸಿದ ತಲ ಮತ್ತು ಕಾಡು ಅವರನ್ನು

ಡಕಾಯಿತರು, ರಾಕ್ಷಸರು ಎಂದು ಅವಹೇಳನಕಾರಿಯಾಗಿ ಚಿತ್ರಿಸಿರುವವರು ಈ ಕೂಡಲೇ

ಕ್ಷಮೆ ಯಾಚಿಸದಿದ್ದರೆ ಜಾತಿ ನಿಂದನೆ ಪ್ರಕರಣ ದಾಖಲಿಸುವುದಾಗಿ ವಾಲ್ಮೀಕಿ ನಾಯಕ

ಕ್ಷೇಮಾಭಿವೃದ್ದಿ ಸಂಘ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀದೇವಿ ಸ್ವಾಮೀಜಿ ಅವರು ಅಂದಿನ ಕಾಲದಲ್ಲಿ

ತಲಕಾಡನ್ನು ನಿರ್ಮಿಸಿದ್ದ ತಲ ಮತ್ತು ಕಾಡು ಈ ಇಬ್ಬರನ್ನು ರಾಕ್ಷಸರು, ಡಕಾಯಿತರು

ಎಂದೆಲ್ಲ ಖಾಸಗಿ ವಾಹಿನಿಗಳಲ್ಲಿ ಚಿತ್ರಿಸಲಾಗಿತ್ತು. ಇದರ ವಿರುದ್ಧ ಪ್ರತಿಭಟನೆ ನಡೆಸುವುದಾಗಿ

ಎಚ್ಚರಿಸಿದರು.

ನಾಯಕ ಜನಾಂಗಕ್ಕೆ ಮೀಸಲಾತಿ ಕಲ್ಪಿಸುವಂತೆ ಮನವಿ ಮಾಡಿದ ಅವರು,

ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಮೀಸಲಾತಿ ಕಲ್ಪಿಸಲು

ಮುಂದಾಗಿದ್ದರು. ಆದರೆ, ನಂತರ ಅದನ್ನು ಜಾರಿಗೆ ತರಲಿಲ್ಲ. ಅಹಿಂದ ನಾಯಕರಾಗಿರುವ

ಸಿದ್ದರಾಮಯ್ಯನವರು 7.5ರಷ್ಟು ಜನಸಂಖ್ಯೆ ಹೊಂದಿರುವ ನಾಯಕ ಜನಾಂಗಕ್ಕೆ ಶೈಕ್ಷಣಿಕ

ಮೀಸಲಾತಿ ಒದಗಿಸಲು ಕ್ರಮ ಕೈಗೊಳ್ಳಲಿ ಎಂದು ಮನವಿ ಮಾಡಿದರು.

ನಾಯಕ ಜನಾಂಗಕ್ಕೆ ಬಜೆಟ್ನಲ್ಲಿ ಇಂತಿಷ್ಟು ಹಣ ಮೀಸಲಿರಿಸಲಾಗಿದೆ ಎಂದು

ಹೇಳಲಾಗುತ್ತಿದೆ. ಆದರೆ, ಇದು ಯಾವ ರೀತಿ ಜನಾಂಗದ ಅಭಿವೃದ್ದಿಗೆ ಬಳಸಲಾಗಿದೆ

ಎಂಬುದು ತಿಳಿದುಬಂದಿಲ್ಲ. ನಮ್ಮಲ್ಲಿರುವ ಮಕ್ಕಳಿಗೆ ಶೈಕ್ಷಣಿಕ ಮೀಸಲಾತಿ ನೀಡಿ

ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸುವಂತೆ ಕೋರಿದರು.ನಾಯಕ ಸಮುದಾಯ

ರಾಜ್ಯಾದ್ಯಂತ 77 ಕೋಟೆಗಳನ್ನು ನಿರ್ಮಿಸಿ ಆಡಳಿತ ಮಾಡಿದ ಕೀರ್ತಿ ಹೊಂದಿದೆ.

ಶ್ರೀಮಂತ ಸಾಂಸ್ಕ್ಕತಿಕ ಪರಂಪರೆ ಹೊಂದಿದ ಜನಾಂಗವನ್ನು ಪೂರ್ವಾಗ್ರಹ ಪೀಡಿತರಾಗಿ

ನಿಂದನೆ ಮಾಡುತ್ತಿರುವುದು ಸರಿಯಲ್ಲ ಎಂದರು.

loading...

LEAVE A REPLY

Please enter your comment!
Please enter your name here