ಪ್ರಬಂಧ ಸ್ಪರ್ಧೆ: ಬಹುಮಾನ ವಿತರಣೆ

0
206
loading...

ಖಾನಾಪುರ: ಪಟ್ಟಣದ ಸರಕಾರಿ ಶಾಸಕರ ಮಾದರಿ ಶಾಲೆಯ ವಿದ್ಯಾರ್ಥಿಗಳಿಗಾಗಿ ಶಾಲೆಯ ನಿವೃತ್ತ ಪ್ರಧಾನ ಗುರುಗಳಾದ ದಿ.ಆರ್.ಎಸ್ ಸವದಿಯವರ ಸ್ಮರಣಾರ್ಥ ಇತ್ತೀಚೆಗೆ ವಿವಿಧ ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

 ಶಾಲೆಯ ಶತಮಾನೋತ್ಸವ ಸಂದರ್ಭದಲ್ಲಿ 6ನೇ ತರಗತಿಗಳ ವಿದ್ಯಾರ್ಥಿಗಳಿಗೆ ಸಂಗೊಳ್ಳಿ ರಾಯಣ್ಣ, ಆದರ್ಶ ಶಿಕ್ಷಕ, ಶಾಲಾ ಕ್ರೀಡಾಕೂಟ ವಿಷಯದ ಮೇಲೆ ಹಾಗೂ 7ನೇ ತರಗತಿಗಳ ವಿದ್ಯಾರ್ಥಿಗಳಿಗೆ ವೀರರಾಣಿ ಕಿತ್ತೂರು ಚೆನ್ನಮ್ಮ, ಸರ್ ಎಂ ವಿಶ್ವೇಶ್ವರಯ್ಯ, ನನ್ನ ಜೀವನದ ಗುರಿ ಈ ವಿಷಯದ ಮೇಲೆ ಒಂದು ಪುಟ ಮೀರದಂತೆ ಪ್ರಬಂಧ ಬರೆಯಲು ತಿಳಿಸಲಾಗಿತ್ತು. ಪ್ರಬಂಧ   ಸ್ಪರ್ಧೆಯಲ್ಲಿ   ಆಶಾ ಪಾಟೀಲ, ನೇತ್ರಾ ಮುರಗಿ,   ಶ್ರೀಧರ   ದಿವಗೇಕರ ಇವರು ಬರೆದ ಪ್ರಬಂಧಗಳು   ಮೆಚ್ಚುಗೆ ಗಳಿಸಿದ್ದವು.

ಈ ವಿದ್ಯಾರ್ಥಿಗಳನ್ನು ಇತ್ತೀಚೆಗೆ ಜರುಗಿದ ಕಾರ್ಯಕ್ರಮದಲ್ಲಿ ಅಭಿನಂದಿಸಿ ಬಹುಮಾನಗಳನ್ನು ವಿತರಿಸಲಾಯಿತು. ಶಿಕ್ಷಕ ರಮೇಶ ಪತ್ತಾರ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದು, ವಿಶ್ವನಾಥ ಸವದಿ, ಅಪ್ಪಯ್ಯ   ಕೊಡೋಳಿ, ಬಸವಪ್ರಭು ಹಿರೇಮಠ, ಪ್ರಶಾಂತ ಕುಲಕರ್ಣಿ ಬಹುಮಾನಗಳನ್ನು ವಿತರಿಸಿದರು.

loading...

LEAVE A REPLY

Please enter your comment!
Please enter your name here